ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಕಾರ್ಯಾಗಾರ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸ್ವ-ಸಹಾಯ ಸಂಘಗಳು ಪ್ರಬಲ ಗ್ರಾಮೀಣ ಆರ್ಥಿಕ ಸಂಸ್ಥೆಗಳಾಗಿ ಮಾರ್ಪಡಿಸುವ ಅವಕಾಶವಿದ್ದು, ಬ್ಯಾಂಕ್ ಅಧಿಕಾರಿ ಗಳು ಸಹಕಾರ ಸಂಪೂರ್ಣ ನೀಡಬೇಕು ಎಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಯೋಜನಾ ನಿರ್ದೇಶಕಿ ಸುಜಾತಾ ಹೇಳಿದರು.

ನಗರದ ಯೂನಿಯನ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಬುಧವಾರ ಚಿಕ್ಕಮಗಳೂರು ಸಂಜೀವಿನಿ ಕೆಎಸ್ಆರ್‌ಎಲ್‌ಎಸ್‌ ಸಂಸ್ಥೆ, ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದಿಂದ ಆಯೋಜಿಸಿದ್ಧ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯ ಒದಗಿಸುವುದರಿಂದ ಮಹಿಳೆಯರು ಆರ್ಥಿಕವಾಗಿ ಸದೃಢವಾಗಲು ಅನುಕೂಲವಾಗುತ್ತಿದೆ. ಸರ್ಕಾರ ಸಾಕಷ್ಟು ಯೋಜನೆಗಳನ್ನು ಬ್ಯಾಂಕ್‌ ಮತ್ತು ಸಂಜೀವಿನಿ ಸ್ವ ಸಹಾಯ ಗುಂಪುಗಳ ಮೂಲಕ ಅನುಷ್ಟಾನಗೊಳಿಸುತ್ತಿದೆ ಎಂದು ತಿಳಿಸಿದರು.

ವಿಶೇಷವಾಗಿ ಗ್ರಾಮೀಣ ಮಹಿಳೆಯರಿಗೆ ಬ್ಯಾಂಕ್ ಖಾತೆ ಮಾಡಿಸುವುದು. ವ್ಯವಹಾರದ ರೀತಿ ರಿವಾಜು ಪರಿಚಯಿಸುವುದು ಹಾಗೂ ಸ್ವಸಹಾಯ ಸಂಘಗಳ ಮುಖೇನಾ ಸಾಲ ಪಡೆದು ಮರುಪಾವತಿಸುವ ಮಾರ್ಗಸೂಚಿ ಹೇಳಿಕೊಡಬೇಕು. ತಂಡ ವಾಗಿ ಮಹಿಳಾ ವರ್ಗ ಕೆಲಸ ಮಾಡಿದರೆ ಪ್ರತಿ ಯೊಬ್ಬರಿಗೂ ಅನುಕೂಲ ಎಂದರು.


ಸಂಪನ್ಮೂಲ ವ್ಯಕ್ತಿ ಕೇಶವಮೂರ್ತಿ ಮಾತನಾಡಿ, ಬ್ಯಾಂಕಿನ ಅಧಿಕಾರಿಗಳು ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಸರ್ಕಾರದ ಯೋಜನೆಗಳನ್ನು ಪರಿಚಯಿಸಲು ಈ ತರಬೇತಿ ಶಿಬಿರ ಪೂರಕ ಎಂದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ರವಿಚಂದ್ರ, ದೀಪಿಕಾ, ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ಪ್ರೀತೇಶ್, ಸಿಬ್ಬಂದಿಗಳಾದ ಐಶ್ಚರ್ಯ, ಋತು ಉಪಸ್ಥಿತರಿದ್ದರು.