ಚೆಂಬಿನ ಜಾಹೀರಾತಿಗೆ ತಕ್ಕಂತೆ ಕಾಂಗ್ರೆಸ್ ನಡೆದುಕೊಂಡಿದೆ
ಕಾಂಗ್ರೆಸ್ ಘೋಷಣಾ ಪತ್ರ (ಪ್ರಣಾಳಿಕೆ) ಸಿದ್ಧಪಡಿಸಿದ್ದು ಮಹಮದ್ ಆಲಿ ಜಿನ್ನಾ ಸಹವರ್ತಿಗಳು ಎಂದು ಮಾಜಿ ಸಚಿವ ಸಿ.ಟಿ. ರವಿ ಟೀಕಿಸಿದ್ದಾರೆ.
ತಾಲಿಬಾನಿಗಳಿಗೆ ಸಂತೋಷಪಡಿಸುವ ಯೋಚನೆ ಮತ್ತು ಚಿಂತನೆಗಳು ಈ ಘೋಷಣಾಪತ್ರದಲ್ಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಸೋಲು ಖಚಿತ, ಹಾಗಾಗಿ ಹತಾಶರಾಗಿ ಚೊಂಬಿನ ಜಾಹೀರಾತು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ನಡೆ ನೋಡಿದರೆ ಜಾಹೀರಾತಿನ ತಕ್ಕಂತೆ ಅವರು ನಡೆದುಕೊಳ್ಳುತ್ತಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ರು ರಾಜ್ಯದ ಜನರಿಗೆ ಚೆಂಬು ಕೊಟ್ರು, ಹಾಲು ಉತ್ಪಾದಕರ ಸಬ್ಸಿಡಿ ಹಣ ನೀಡಿಲ್ಲ. ಅಬಕಾರಿ ಸುಂಕ ಹೆಚ್ಚಳ ಮಾಡಿದ್ರು, ಆಸ್ತಿ ತೆರಿಗೆ ಹೆಚ್ಚಿಸಿದ್ರು, ಸಂವಿಧಾನ ದುರ್ಬಳಕೆ ಮಾಡಿಕೊಂಡ್ರು, ಮೀಸಲಾತಿ ವಿರೋಧಿಗಳೆಂದು ಆರೋಪಗಳ ಸುರಿಮಳೆ ಸುರಿಸಿದರು.
ಈ ದೇಶದಲ್ಲಿ ಸ್ವಾತಂತ್ರ್ಯ ನಂತರ ಅತಿ ಹೆಚ್ಚು ವರ್ಷ ಆಡಳಿತ ನಡೆಸಿರೋದು ಕಾಂಗ್ರೆಸ್ ಪಕ್ಷ. ಜನರ ಬದುಕು ಬದಲಾಗಲಿಲ್ಲ, ಚಿಂತನೆಯೂ ಇಲ್ಲ ಆಸೆ ತೋರಿಸಿ ಮತ ಪಡೆದ ವಂಚನೆಯ ತಂತ್ರ ಅವರ ಘೋಷಣಾ ಪತ್ರದಲ್ಲಿ ಅಡಗಿದೆ. ಗರಿಬೀ ಹಠಾವೋ ಅಂದ್ರು, ಗರಿಬೀ ಹಠಾವೋ ಆಗಿದ್ದು ಕಾಂಗ್ರೆಸ್ ಪಕ್ಷದ ನಾಯಕರದ್ದು, ಆ ಪಕ್ಷದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಅಡಗಿದೆ. ಜಾತಿಯತೆ ವ್ಯವಸ್ಥೆಯನ್ನು ಬಲವಾಗಿ ತೂರಿದ್ದರು ಎಂದು ಹೇಳಿದರು.
----
ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರವನ್ನು ಕಡೆಗಣಿಸಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿಯವರೇ ಗೋ ಬ್ಯಾಕ್ ಶೋಭಾ ಎಂದು ಕರೆ ನೀಡಿದ್ದರು. ಇದು, ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್ ಆರೋಪಿಸಿದ್ದಾರೆ.
ಕಾಫಿ ಬೆಳೆಗಾರರಿಗೆ ಕಂದಾಯ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಕೆಲಸ ಕಾಂಗ್ರೆಸ್ ಮಾಡಿತು. ಆದರೆ, ಕೇಂದ್ರ ಬಿಜೆಪಿ ಸರ್ಕಾರ ಸರ್ಫೇಸಿ ಕಾಯ್ದೆ ಮೂಲಕ ಭೂಮಿಯನ್ನು ಕಿತ್ತುಕೊಳ್ಳುವ ಕೆಲಸ ಮಾಡ್ತಾ ಇದೆ ಎಂದ ಅವರು, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 25 ವರ್ಷಗಳಿಂದ ಬಿಜೆಪಿ ಪ್ರಾತಿನಿಧ್ಯ ಇತ್ತು. ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಿಲ್ಲ ಎಂದರು.
ಸುದ್ಧಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜೇಗೌಡ, ರೂಬಿನ್ ಮೋಸಸ್, ಬಿ.ಎಚ್. ಹರೀಶ್, ತನೋಜ್ ನಾಯ್ಡು, ಹಿರೇಮಗಳೂರು ರಾಮಚಂದ್ರ ಇದ್ದರು.ಪೋಟೋ ಫೈಲ್ ನೇಮ್ 24 ಕೆಸಿಕೆಎಂ 2