ಕಾಂಗ್ರೆಸ್ ಪಕ್ಷ ದಲಿತ ಸಮುದಾಯಕ್ಕೆ ನ್ಯಾಯ ಕೊಡುತ್ತಿಲ್ಲ

KannadaprabhaNewsNetwork |  
Published : Dec 10, 2025, 12:45 AM IST
9ಎಚ್ಎಸ್ಎನ್17 :  | Kannada Prabha

ಸಾರಾಂಶ

ದಲಿತ ಹೋರಾಟಗಾರರು, ಕರ್ನಾಟಕದಲ್ಲಿ ದಲಿತ ಸಿಎಂ ಮಾಡುವ ಮನಸ್ಸು ಕಾಂಗ್ರೆಸ್ ನಾಯಕರಿಗೆ ಇಲ್ಲ. ರಾಜ್ಯದಲ್ಲಿರುವ 36 ದಲಿತ ಶಾಸಕರು ಮೌನ ವಹಿಸಿರುವುದಕ್ಕೆ ಪ್ರಶ್ನೆ ಮಾಡಿ, ಈಗಲೇ ಸರಿಯಾದ ಸಮಯ, ದಲಿತರಿಗೆ ಸಿಎಂ ಸ್ಥಾನ ನೀಡಲು ಹೋರಾಡಬೇಕು. ಡಿಕೆ ಶಿವಕುಮಾರ್ ಅವರಿಗೆ ಒಂದು ಅವಧಿ, ನಂತರ ದಲಿತರಿಗೆ ಒಂದು ಅವಧಿ ಸಿಎಂ ಸ್ಥಾನ ನೀಡಬೇಕು ಎಂದ ಅವರು, ಅದೂ ಇಲ್ಲ, ಇದೂ ಇಲ್ಲ ಅಂದರೆ ರಾಜ್ಯದಾದ್ಯಂತ ದಲಿತ ಪರ ಹೋರಾಟಗಾರರು ಒಗ್ಗೂಡಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬೇಲೂರು

ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ದಲಿತ ಪರ ಹೋರಾಟಗಾರರು ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ತಾಲೂಕು ಪಂಚಾಯತಿ ಮಾಜಿ ಸದಸ್ಯ ಮಂಜುನಾಥ್ ಮಾತನಾಡಿ, ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಸದ್ದಿಲ್ಲದೆ ಮುಂದುವರಿದಿರುವ ಸಂದರ್ಭದಲ್ಲಿ, ದಲಿತ ಸಮುದಾಯದ ನಾಯಕರು ಮತ್ತು ಹೋರಾಟಗಾರರು ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದೆರಡು ತಿಂಗಳಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಪ್ರಚಾರ ಹೆಚ್ಚಾಗಿದ್ದರೂ, ಕಾಂಗ್ರೆಸ್ ಪಕ್ಷ ದಲಿತ ಸಮುದಾಯಕ್ಕೆ ನ್ಯಾಯ ಕೊಡುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕೆಲವೇ ನಾಯಕರಿಗೆ ಗುತ್ತಿಗೆ ನೀಡಿರುವಂತಾಗಿದೆ ಎಂದು ಟೀಕಿಸಿದರು.

ದಲಿತ ಹೋರಾಟಗಾರರು, ಕರ್ನಾಟಕದಲ್ಲಿ ದಲಿತ ಸಿಎಂ ಮಾಡುವ ಮನಸ್ಸು ಕಾಂಗ್ರೆಸ್ ನಾಯಕರಿಗೆ ಇಲ್ಲ. ರಾಜ್ಯದಲ್ಲಿರುವ 36 ದಲಿತ ಶಾಸಕರು ಮೌನ ವಹಿಸಿರುವುದಕ್ಕೆ ಪ್ರಶ್ನೆ ಮಾಡಿ, ಈಗಲೇ ಸರಿಯಾದ ಸಮಯ, ದಲಿತರಿಗೆ ಸಿಎಂ ಸ್ಥಾನ ನೀಡಲು ಹೋರಾಡಬೇಕು. ಡಿಕೆ ಶಿವಕುಮಾರ್ ಅವರಿಗೆ ಒಂದು ಅವಧಿ, ನಂತರ ದಲಿತರಿಗೆ ಒಂದು ಅವಧಿ ಸಿಎಂ ಸ್ಥಾನ ನೀಡಬೇಕು ಎಂದ ಅವರು, ಅದೂ ಇಲ್ಲ, ಇದೂ ಇಲ್ಲ ಅಂದರೆ ರಾಜ್ಯದಾದ್ಯಂತ ದಲಿತ ಪರ ಹೋರಾಟಗಾರರು ಒಗ್ಗೂಡಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕೇವಲ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ಸುತ್ತಲೇ ಮುಖ್ಯಮಂತ್ರಿ ಹುದ್ದೆ ಸೀಮಿತಗೊಂಡಂತೆ ವರ್ತಿಸುತ್ತಿದ್ದಾರೆ. ದಲಿತರಿಗೆ ಅವಕಾಶ ಕಡ್ಡಾಯ ಎಂಬ ಧ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ರಾಜ್ಯದ ಎಲ್ಲಾ ದಲಿತ ಒಕ್ಕೂಟಗಳ ನಾಯಕರು ಒಟ್ಟಾಗಿ ಬಂದು ಹೋರಾಡಬೇಕು. ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಆಗಲು ಜಿ. ಪರಮೇಶ್ವರ್‌ ಅವರಂತಹ ನಾಯಕರು ಸಮರ್ಥರಾಗಿದ್ದಾರೆ. ಜಿ. ಪರಮೇಶ್ವರ್ ಅವರು ಸಿಎಂ ಆಗಲು ಉಳಿದ ದಲಿತ ಶಾಸಕರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ದೇವಿಹಳ್ಳಿ ಕುಮಾರ್‌, ಎಂ.ಜಿ ವೆಂಕಟೇ‌ಶ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್‌ ಆರ್ಭಟಕ್ಕೆ ಮದ್ಯ ಮಾರಾಟವೇ ಕುಸಿತ!
24,300 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅಸ್ತು : ಸಿದ್ದರಾಮಯ್ಯ