ಕಾಂಗ್ರೆಸ್‌ ಪಕ್ಷ ಸಂಘಟನೆ ಮಾಡಿ: ದೀಪಿಕಾ ರೆಡ್ಡಿ

KannadaprabhaNewsNetwork |  
Published : Jul 11, 2025, 12:32 AM IST
ಎಚ್೧೦.೭-ಡಿಎನ್‌ಡಿ೧: ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ದೀಪಿಕಾ ರೆಡ್ಡಿ ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಕಾಂಗ್ರೆಸ್‌ ಪಕ್ಷ ಸಮಾನತೆ, ಸೌಹಾರ್ದ, ಶಾಂತಿ ಸಂದೇಶ ಸಾರುವ ಪಕ್ಷವಾಗಿದೆ. ಪಕ್ಷ ಸಂಘಟನೆ ಮಾಡಿ

ದಾಂಡೇಲಿ: ಕಾಂಗ್ರೆಸ್‌ ಪಕ್ಷ ಸಮಾನತೆ, ಸೌಹಾರ್ದ, ಶಾಂತಿ ಸಂದೇಶ ಸಾರುವ ಪಕ್ಷವಾಗಿದೆ. ಪಕ್ಷ ಸಂಘಟನೆ ಮಾಡಿ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಗುರುವಾರ ನಡೆದ ಜಿಲ್ಲೆಯ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಸಂಘಟನೆಯಲ್ಲಿ ಯುವ ಜನತೆಯ ಪಾತ್ರ ಬಹು ಮುಖ್ಯವಾಗಿದೆ. ರಾಜ್ಯದಲ್ಲಿ ಯುವ ಕಾಂಗ್ರೆಸ್ ಬಲವರ್ಧನೆಗೆ ಯುವ ಕಾಂಗ್ರೆಸ್ ಸಮಿತಿಯು ಮೊದಲ ಆದ್ಯತೆ ನೀಡಿದೆ ಎಂದರು.

ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಮಾತನಾಡಿ, ತಾನು ಕೂಡ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವನು. ಪಕ್ಷ ಸಂಘಟನೆಗಾಗಿ ಪ್ರಾಮಾಣಿಕವಾಗಿ ಕೆಳಮಟ್ಟದಿಂದ ದುಡಿದವನು ಪಕ್ಷದ ನಾಯಕನಾಗಲು ಸಾಧ್ಯ. ಕಾಂಗ್ರೆಸ್ ಪಕ್ಷ ಶಿಸ್ತು ಮತ್ತು ಸಿದ್ಧಾಂತದ ಪಕ್ಷವಾಗಿದೆ. ಪಕ್ಷ ಯುವಕರು ಪಕ್ಷದ ಶಿಸ್ತು ಮತ್ತು ಸಿದ್ಧಾಂತವನ್ನು ಮೈಗೂಡಿಸಿಕೊಂಡು ಪಕ್ಷ ಬಲವರ್ಧನೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ನಗರಸಭೆ ಅಧ್ಯಕ್ಷ ಅಷ್ಪಾಕ ಶೇಖ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾವಿದೆ. ಪಕ್ಷದಲ್ಲಿ ಪರಸ್ಪರ ಸಮಾನತೆ ಸೌಹಾರ್ದತೆ ಇದೆ. ಸರ್ವಜನರ ಹಿತವನ್ನು ಬಯಸುವ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆಸಿಫ್‌ ಮತ್ತು ಯೋಗೇಶಗೌಡ, ರಾಜ್ಯ ಕಾರ್ಯದರ್ಶಿ ಜಲಾನಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹರೀಶ ನಾಯ್ಕ, ಯುವ ಕಾಂಗ್ರೆಸ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ ಮಾತನಾಡಿದರು.

ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಶೀಲ್ಪಾ ಕೊಡೆ, ಕಾಂಗ್ರೆಸ್ ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ಅನಿಲ ನಾಯ್ಕರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಸ್ಮಾನ ಮುನ್ನಾ ವಹಾಬ, ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ಅಬ್ದುಲ ಕರೀಮ ಖತಿಬ, ಯುವ ಕಾಂಗ್ರೆಸ್ ದಾಂಡೇಲಿ ಘಟಕಾಧ್ಯಕ್ಷ ಗಗನ ಗೋಪಾಲಸಿಂಗ ರಜಪೂತ, ಹಳಿಯಾಳ ಘಟಕಾಧ್ಯಕ್ಷ ವೆಂಕಟೇಶ ಸೊಳಂಕಿ, ಜೋಯಿಡಾ ಘಟಕಾಧ್ಯಕ್ಷ ಅಕ್ಷಯ ರಾವಳ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮೋಘ ಶಿರಸಿಕರ ಸ್ವಾಗತಿಸಿದರು. ಯುವ ಕಾಂಗ್ರೆಸ್ ಹಳಿಯಾಳ ಘಟಕದ ಅಧ್ಯಕ್ಷ ವೆಂಕಟೇಶ ಸೊಳಂಕೆ ವಂದಿಸಿದರು. ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕಾರಿ ಸಭೆಗೂ ಮುನ್ನ ನಗರದ ಪಟೇಲ ವೃತ್ತದಿಂದ ಅಂಬೇಡ್ಕರ ಭವನದವರೆಗೆ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು. ೨೦೦ ಮೀಟರ್‌ ಉದ್ದದ ತಿರಂಗಾ ನೋಡುಗರ ಗಮನ ಸೆಳೆಯಿತು.

PREV