6 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಯದುವೀರ್ ಲೀಡ್

KannadaprabhaNewsNetwork |  
Published : Jun 05, 2024, 12:30 AM IST

ಸಾರಾಂಶ

ಯದುವೀರ್ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಅವರು 6,56,241 ಮತಗಳನ್ನು ಪಡೆದಿದ್ದು, 1,39,262 ಮತಗಳ ಅಂತರದೊಂದಿಗೆ ಯದುವೀರ್ ಗೆಲುವು ದಾಖಲಿಸಿದರು.

ಬಿ. ಶೇಖರ್ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು 7,95,503 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.

ಯದುವೀರ್ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಅವರು 6,56,241 ಮತಗಳನ್ನು ಪಡೆದಿದ್ದು, 1,39,262 ಮತಗಳ ಅಂತರದೊಂದಿಗೆ ಯದುವೀರ್ ಗೆಲುವು ದಾಖಲಿಸಿದರು.

ಇನ್ನೂ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಪಿರಿಯಾಪಟ್ಟಣ ಮತ್ತು ನರಸಿಂಹರಾಜ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಪಡೆದಿದೆ.

ನರಸಿಂಹರಾಜ ಕ್ಷೇತ್ರದಲ್ಲಿ

ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ತನ್ವೀರ್ ಸೇಠ್ ಪ್ರತಿಧಿಸುವ ನರಸಿಂಹರಾಜ, ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಪ್ರತಿನಿಧಿಸುವ ಪಿರಿಯಾಪಟ್ಟಣದಲ್ಲಿ ಮಾತ್ರ ಕಾಂಗ್ರೆಸ್ಗೆ ಲೀಡ್ ಸಿಕ್ಕಿದೆ.

ಬಿಜೆಪಿಯ ಟಿ.ಎಸ್. ಶ್ರೀವತ್ಸ- ಕೃಷ್ಣರಾಜ, ಜೆಡಿಎಸ್ನ ಜಿ.ಟಿ. ದೇವೇಗೌಡ- ಚಾಮುಂಡೇಶ್ವರಿ, ಜಿ.ಡಿ. ಹರೀಶ್ಗೌಡ- ಹುಣಸೂರು ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗೆ ಲೀಡ್ ಕೊಡಿಸಿದ್ದಾರೆ.

ಕಾಂಗ್ರೆಸ್ನ ಕೆ. ಹರೀಶ್ ಗೌಡ- ಚಾಮರಾಜ, ಡಾ.ಮಂಥರ್ಗೌಡ- ಮಡಿಕೇರಿ, ಎ.ಎಸ್. ಪೊನ್ನಣ್ಣ- ವೀರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ದೊರೆತಿದೆ. ಕ್ರಮವಾಗಿ ಮಾಜಿ ಶಾಸಕರಾದ ಎಲ್. ನಾಗೇಂದ್ರ, ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಅವರು ಮುಖಂಡರು, ಕಾರ್ಯಕರ್ತರೊಡಗೂಡಿ ಮೈತ್ರಿಕೂಟಕ್ಕೆ ಲೀಡ್ ಕೊಡಿಸುವ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆದ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸೋತಿರುವ ಮಾಜಿ ಶಾಸಕ ಎಂ.ಕೆ. ಸೋಮಶೇಖರ್- ಕೃಷ್ಣರಾಜ, ಸಿದ್ದೇಗೌಡ- ಚಾಮುಂಡೇಶ್ವರಿ, ಮಾಜಿ ಶಾಸಕ ಎಚ್.ಪಿ. ಮಂಜುನಾಥ್- ಹುಣಸೂರು ಕಾಂಗ್ರೆಸ್ಗೆ ಲೀಡ್ ಕೊಡಿಸಲಾಗಿಲ್ಲ.

----

ವಿಧಾನಸಭಾ ಕ್ಷೇತ್ರವಾರು ಮತಗಳಿಕೆ ಹೀಗಿದೆ...

1. ಮಡಿಕೇರಿ- ಬಿಜೆಪಿ 108402, ಕಾಂಗ್ರೆಸ್ 66994, ಬಿಜೆಪಿ ಲೀಡ್ 41408

2. ವಿರಾಜಪೇಟೆ- ಬಿಜೆಪಿ 99804, ಕಾಂಗ್ರೆಸ್ 67353, ಬಿಜೆಪಿ ಲೀಡ್ 32451

3. ಪಿರಿಯಾಪಟ್ಟಣ- ಬಿಜೆಪಿ 71237, ಕಾಂಗ್ರೆಸ್ 82981, ಕಾಂಗ್ರೆಸ್ ಲೀಡ್ 11744

4. ಹುಣಸೂರು- ಬಿಜೆಪಿ 95266, ಕಾಂಗ್ರೆಸ್ 92198, ಬಿಜೆಪಿ ಲೀಡ್ 3068

5. ಚಾಮುಂಡೇಶ್ವರಿ- ಬಿಜೆಪಿ 143327, ಕಾಂಗ್ರೆಸ್ 106083, ಬಿಜೆಪಿ ಲೀಡ್ 37244

6. ಕೃಷ್ಣರಾಜ- ಬಿಜೆಪಿ 104596, ಕಾಂಗ್ರೆಸ್ 49083, ಬಿಜೆಪಿ ಲೀಡ್ 56397

7. ಚಾಮರಾಜ- ಬಿಜೆಪಿ 105480, ಕಾಂಗ್ರೆಸ್ 49083, ಬಿಜೆಪಿ ಲೀಡ್ 56397

8. ನರಸಿಂಹರಾಜ- ಬಿಜೆಪಿ 62279, ಕಾಂಗ್ರೆಸ್ 138876, ಕಾಂಗ್ರೆಸ್ ಲೀಡ್ 76597

ಅಂಚೆ ಮತಗಳು- ಬಿಜೆಪಿ 5112, ಕಾಂಗ್ರೆಸ್ 2502, ಬಿಜೆಪಿ ಲೀಡ್ 2610

ಒಟ್ಟು ಬಿಜೆಪಿ 795503, ಕಾಂಗ್ರೆಸ್ 656241, ಬಿಜೆಪಿ ಲೀಡ್ 139262

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!