ಬ್ಯಾಡಗಿ: ಶಾಮನೂರು ಶಿವಶಂಕರಪ್ಪರವರ ನಿಧನದಿಂದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಕಾಂಗ್ರೆಸ್ ಪಕ್ಷವು ಭೀಷ್ಮನನ್ನು ಕಳೆದುಕೊಂಡಂತಾಗಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಬಸವರಾಜ ಶಿವಣ್ಣವರ ಕಂಬನಿ ಮಿಡಿದರು.
ದಾವಣಗೆರೆಯ ‘ಧಣಿ’ ಎಂದೇ ಕರೆಸಿಕೊಂಡಿದ್ದ ಶಿವಶಂಕರಪ್ಪನವರು ಅಖಿಲ ಭಾರತ ವೀರಶೈವ–ಲಿಂಗಾಯತ ಸಮಾಜ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ದಾವಣಗೆರೆ ನಗರವನ್ನು ಶಿಕ್ಷಣದ ಕಾಶಿಯನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶಿಕ್ಷಣವಲ್ಲದೆ ಔದ್ಯೋಗಿಕ ಕ್ರಾಂತಿಯ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿ ಉದ್ಯೋಗದಾತರೂ ಕೂಡಾ ಆಗಿದ್ದಾರೆ ಎಂದರು.
ವೀರಶೈವ ಸಮುದಾಯದ ಧ್ವನಿ: ರಾಜಕೀಯವಾಗಿ ಅಲ್ಲದೇ ಸಾಮಾಜಿಕವಾಗಿ ತಮ್ಮದೇ ಆದ ಸೇವೆಯ ಮೂಲಕ ವಿಶೇಷ ಛಾಪು ಮೂಡಿಸಿದ್ದ ಶಿವಶಂಕರಪ್ಪನವರು ಅಖಿಲ ಭಾರತ ವೀರಶೈವ/ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಸಮುದಾಯದ ಪ್ರಬಲ ಧ್ವನಿ ಹಾಗೂ ಶಕ್ತಿಯಾಗಿದ್ದಾಗಿ ತಿಳಿಸಿದರು.ಕಾಂಗ್ರೆಸ್ಪ ಪಕ್ಷದ ಭೀಷ್ಮ ಇನ್ನಿಲ್ಲ: ಬಾಪೂಜಿ ವಿದ್ಯಾಸಂಸ್ಥೆಗಳ ಮೂಲಕ ವೈದ್ಯಕೀಯ, ದಂತ, ಎಂಜಿನಿಯರಿಂಗ್ ಸೇರಿದಂತೆ ಅನೇಕ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳನ್ನು ನಿರ್ಮಿಸಿ, ದಾವಣಗೆರೆಯನ್ನು ವಿದ್ಯಾನಗರಿಯಾಗಿ ರೂಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.