ಚುನಾವಣೆಯನ್ನೇ ಅಣಕಿಸಿದ ಕಾಂಗ್ರೆಸ್‌ ಗೆ ಬಿಹಾರದಲ್ಲಿ ಉತ್ತರ

KannadaprabhaNewsNetwork |  
Published : Nov 16, 2025, 01:15 AM IST
23 | Kannada Prabha

ಸಾರಾಂಶ

ಕರ್ನಾಟಕ ವಿಧಾನಸಭಾ ಚುನಾವಣೆ ಸೇರಿದಂತೆ ಕಾಂಗ್ರೆಸ್ ಗೆಲುವು ಸಾಧಿಸಿದ ವೇಳೆ ಯಾವುದೇ ಚಕಾರ ಎತ್ತುವುದಿಲ್ಲ.

ಫೋಟೋ - 15ಎಂವೈಎಸ್‌ 23ಕನ್ನಡಪ್ರಭ ವಾರ್ತೆ ಮೈಸೂರುಪ್ರಜಾಪ್ರಭುತ್ವ ವ್ಯವಸ್ಥೆಯ ಆತ್ಮವಾಗಿರುವ ಚುನಾವಣಾ ಪ್ರಕ್ರಿಯೆಯನ್ನೇ ಅಣಕಿಸುವ ಕಾಂಗ್ರೆಸ್ ನ ಹಲವು ನಿರಾಧಾರ ಆರೋಪಗಳಿಗೆ ಬಿಹಾರದ ಪ್ರಜ್ಞಾವಂತ ಮತದಾರರು ಉತ್ತರ ನೀಡಿದ್ದಾರೆ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.ಕರ್ನಾಟಕ ವಿಧಾನಸಭಾ ಚುನಾವಣೆ ಸೇರಿದಂತೆ ಕಾಂಗ್ರೆಸ್ ಗೆಲುವು ಸಾಧಿಸಿದ ವೇಳೆ ಯಾವುದೇ ಚಕಾರ ಎತ್ತುವುದಿಲ್ಲ. ಆದರೆ ತಾವು ಚುನಾವಣೆಯಲ್ಲಿ ಸೋತಾಗ ಇವಿಎಂ ಯಂತ್ರ ಸರಿಯಿಲ್ಲ, ಮತಗಳ್ಳತನವಾಗಿದೆ, ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಾಗಿದೆ ಎಂಬ ನಿರಾಧಾರ ಆರೋಪ ಮಾಡಲಾಗುತ್ತಿದೆ. ಇದೆಲ್ಲಾ ಕಾಂಗ್ರೆಸ್ ನ ಸುಳ್ಳಿನ ಸರಮಾಲೆ ಎಂಬುದನ್ನು ಬಿಹಾರದ ಜನ ಬಿಜೆಪಿ ಒಳಗೊಂಡ ಎನ್.ಡಿ.ಎ ಮೈತ್ರಿಕೂಟಕ್ಕೆ ಐತಿಹಾಸಿಕ ಗೆಲುವು ನೀಡುವ ಮೂಲಕ ಸಾಬೀತು ಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.ಮತಕಳ್ಳತನದ ಆರೋಪ ಮಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ. ಇಂತಹ ಅನೈತಿಕ ಮಾರ್ಗದಲ್ಲಿ ರಾಜಕೀಯ ನಡೆಸುವ ಹೀನ ಸ್ಥಿತಿ ಬಿಜೆಪಿಗಿಲ್ಲ. ಇದೆಲ್ಲವೂ ಕಾಂಗ್ರೆಸ್ ಸ್ವಯಂ ಅನುಭವದಿಂದಲೇ ಆರೋಪ ಮಾಡುತ್ತಿರಬಹುದು. ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲೇ ಚುನಾವಣೆ ವೇಳೆ ಸಾಕಷ್ಟು ಅಕ್ರಮ ನಡೆದಿವೆ ಎಂದು ಸಾರ್ವಜನಿಕವಾಗಿ ಚರ್ಚೆಯಾಗುತ್ತಲೇ ಇದೆ. 2018ರಲ್ಲಿ ಕ್ಷೇತ್ರದ ಮತದಾರರ ಸಂಖ್ಯೆ 2,00,300 ಇತ್ತು.2023 ರಲ್ಲಿ 3,10,000ಕ್ಕೆ ಹೆಚ್ಚಿದೆ. 1 ಲಕ್ಷಕ್ಕೂ ಮತಗಳು ಹೆಚ್ಚಾಗಿವೆ. ಆದರೆ ಕ್ಷೇತ್ರದಲ್ಲಿ ಬಡಾವಣೆಗಳ ಸಂಖ್ಯೆಗಳೇನು ಹೆಚ್ಚಾಗಿಲ್ಲ. ಖಾಲಿ ನಿವೇಶನಗಳ ವಿಳಾಸವನ್ನೂ ನೀಡಿ, ಹೊರಗಿನವರಿಗೆ ಮತದಾರರ ಗುರುತಿನ ಚೀಟಿ ಕೊಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ