ಕನ್ನಡಪ್ರಭ ವಾರ್ತೆ ಹಾಸನ
ವಾಲ್ಮೀಕಿ ನಿಗಮದ ಹಗರಣವನ್ನು ನಾವು ಸಮರ್ಥನೆ ಮಾಡುವುದಿಲ್ಲ. ಅದರಲ್ಲಿ ಅನ್ಯಾಯವಾಗಿದ್ದು, ಯಾರು ಮಾಡಿದ್ದು, ಅದಕ್ಕೆ ಯಾರು ಕಾರಣಕರ್ತರು? ಒಂದು ಮನೆ ಎಂದ ಮೇಲೆ ಯಾರಾದರೂ ಒಬ್ಬರ ತಪ್ಪು ಇದ್ದೇ ಇರುತ್ತದೆ. ಇದಕ್ಕೆ ಸಿದ್ದರಾಮಯ್ಯ ಅವರು ಜವಬ್ದಾರಿನಾ! ಜವಾಬ್ದಾರಿ ಹೊತ್ತಿರುವ ಮಂತ್ರಿ ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ಜೈಲಲ್ಲಿ ಇದ್ದಾರೆ. ಅಧಿಕಾರಿಗಳು ಯಾರಿದ್ದಾರೆ ಅವರನ್ನು ಬಂಧಿಸಿ ಸರ್ಕಾರ ಏನು ಮಾಡುತ್ತದೆ ಎಂದು ಗುಡುಗಿದರು.
ಚುನಾವಣೆ ಸಮಯದಲ್ಲಿ ಅಧಿಕಾರಿಗಳು ಹಣ ಹೊಡೆದು ಅನ್ಯಾಯ ಮಾಡಿದ್ದಾರೆ. ಇದರಲ್ಲಿ ಮಂತ್ರಿ ಕುಮಕ್ಕು ಇದೆಯೋ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ಕೆಲವೇ ಅಧಿಕಾರಿಗಳು ಮಾಡಿರುವುದಾಗಿ ಸಾರಿ ಸಾರಿ ಹೇಳುತ್ತಿದ್ದಾರೆ. ಇದು ನಾಟಕೀಯ. ಸಿದ್ದರಾಮಯ್ಯ ಮೇಲೆ ಸುಮ್ಮನೆ ಆಪಾದನೆ ಮಾಡುತ್ತಿದ್ದಾರೆ ಎಂದು ದೂರಿದರು. ಇನ್ನು ಮುಂದೆ ಈ ನಾಟಕ ನಡೆಯುವುದಿಲ್ಲ. ಏನಾದರೂ ಜೇನು ಗೂಡಿಗೆ ಕೈ ಹಾಕಿ ಕಲ್ಲು ಹೊಡೆದಂತೆ ಆಗುತ್ತದೆ ಎಂದು ಬಿಜೆಪಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ ಎಂದರು. ಏನಾದರೂ ಈ ವಾಮ ಮಾರ್ಗಕ್ಕೆ ಇಳಿದರೇ ಕರ್ನಾಟಕದ ಜನರು ಯಾವ ರೀತಿ ದಂಗೆ ಹೇಳುತ್ತಾರೆ ಎನ್ನುವುದನ್ನು ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಾಹಸಕ್ಕೆ ಕೈಹಾಕಬೇಡಿ. ಕೇಂದ್ರ ಸರಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಒಂದು ರು. ಹಣ ಕೊಡಲು ಯೋಗ್ಯತೆ ಇಲ್ಲ. ಕರ್ನಾಟಕ ರಾಜ್ಯಕ್ಕೆ ಏನು ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದರು. ನಮ್ಮ ಕರ್ನಾಟಕದಿಂದ ಜಿ.ಎಸ್.ಟಿ. ತೆರಿಗೆ ೪ ಲಕ್ಷದ ೫೩ ಸಾವಿರ ಹಣ ಈ ಬಾರಿ ಕೇಂದ್ರ ಸರಕಾರಕ್ಕೆ ಹೋಗಿದೆ. ರಿಟರ್ನ್ ಕೊಟ್ಟಿರುವುದು ೫೬ ಸಾವಿರ ಕೋಟಿ. ಬಾಕಿ ಹಣವು ಯಾವ ರೀತಿ ಮೋಸ ಆಗುತ್ತಿದೆ ಎನ್ನುವುದನ್ನು ತಿಳಿಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕರಾದ ಅಂಜಲಿ ನಿಂಬಾಳ್ಕರ್, ರಘುಮೂರ್ತಿ, ವೆಂಕಟರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ಮಾಜಿ ಎಂ.ಎಲ್.ಸಿ. ಗೋಪಾಲಸ್ವಾಮಿ, ಮುಖಂಡರಾದ ದೇವರಾಜೇಗೌಡ, ಬನವಾಸೆ ರಂಗಸ್ವಾಮಿ, ಜಾವಗಲ್ ಮಂಜುನಾಥ್, ಅಶೋಕ್, ಪ್ರಸನ್ನಕುಮಾರ್, ಲಕ್ಷ್ಮಣ್, ಪ್ರಕಾಶ್, ತಾರಾ ಚಂದನ್, ಜಮೀಲಾ ಉಪಸ್ಥಿತರಿದ್ದರು.
ಬಾಕ್ಸ್: ಬಿಜೆಪಿಗೆ ಶಿವಲಿಂಗೇಗೌಡ ಸವಾಲುಮುಖ್ಯಮಂತ್ರಿ ಸಿದ್ದರಾಮಣ್ಣ ರಾಜ್ಯದಲ್ಲಿ ಪ್ರಬಲವಾದ ಸರ್ಕಾರ ನಡೆಸುತ್ತಿದ್ದು, ಮುಡಾದಲ್ಲಿ ನಾನೊಂದು ಚಾಲೆಂಜ್ ತೆಗೆದುಕೊಳ್ಳುತ್ತಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರದ್ದು ಮುಡಾದಲ್ಲಿ ಒಂದೇ ಒಂದು ಪೈಸೆಯಷ್ಟು ತಪ್ಪಿದ್ದರೇ ಬಿಜೆಪಿ ಅವರು ಹೇಳಿದ ಶಿಕ್ಷೆಗೆ ಗುರಿಯಾಗುತ್ತೇನೆ ಎಂದು ಶಾಸಕ ಶಿವಲಿಂಗೇಗೌಡ ಇದೇ ವೆಳೆ ಸವಾಲೆಸೆದರು.