ಕಾಂಗ್ರೆಸ್‌ನಿಂದ ಹಿಂದೂ ಸಮಾಜಕ್ಕೆ ಬೆಂಕಿ: ಶಾಸಕ ಚನ್ನಬಸಪ್ಪ

KannadaprabhaNewsNetwork |  
Published : Jun 04, 2025, 01:41 AM IST
ಪೊಟೋ: 03ಎಸ್‌ಎಂಜಿಕೆಪಿ06: ಎಸ್‌.ಎನ್‌.ಚನ್ನಬಸಪ್ಪ  | Kannada Prabha

ಸಾರಾಂಶ

ಸಂಘ ಪರಿವಾರದ ಪ್ರಮುಖರನ್ನು ಮಟ್ಟ ಹಾಕುವ ಹೇಯ ಮತ್ತು ವ್ಯರ್ಥ ಪ್ರಯತ್ನ ಮುಂದುವರಿದೆ. ಮತ್ತೊಮ್ಮೆ ಕಾಂಗ್ರೆಸ್‌ನಿಂದ ಓಲೈಕೆಯ ಪಿತಾಮಹ ‘ಖಾನ್’ಗ್ರೆಸ್! ತನ್ನ ‘ಖಾನ್’ದಾನಿನ ಬೆಂಕಿ ಆರಿಸಲು ನಮ್ಮ ಹಿಂದೂ ಸಮಾಜಕ್ಕೆ ಬೆಂಕಿ ಹಚ್ಚುತ್ತಿರುವುದು ರಾಜಕೀಯ ದುರುದ್ದೇಶಗಳ ಪ್ರತಿಬಿಂಬ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂಘ ಪರಿವಾರದ ಪ್ರಮುಖರನ್ನು ಮಟ್ಟ ಹಾಕುವ ಹೇಯ ಮತ್ತು ವ್ಯರ್ಥ ಪ್ರಯತ್ನ ಮುಂದುವರಿದೆ. ಮತ್ತೊಮ್ಮೆ ಕಾಂಗ್ರೆಸ್‌ನಿಂದ ಓಲೈಕೆಯ ಪಿತಾಮಹ ‘ಖಾನ್’ಗ್ರೆಸ್! ತನ್ನ ‘ಖಾನ್’ದಾನಿನ ಬೆಂಕಿ ಆರಿಸಲು ನಮ್ಮ ಹಿಂದೂ ಸಮಾಜಕ್ಕೆ ಬೆಂಕಿ ಹಚ್ಚುತ್ತಿರುವುದು ರಾಜಕೀಯ ದುರುದ್ದೇಶಗಳ ಪ್ರತಿಬಿಂಬ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಅವರು, ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಇತ್ತೀಚೆಗೆ ನಡೆದ ಸರಣಿ ಹತ್ಯಾಕಾಂಡಗಳನ್ನು ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿ ತನ್ನ ವೋಟ್ ಬ್ಯಾಂಕಿನ ಆಕ್ರೋಶವನ್ನು ನಿರ್ವಹಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಸಂಘ ಪರಿವಾರ ಮತ್ತು ಹಿಂದೂ ಸಂಘಟನೆಗಳ ಪ್ರಮುಖರ ಮೇಲೆ ಕೋಮುವಾದಿಗಳು ಎಂಬ ಪಟ್ಟ ಕಟ್ಟಿ ಅವರ ಮೇಲೆ ನಿರಾಧಾರ ಆರೋಪಗಳನ್ನು ಹೊರಿಸುತ್ತಿರುವುದು ರಾಜಕೀಯ ಪ್ರೇರಿತ ನಡೆ ಎಂದಿದ್ದಾರೆ.

ಅಧಿಕಾರವನ್ನು ಹಾಗೂ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ಹಿಂದೂ ಮುಖಂಡರ ಹಳೆಯ ಭಾಷಣಗಳ ವಿರುದ್ಧ ಪ್ರಕರಣ ದಾಖಲಿಸಿರುವುದು ತುಘಲಕ್ ಆಡಳಿತಕ್ಕೆ ಉದಾಹರಣೆಯಾಗಿದೆ.

ಆರ್‌ಎಸ್‌ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಅವರ ದಶಕಗಳ ಹಿಂದಿನ ಭಾಷಣಗಳನ್ನು ಉಲ್ಲೇಖಿಸಿ ಎಫ್‌ಐಆರ್ ದಾಖಲಿಸಿರುವುದು, ಮತ್ತು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಗಡಿಪಾರು ನೋಟಿಸ್ ನೀಡಿರುವುದು, ಸ್ಥಳೀಯ ಶಾಸಕರ, ಸಚಿವರ ಓಲೈಕೆಯ ರಾಜಕೀಯ ಒತ್ತಡಕ್ಕೆ ಮಣಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.

ಇದೆಲ್ಲದರ ಮಧ್ಯೆ, ಸುಹಾಸ್ ಶೆಟ್ಟಿ ಅವರ ಹತ್ಯೆಯಾದಾಗ ನಡೆಯದ ತನಿಖೆಗಳು, ಅಬ್ದುಲ್ ರಹೀಮ್ ಕೊಲೆಯಾದಾಗ ರಾತೋರಾತ್ರಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮನೆಗಳಲ್ಲಿ ತನಿಖೆಗಳು ನಡೆಯುತ್ತಿದೆ. ಇದು ಕೇವಲ ಹಿಂದೂ ಸಂಘಟನೆಗಳ ಪ್ರಮುಖರ, ಕಾರ್ಯಕರ್ತರ ವಿರುದ್ಧ ನಡೆಯುತ್ತಿರುವುದು ಸಂವಿಧಾನಬದ್ಧ ತನಿಖೆಗಳಲ್ಲ, ಬದಲಾಗಿ ಮುಸಲ್ಮಾನರ ತೃಪ್ತಿಗಾಗಿ ನಡೆಯುತ್ತಿರುವುದು ಎಂದಿದ್ದಾರೆ.

ನಮ್ಮ ಸಂಘ ಪರಿವಾರದ ಪ್ರಮುಖರು ಮತ್ತು ಹಿಂದೂ ಸಮಾಜದ ನಾಯಕರನ್ನು ಗುರಿಯಾಗಿಸಿ ದೌರ್ಜನ್ಯ ನಡೆಸುವುದು ದೇಶದ ಸಾಂವಿಧಾನಿಕ ಬುನಾದಿಗೆ ಮಾಡುವ ಅಪಮಾನ. ರಾಜಕೀಯ ಹಾಗೂ ಓಲೈಕೆಗಾಗಿ ಹಿಂದೂ ಮುಖಂಡರನ್ನು ಗುರಿಯಾಗಿಸುವ ಈ ಕ್ರಮಗಳು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಆಗುವ ಎಲ್ಲಾ ಅನಾಹುತಕ್ಕೆ ನಿಮ್ಮ ಓಲೈಕೆಯೇ ಕಾರಣವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ