ಕಾಂಗ್ರೆಸ್ ದೇಶದ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ: ಡಾ.ಧನಂಜಯ ಸರ್ಜಿ ಆರೋಪ

KannadaprabhaNewsNetwork |  
Published : Feb 07, 2026, 01:45 AM IST
6ಕಕಡಿಯು1. | Kannada Prabha

ಸಾರಾಂಶ

ಕಡೂರುಬಿಹಾರ ಚುನಾವಣೆ ಸೋತ ಬಳಿಕ ಕಾಂಗ್ರೆಸ್ ಪಕ್ಷ ಹತಾಶ ಮನೋಭಾವದಿಂದ ದೇಶದ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಆರೋಪಿಸಿದರು.

ಕಡೂರು ಬಿಜೆಪಿ ಮಂಡಲದಿಂದ ಶ್ರೀವೆಂಕಟೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿ ಪರಿಷ್ಕರಣೆ

ಕನ್ನಡಪ್ರಭ ವಾರ್ತೆ, ಕಡೂರು

ಬಿಹಾರ ಚುನಾವಣೆ ಸೋತ ಬಳಿಕ ಕಾಂಗ್ರೆಸ್ ಪಕ್ಷ ಹತಾಶ ಮನೋಭಾವದಿಂದ ದೇಶದ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಆರೋಪಿಸಿದರು.ಶುಕ್ರವಾರ ಕಡೂರು ಬಿಜೆಪಿ ಮಂಡಲದಿಂದ ಶ್ರೀವೆಂಕಟೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಬಿಎಲ್‌ಎ-2 ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಓಟ್ ಚೋರಿ ಅಭಿಯಾನ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿ ಜನರಿಂದ ತಿರಸ್ಕಾರಗೊಂಡಿದೆ. ಇದಕ್ಕೆ ಉದಾಹರಣೆ ಬಿಹಾರ ಚುನಾವಣೆ ಫಲಿತಾಂಶ, ನಿಜವಾದ ಓಟ್ ಚೋರಿ ನಡೆದಿದ್ದು ಕಾಂಗ್ರೆಸ್‌ನ ನಾಯಕರಿಂದ ಎಂದರೆ ತಪ್ಪಾಗಲಾರದು.

ಸ್ವಾತಂತ್ರ್ಯ ಬಂದಾಗ ಪ್ರಧಾನಮಂತ್ರಿ ಯಾರಾಗಬೇಕೆಂದಾಗ ಒಟ್ಟು 12 ಮತಗಳಲ್ಲಿ ಪಟೇಲರಿಗೆ ಅಧಿಕ ಮತಗಳು ಬರುತ್ತವೆ. ನೆಹರುಗೆ ಕೇವಲ 2 ಮತಗಳು. ಆದರೆ ಪ್ರಧಾನಿಯಾದದ್ದು ನೆಹರು. ಇಲ್ಲಿ ಓಟು ಚೋರಿ ಕಾಂಗ್ರೆಸ್‌ನ ನೆಹರು ಅವರಿಂದ ಮೊದಲು ಆರಂಭಗೊಂಡಿತು ಎಂದು ದೂರಿದರು.ಇದೇ ರೀತಿ 1975ರಲ್ಲಿ ಇಂದಿರಾಗಾಂಧಿ ಸಹ ಓಟ್ ಚೋರಿ ನಡೆಸಿ ಎಂಪಿಯಾಗಿ ಗೆದ್ದಿದ್ದ ಇಂದಿರಾಗಾಂಧಿಯನ್ನು ಅಮಾನತ್ತು ಮಾಡಲು ಅಲಹಾಬಾದ್ ನ್ಯಾಯಾಲಯ ಹೇಳಿತ್ತು. ನಂತರ ತುರ್ತು ಪರಿಸ್ಥಿತಿ ತಂದಿದ್ದು ಎಲ್ಲರಿಗೂ ಗೊತ್ತಿರುವ ವಿಷಯ ಎಂದರು.

ಸೋನಿಯಗಾಂಧಿ ಇಟಲಿ ದೇಶದ ಪ್ರಜೆಯಾಗಿ1980 ಭಾರತದ ಪ್ರಜೆಯಾಗದೆ ಓಟ್ ಮಾಡಿ, 1983ರಲ್ಲಿ ಭಾರತದ ಪ್ರಜೆಯಾದರು ಅದರೆ ಓಟ್ ಚೋರಿ ಮಾಡಿ ದಿಕ್ಕು ತಪ್ಪಿಸಿದ್ದು ಯಾರು? ಎಂದು ಪ್ರಶ್ನಿಸಿದರು.

ರಾಹುಲ್‌ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಭಾರತ್ ಜೋಡೋ ಮಾಡಿ ಭಾರತವನ್ನು ಜೋಡಿಸುತ್ತೇನೆ ಎಂದು ಭಾರತವನ್ನು ತುಂಡರಿಸಿದ್ದು. ಪಾಕಿಸ್ತಾನ, ಬಾಂಗ್ಲಾ ತುಂಡರಿಸಿ ಆರ್ಟಿಕಲ್‌ 370 ಜಾರಿಗೆ ತಂದು ಕಾಶ್ಮೀರವನ್ನು ತುಂಡರಿಸಿದ್ದು ಕಾಂಗ್ರೆಸ್. ಅದೆ ಆರ್ಟಿಕಲ್‌ 370 ತೆಗೆದು ಭಾರತವನ್ನು ಒಂದುಗೂಡಿಸಿದ್ದು ಬಿಜೆಪಿ ಎಂದರು. ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಕ್ಷೇತ್ರದ 253 ಬೂತ್‌ಗಳಲ್ಲಿ ಪಕ್ಷದಿಂದ ಬಿಎಲ್‌ಎ-2 ನಿಯೋಜನೆ ಮಾಡಲಾಗಿದೆ. ಮುಂಬರುವ ಗ್ರಾಪಂ, ತಾಪಂ, ಜಿ.ಪಂ. ಮತ್ತು ಪುರಸಭೆ ಚುನಾವಣೆಗಳ ಮತದಾನಕ್ಕೆ ಯಾರನ್ನು ಸೇರಿಸಬೇಕು ಯಾರನ್ನು ಹೊರಹಾಕಬೇಕು ಎಂಬ ನಿರ್ಣಯ ಮಾಡುವ ಅಧಿಕಾರ ನಿಮಗಿದೆ ನೀವು ಇರುವ ಬೂತ್ ಮತದಾರರ ಪಟ್ಟಿ ಪರಿಷ್ಕರಣೆ ಯಾಗಬೇಕು ಇಲ್ಲೇ ಹುಟ್ಟಿ ಬೆಳೆದವರು ಭಾರತೀಯರಾದ ನಾವುಗಳೇ ನೈಜ ಮತದಾರರಾಗಬೇಕು ಎಂದರು.ಸಂಘಟನಾತ್ಮಕವಾಗಿ ಪಕ್ಷ ಮುನ್ನೆಡೆಸಿದ್ದು ಬರುವ ದಿನಗಳಲ್ಲಿ ಕಾರ್ಯಕರ್ತರ ಪರವಾಗಿ ಇರುತ್ತೇನೆ ಕಡೂರು ಕ್ಷೇತ್ರವೇ ನನ್ನ ಕರ್ಮಭೂಮಿ ಎಂದರು. ಜಿಲ್ಲಾ ಪ್ರ.ಕಾರ್ಯದರ್ಶಿ ಡಾ.ಎ.ನರೇಂದ್ರ ಮಾತನಾಡಿ, ಚುನಾವಣಾ ಆಯೋಗ ವಿಶೇಷ ಪರಿಷ್ಕರಣೆ ಮಾಡಿ ಪಾರದರ್ಶಕತೆ ಯಿಂದ ಮತದಾರರ ಪಟ್ಟಿ ಇರುವಂತೆ ಸಹಕಾರ ನೀಡಿದೆ. ಅದೇ ರೀತಿ 12 ರಾಜ್ಯಗಳಲ್ಲಿ ಪ್ರಕ್ರಿಯೆ ಆರಂಭವಾಗಿದೆ ಜಿಲ್ಲೆಯಲ್ಲಿ ಕಡೂರು ಕ್ಷೇತ್ರದಲ್ಲಿ ಪರಿಷ್ಕರಣೆಗೆ ಉತ್ತಮ ವ್ಯವಸ್ಥೆ ಮಾಡಿಕೊಂಡಿರುವುದನ್ನು ಶ್ಲಾಘಿಸಿದರು.ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ದೇವಾನಂದ್ ವಹಿಸಿ ಮಾತನಾಡಿದರು. ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಮಂಡಲ ಉಸ್ತುವಾರಿ ರತನ್ ಕೆ.ಸಿ, ಕಡೂರು ಬಿಜೆಪಿ ನಿಯುಕ್ತ ಬಿಎಲ್‌ಎ-1 ಶಾಮಿಯಾನ ಚಂದ್ರು, ಶ್ರೀನಿವಾಸನಾಯ್ಕ ಹಾಗೂ 253 ಭೂತ್‌ಗಳಿಂದ ಬಂದಿದ್ದ ಬಿಎಲ್‌ಎ-2 ಕಾರ್ಯಕರ್ತರು ಸಭೆಯಲ್ಲಿ ಇದ್ದರು.

6ಕೆಕೆಡಿಯು1.

ಕಡೂರು ಬಿಜೆಪಿ ಮಂಡಲವು ಶ್ರೀವೆಂಕಟೇಶ್ವರ ಸಮುದಾಯ ಭವನದಲ್ಲಿ ಅಯೋಜಿಸಿದ್ದ ಮತಪಟ್ಟಿ ಪರಿಷ್ಕರಣೆಯ ಬಿಎಲ್‌ಎ-2 ಕಾರ್ಯಗಾರವನ್ನು ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಉದ್ಘಾಟಿಸಿದರು. ಬೆಳ್ಳಿಪ್ರಕಾಶ್, ನರೇಂದ್ರ, ಕಲ್ಮರುಡಪ್ಪ, ಶಾಮಿಯಾನ ಚಂದ್ರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ