ಕೂಲಿ ಮಾಡಿ ಸಿಎಂಗೆ ₹3000 ಕಳಿಸಿದ ರೈತರು

KannadaprabhaNewsNetwork |  
Published : Sep 29, 2026, 02:45 AM IST
ಮುದ್ದೇಬಿಹಾಳದಲ್ಲಿ ರೈತ ಸಂಘಟನೆಗಳು ಹಾಗೂ ಬಿಜೆಪಿ ರೈತ ಮೋರ್ಚಾದಿಂದ ವಿನೂತನ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ರೈತರಿಗೆ ₹2500 ಇನ್‌ಪುಟ್‌ ಸಬ್ಸಿಡಿ ಬೆಳೆಹಾನಿ ಪರಿಹಾರ ಘೋಷಣೆ ಮಾಡಿದ್ದನ್ನು ಪ್ರತಿಭಟಿಸಿ ಮುದ್ದೇಬಿಹಾಳದಲ್ಲಿ ರೈತ ಸಂಘಟನೆಗಳು ಹಾಗೂ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ವಿನೂತನ ಪ್ರತಿಭಟನೆ ನಡೆಸಿದರು. ಈ ವೇಳೆ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳೀಯ ಎಂಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡಿ ಅದರಿಂದ ಬಂದ 3000 ಹಣವನ್ನು ಉಡುಗೊರೆ ರೂಪದಲ್ಲಿ ಮುಖ್ಯಮಂತ್ರಿಗಳಿಗೆ ಕಳಿಸುವ ಮೂಲಕ ಸರ್ಕಾರದ ನಿಲುವನ್ನು ಅಣಕಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ರಾಜ್ಯ ಸರ್ಕಾರ ರೈತರಿಗೆ ₹2500 ಇನ್‌ಪುಟ್‌ ಸಬ್ಸಿಡಿ ಬೆಳೆಹಾನಿ ಪರಿಹಾರ ಘೋಷಣೆ ಮಾಡಿದ್ದನ್ನು ಪ್ರತಿಭಟಿಸಿ ಮುದ್ದೇಬಿಹಾಳದಲ್ಲಿ ರೈತ ಸಂಘಟನೆಗಳು ಹಾಗೂ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ವಿನೂತನ ಪ್ರತಿಭಟನೆ ನಡೆಸಿದರು. ಈ ವೇಳೆ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳೀಯ ಎಂಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡಿ ಅದರಿಂದ ಬಂದ ₹3000 ಹಣವನ್ನು ಉಡುಗೊರೆ ರೂಪದಲ್ಲಿ ಮುಖ್ಯಮಂತ್ರಿಗಳಿಗೆ ಕಳಿಸುವ ಮೂಲಕ ಸರ್ಕಾರದ ನಿಲುವನ್ನು ಅಣಕಿಸಿದರು.

ದಿನಗೂಲಿಗಿಂತ ಪರಿಹಾರ ಮೊತ್ತ ಕಡೆ: ಪ್ರತಿಭಟನೆಯಲ್ಲಿ ಮಾತನಾಡಿದ ಮುನ್ನಾಧಣಿ ನಾಡಗೌಡ, ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಬೆಳೆಹಾನಿ ಪರಿಹಾರ ರೈತರಿಗೆ ಮಾಡಿದ ಘೋರ ಅವಮಾನ. ರಾಜ್ಯ ಸರ್ಕಾರ ₹2,500 ಪರಿಹಾರ ಘೋಷಿಸಿರುವುದು ಸರ್ಕಾರ ಎಷ್ಟು ದಿವಾಳಿಯಾಗಿದೆ ಎಂಬುದನ್ನು ತೋರಿಸುತ್ತದೆ. ಇಂದು ಒಬ್ಬ ಕೃಷಿ ಕಾರ್ಮಿಕನ ದಿನಗೂಲಿಯೇ ₹1,000 ತಲುಪಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ₹2,500 ನೀಡುವುದು ರೈತರ ಗಾಯದ ಮೇಲೆ ಬರೆ ಎಳೆದಂತೆ. ಒಂದು ಬಾರಿ ಹೊಲ ಉಳುಮೆ ಮಾಡುವುದಕ್ಕೇ ₹1,500 ಖರ್ಚಾಗುತ್ತದೆ. ಕನಿಷ್ಠ ಮೂರು ಬಾರಿ ಉಳುಮೆ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಮುಂಗಾರು ಬೆಳೆ ಸಂಪೂರ್ಣ ಕೈಕೊಟ್ಟಿದ್ದು, ಹಿಂಗಾರು ಕೂಡ ಅದೇ ಹಂತದಲ್ಲಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ಸರ್ಕಾರಕ್ಕೆ ರೈತರ ನೈಜ ಕಷ್ಟ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.

ಸರ್ಕಾರ ಕೂಡಲೇ ಪರಿಹಾರದ ಮೊತ್ತ ಮರುಪರಿಶೀಲಿಸಿ, ವೈಜ್ಞಾನಿಕವಾಗಿ ಹೆಚ್ಚಿನ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮೂರನೇ ಹಂತದ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದವರು ಎಚ್ಚರಿಕೆ ನೀಡಿದರು.

ಈ ವೇಳೆ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಮಲ್ಲಿಕಾರ್ಜುನ ತಂಗಡಗಿ, ಲಕ್ಷ್ಮಣ ಬಿಜ್ಜೂರ, ಜಗದೀಶ ಪಂಪಣ್ಣವರ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ಶಂಕರಗೌಡ ಶಿವಣಗಿ, ಸಿದ್ದರಾಜ ಹೊಳಿ, ಸುಭಾಸ ಕಟ್ಟಿಮನಿ, ಶೇಖರ ಆಲೂರ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತ ಚೋರಿ ಮಾಡಿ ಚುನಾವಣೆ ಗೆಲ್ಲುವ ಹುನ್ನಾರ: ಸಚಿವ ಎಂ.ಬಿ.ಪಾಟೀಲ
ಶಿವಾನಂದ ಮಖಣಾಪೂರವರ 51ನೇ ಜನ್ಮದಿನ, 25ನೇ ವಿವಾಹ ವಾರ್ಷಿಕ ಮಹೋತ್ಸವ ವಿನೂತನ, ವಿಭಿನ್ನ