ಬೀರೂರಿನ ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್ ರೋಡ್ ಶೋ: ಈ ಬಾರಿ ಗೆಲುವು ಖಚಿತಕನ್ನಡಪ್ರಭ ವಾರ್ತೆ, ಬೀರೂರುಮತದಾರರ ಪ್ರಭುಗಳು ಜನಸಾಮಾನ್ಯರ ಕೈಗೆ ಸಿಗುವಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಲಿದ್ದು. ಈ ನಿಟ್ಟಿನಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಸಮರ್ಥರಿರುವುದರಿಂದ ಅವರಿಗೆ ಅಭೂತಪೂರ್ವ ಹೆಚ್ಚು ಮತ ನೀಡಿ ಗೆಲ್ಲಿಸಿ ಎಂದು ಶಾಸಕ ಕೆ.ಎಸ್.ಆನಂದ್ ಮನವಿ ಮಾಡಿದರು.ಪಟ್ಟಣದ ವಿವಿಧ ವಾರ್ಡಗಳಲ್ಲಿ ಗುರುವಾರ ಸಂಜೆ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರವಾಗಿ ಮತಯಾಚನೆ ಮಾಡಿ ನಂತರ ಮಹಾತ್ಮಗಾಂಧಿ ವೃತ್ತದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದರು. ಈ ಹಿಂದೆ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಬೆಂಬಲ ಪಡೆದು ಚುನಾವಣೆಯಲ್ಲಿ ಜಯಶೀಲರಾದರು. ನಾವು ಸಹ ಕ್ಷೇತ್ರದ ಅಭಿವೃದ್ಧಿಗೆ ಬಹಳಷ್ಟು ಆಸೆ ಆಕಾಂಕ್ಷೆ ಇಟ್ಟುಕೊಂಡಿದ್ದೆವು.
ಆದರೆ ಗೆದ್ದ ಮೇಲೆ ಕ್ಷೇತ್ರದ ಕಡೆ ತಲೆಕೂಡ ಹಾಕಲಿಲ್ಲ. ಅವರ ದುರಾಡಳಿತದಿಂದ ಹುಸಿಯಾಯಿತು. ಅಂತಹ ಅಭ್ಯರ್ಥಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಜೊತೆಗೆ ಮೈತ್ರಿ ಬೆಳೆಸಿ ಕಡೂರು ಕ್ಷೇತ್ರದ ಜನರನ್ನು ಮತ್ತೊಮ್ಮೆ ಕತ್ತಲಿಗೆ ತಳ್ಳಲು ಹೊರಟಿದ್ದಾರೆ. ಕಡೂರು ಕ್ಷೇತ್ರದ ಜನ ಬುದ್ದಿವಂತರಿದ್ದು, ಈ ಬಾರಿ ಚುನಾವಣೆಯಲ್ಲಿ ಅವರನ್ನು ಸೋಲಿಸುವ ಮೂಲಕ ತಕ್ಕ ಉತ್ತರ ನೀಡಬೇಕು ಎಂದರು.ಶ್ರೇಯಸ್ ಪಟೇಲ್ ಸಂಸದರಾಗುತ್ತಿದ್ದಂತೆಯೇ ಬೀರೂರು ಪಟ್ಟಣಕ್ಕೆ ಡಿವೈಡರ್ ರಸ್ತೆ, ಸಮರ್ಪಕ ಯುಜಿಡಿ, ನಿವೇಶನ ರಹಿತರಿಗೆ ಆಶ್ರಯ ನಿವೇಶನ ನೀಡುವ ಜೊತೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ ಎಂದು ಭರವಸೆ ನೀಡಿದರು.ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕೇತ್ರದ ಜನ ತಮ್ಮನ್ನು ಕೈಹಿಡಿಯಲಿದ್ದಾರೆ. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸಂಘಟನಾತ್ಮಕ ಹೋರಾಟ ಮಾಡುವ ಮೂಲಕ ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮವಹಿಸಬೇಕು. ಈ ಚುನಾವಣೆ ಭಾರಿ ಮಹತ್ವ ಪಡೆದಿದ್ದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ಮಾತ್ರ ಗೆಲ್ಲಲು ಸಾಧ್ಯ ಎಂದರು.ನನ್ನ ಮೇಲೆ ಕೇಂದ್ರದ ಮುಖಂಡರು ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭರವಸೆ ಇಟ್ಟಿದ್ದಾರೆ.ಅದನ್ನು ಉಳಿಸಿಕೊಳ್ಳಲು ನಿಮ್ಮೆಲ್ಲರ ಆಶೀರ್ವಾದ ಮುಖ್ಯ ಎಂದರು.ಕಳೆದ ಹಲವು ದಿನಗಳಿಂದ ಕಡೂರು ಕ್ಷೇತ್ರದ ಜನ ತೋರಿಸಿದ ಪ್ರೀತಿಗೆ ನಾನು ಸದಾ ಚಿರಋಣಿ. ಈ ನಿಮ್ಮ ಅಭಿಮಾನ ವನ್ನು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನ ಕ್ರಮ.ಸಂ 3ಕ್ಕೆ ಬಟನ್ ಒತ್ತುವ ಮೂಲಕ ಅತಿ ಹೆಚ್ಚು ಮತ ನೀಡಿ ಗೆಲ್ಲಿಸಬೇಕು ಎಂದರು.ಬೀರೂರು ದೇವರಾಜ್ ಮಾತನಾಡಿ, ಶ್ರೇಯಸ್ ಪಟೇಲ್ ಒಬ್ಬ ಸಾಮಾನ್ಯ ಮನೆತನದಿಂದ ಬಂದ ಯುವಕನಾಗಿದ್ದು, ಸರಳ ಸಜ್ಜನ ವ್ಯಕ್ತಿ. ಈ ಹಿಂದೆ ಬೀರೂರಿನವರೆ 3ಬಾರಿ ಸಂಸದರಾಗಿದ್ದ ಸರಳ ಜೀವಿ ದಿ.ಶ್ರೀಕಂಠಪ್ಪನವರಂತೆ ಎಲ್ಲಾ ವರ್ಗದ ಜನಸಾಮಾನ್ಯರ ಕೈಗೆ ಸಿಗುವಂತವರಾಗಿದ್ದು, ಇವರನ್ನು ನಿಮ್ಮೆಲ್ಲರ ಮತ ನೀಡುವ ಮೂಲಕ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದರನ್ನಾಗಿ ಆಯ್ಕೆ ಮಾಡಿದರೆ ಬಯಲು ಸೀಮೆಯ ಕಡೂರು ಕ್ಷೇತ್ರದ ಅಭಿವೃದ್ದಿ ಕೆಲಸ ಮಾಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ವ್ಯಕ್ತಿಯನ್ನು ಆಯ್ಕೆ ಮಾಡಿ ಕಾಂಗ್ರೆಸ್ ಪಕ್ಷದ ಋಣ ತೀರಿಸೋಣ ಎಂದು ಮತದಾರರಲ್ಲಿ ಮನವಿ ಮಾಡಿದರು.ನಂತರ ಮಹಾತ್ಮ ಗಾಂಧಿ ವೃತ್ತದಿಂದ ಅಪಾರ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಬಿ.ಕೆ.ಶಶಿಧರ್, ಸಮಿಉಲ್ಲಾ, ಜ್ಯೋತಿ ವೆಂಕಟೇಶ್, ಕೀರ್ತಿ ಯತೀಶ್, ಸಂತೋಷ್ ಕುಮಾರ್, ಆಲುಗಡ್ಡೆ ಪ್ರದೀಪ್, ಅನಂತ್, ಮಾದಿಗ ಸಮುದಾಯದ ಬಿ.ಟಿ.ಚಂದ್ರಶೇಖರ್, ಮಲ್ಲಿಕಾರ್ಜುನ್, ಬಿ.ಜಿ.ಮೈಲಾರಪ್ಪ, ಪುಟ್ಟಸ್ವಾಮಿ, ವಿನೋದ್, ಜಯಣ್ಣ, ಶಿವಣ್ಣ,ಸೊಪ್ಪು ಆನಂದ್, ಮನು ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.19 ಬೀರೂರು 1ಬೀರೂರಿನ ಮಹಾತ್ಮಗಾಂಧಿ ವೃತ್ತದಲ್ಲಿ ಗುರುವಾರ ಸಂಜೆ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಶಾಸಕ ಕೆ.ಎಸ್.ಆನಂದ್ ಮತಯಾಚನೆ ಮಾಡಿದರು. ಅಭ್ಯರ್ಥಿ ಶ್ರೇಯಸ್ ಪಟೇಲ್, ಬೀರೂರು ದೇವರಾಜ್ ಇದ್ದರು.