ತುಮಕೂರು: ಕಾಂಗ್ರೆಸ್ ಪಕ್ಷದ ತುಷ್ಠೀಕರಣ ರಾಜಕಾರಣಕ್ಕೆ ಉತ್ತರದಂತೆ ಈ ಬಜೆಟ್ ಇದೆ. ನಮ್ಮದು ಯಾವಾಗಲೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ರಾಜಕಾರಣ ಎಂದು ಅವರು ಈ ಬಜೆಟ್‌ನಲ್ಲೂ ದೃಢಪಡಿಸಿದ್ದಾರೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತುಮಕೂರು: ಕಾಂಗ್ರೆಸ್ ಪಕ್ಷದ ತುಷ್ಠೀಕರಣ ರಾಜಕಾರಣಕ್ಕೆ ಉತ್ತರದಂತೆ ಈ ಬಜೆಟ್ ಇದೆ. ನಮ್ಮದು ಯಾವಾಗಲೂ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ರಾಜಕಾರಣ ಎಂದು ಅವರು ಈ ಬಜೆಟ್‌ನಲ್ಲೂ ದೃಢಪಡಿಸಿದ್ದಾರೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೇಗ ವರ್ಧನೆ ನೀಡುವ ಮಹತ್ವದ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚವ ನಿರ್ಮಲಾ ಸೀತಾರಾಮನ್ ತೆಂಗು ಬೆಳೆಗೆ ಉತ್ತೇಜನ ನೀಡಲು ವಿಶೇಷ ಪ್ರಕಟಣೆ ಮಾಡಿರುವ ಕೇಂದ್ರ ಹಣಕಾಸು ಸಚಿವರಿಗೆ ಕಲ್ಪತರು ನಾಡಿನವನಾಗಿ ನನ್ನ ವಿಶೇಷ ಅಭಿನಂದನೆಗಳು ಸಲ್ಲಬೇಕು. ದೆಹಲಿಯ ಕರ್ತವ್ಯ ಭವನದಲ್ಲಿ ಸಿದ್ಧವಾದ ಮೊದಲ ಬಜೆಟ್ ಇದು. ಮತ್ತು ಭಾನುವಾರ ರಜೆ ದಿನವಾದರೂ ಮಂಡನೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರುವ ಈ ಬಜೆಟ್ ಬಡತನ ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿಯವರ ಬಜೆಟ್ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಿದೆ. ಇದು ಈ ದೇಶದ ಯುವ ಜನಾಂಗಕ್ಕೆ ಭವಿಷ್ಯದ ಭಾರತ ನಿರ್ಮಾಣಕ್ಕೆ ಅಗತ್ಯವಾದ ಕಠಿಣ ಶ್ರದ್ಧೆ ಮತ್ತು ಕರ್ತವ್ಯಪರತೆಯನ್ನು ನೆನಪಿಸಿದೆ. ಜನರ ಆಶೋತ್ತರಗಳನ್ನು ನಿಜ ಮಾಡುವ ದಿಸೆಯಲ್ಲಿ ನಿರ್ಮಲಾ ಅವರು ಬಹು ದೊಡ್ಡ ಹೆಜ್ಜೆ ಇರಿಸಿದ್ದಾರೆ. ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿ ಗ್ರಾಮೀಣ ಭಾರತದ ಏಳಿಗೆಗಾಗಿ ಮಹತ್ವದ ಯೋಜನೆ ಪ್ರಕಟಿಸಿರುವುದು ಸದಾ ನಕಾರಾತ್ಮಕ ರಾಜಕೀಯ ಮಾಡುವ ವಿರೋಧಿಗಳಿಗೆ ತಕ್ಕ ಉತ್ತರ ಕೊಟ್ಟಾಗಿದೆ. ಸರ್ವ ಸಮುದಾಯ, ಧರ್ಮ ಮತ್ತು ಜಾತಿ ಜನಾಂಗದವರಿಗೆ ದೇಶದ ಸಂಪನ್ಮೂಲಗಳ ಪ್ರಯೋಜನ ಸಿಗುವಂತೆ ಮಾಡುವುದು ತಮ್ಮ ಉದ್ದೇಶ ಎಂದು ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.