ಲೋಕಾಯುಕ್ತ ಕಚೇರಿಗೆ ತೆರಳಿ ಮಾಹಿತಿ ನೀಡಿದ ಸಂಸದ ಕುಮಾರ್ ನಾಯ್ಕ್

KannadaprabhaNewsNetwork |  
Published : Oct 20, 2024, 01:46 AM IST
36 | Kannada Prabha

ಸಾರಾಂಶ

ಸುಮಾರು ಮೂರು ತಾಸು ವಿಚಾರಣೆ ಎದರಿಸಿದರು

ಮೈಸೂರುರಾಯಚೂರು ಕ್ಷೇತ್ರದ ಕಾಂಗ್ರೆಸ್ ಸಂಸದ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಜಿ. ಕುಮಾರ್ ನಾಯ್ಕ್ ಅವರು ಮೈಸೂರಿನ ಲೋಕಾಯುಕ್ತ ಎಸ್ಪಿ ಕಚೇರಿಗೆ ಶನಿವಾರ ಹಾಜರಾಗಿ, ಮುಡಾ ನಿವೇಶನ ಹಂಚಿಕೆ ಸಂಬಂಧ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಮುಡಾ ನಿವೇಶನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಲೋಕಾಯುಕ್ತ ಪೊಲೀಸರು, ಮೈಸೂರಿನ ಆಗಿನ ಜಿಲ್ಲಾಧಿಕಾರಿ ಜಿ. ಕುಮಾರ್ ನಾಯ್ಕ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿತ್ತು. ಲೋಕಾಯುಕ್ತ ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾದ ಜಿ. ಕುಮಾರ್ ನಾಯ್ಕ್ ಅವರು, ಸುಮಾರು ಮೂರು ತಾಸು ವಿಚಾರಣೆ ಎದರಿಸಿದರು. ಕೆಸರೆಯ ವಿವಾದಿತ ಜಮೀನು ಭೂ ಪರಿವರ್ತನೆ ಮಾಡಿದ ಸಂಬಂಧ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ ನೇತೃತ್ವದ ತಂಡವು ಕೇಳಿದ ಪ್ರಶ್ನೆಗಳಿಗೆ ಜಿ. ಕುಮಾರ್ ನಾಯ್ಕ್ ಉತ್ತರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯ ವ್ಯವಸ್ಥೆಯೇ ರಾಜ್ಯದಲ್ಲಿ ಸ್ತಬ್ಧವಾಗುವ ಆತಂಕ
ರಾಜ್ಯಕ್ಕೂ ತಟ್ಟಿದ ಮಧ್ಯಪ್ರಾಚ್ಯದ ಯುದ್ಧದ ಬಿಕ್ಕಟ್ಟು : ಲಾರಿ ಮಾಲಿಕರಿಗೆ ಸಂಕಷ್ಟ