ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರು ಹಾಗೂ ಎಲ್ಲ ನಾಯಕರು ಎಸ್ಐಆರ್ ಅನ್ನು ಸ್ವಾಗತಿಸಿದ್ದರು. ಮಲ್ಲಿಕಾರ್ಜುನ ಖರ್ಗೆ, ವಿಪಕ್ಷದ ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎಸ್.ಐ.ಆರ್ ಕುರಿತು ಸಾರ್ವಜನಿಕರಿಗೆ ನಿರಂತರವಾಗಿ ಮಾಹಿತಿ ಕೊಡುವ ಪ್ರಕ್ರಿಯೆ ನಡೆಸಿದರು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮಗಾಂಧಿ, ಜವಾಹರಲಾಲ್ ನೆಹರು, ವಲ್ಲಭಭಾಯಿ ಪಟೇಲ್, ಝಾಕೀರ್ ಹುಸೇನ್ ಹೀಗೆ ಅನೇಕರು ಶ್ರಮ ಪಟ್ಟಿದ್ದಾರೆ. ಡಾ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ದೇಶಕ್ಕೆ ಸಂವಿಧಾನ ಕೊಟ್ಟು ದೀನ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ಮಹಿಳೆಯರಿಗೆ, ಬಡವರಿಗೆ ನ್ಯಾಯವನ್ನು ಒದಗಿಸಿ ಅವರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.ರಾಹುಲ್ ಗಾಂಧಿ ಅವರು ಸುಮಾರು ವರ್ಷಗಳ ಹಿಂದೆ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮತಗಳ್ಳತನ ಕುರಿತು ಅನೇಕ ಬಾರಿ ಹೇಳುತ್ತಾ ಬಂದಿದ್ದಾರೆ. ಅದು ಈಗ ಸತ್ಯವಾಗಿದೆ. ಕೇಂದ್ರ ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶಕುಮಾರ ಎಸ್ಐಆರ್ ಕಾರ್ಯದಲ್ಲಿ ಮತಗಳ್ಳತನ ಮಾಡಿರುವುದು ಹಾಗೂ ಅನೇಕ ನಿರ್ಣಯಗಳು ಒಬ್ಬರೇ ಮಾಡುವರೆಂದು ಇನ್ನಿಬ್ಬರು ಆಯುಕ್ತರು ಮಾಡಿರುವ ಆರೋಪದಿಂದ ತಪ್ಪು ಹೊರ ಬಂದಿದೆ. ಕಾರಣ ಜ್ಞಾನೇಶಕುಮಾರ್ ವಜಾಗೊಳಿಸಿ, ಬಂಧಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಅಬ್ದುಲ್‌ಹಮೀದ್ ಮುಶ್ರೀಫ್, ಅಬ್ದುಲ್ ರಜಾಕ್ ಹೊರ್ತಿ, ಜಮೀರ್ ಬಕ್ಷಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶಿಗಳಾದ ಎಂ.ಎಂ.ಮುಲ್ಲಾ, ವಸಂತ ಹೊನಮೋಡೆ, ಶಕೀಲ ಬಾಗಮಾರೆ, ಕನ್ನಾನ ಮುಶ್ರೀಫ, ಇರ್ಫಾನ ಶೇಖ, ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.