)
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರವಾಗಿ ಮತಯಾಚನೆಗೆ ಆಗಮಿಸಿದ್ದ ಅವರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಸಿಕ್ಕಾಗಿ ನಮ್ಮ ದೇಶಕ್ಕೆ ಅಮೆರಿಕದಿಂದ ಗೋಧಿ ಬರುತ್ತಿತ್ತು. ಜವಹರಲಾಲ ನೆಹರು, ಲಾಲಬಹದ್ದೂರ್ ಶಾಸ್ತ್ರಿ ಸೇರಿದಂತೆ ಕಾಂಗ್ರೆಸ್ ಸರ್ಕಾರ ದೂರದೃಷ್ಟಿಯ ಯೋಜನೆಗಳಿಂದ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಗರೀಬಿ ಹಠಾವೋ, 20 ಅಂಶಗಳ ಕಾರ್ಯಕ್ರಮಗಳು, ಪಂಚ ವಾರ್ಷಿಕ ಯೋಜನೆಗಳು ಜಾರಿಗೆ ತಂದು ದೇಶವನ್ನು ಸಮೃದ್ಧಿಗೊಳಿಸಿದರು ಎಂದು ಹೇಳಿದರು.ಆರ್ಥಿಕ ಅಭಿವೃದ್ಧಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಎಚ್ಎಎಲ್, ಬಿಎಚ್ಎಲ್, ಬಿಇಎಂಎಲ್, ಇಸ್ರೋ, ಎಚ್ಎಂಟಿ ಸೇರಿದಂತೆ ಅನೇಕ ಸಂಸ್ಥೆಗಳು ಕಾಂಗ್ರೆಸ್ ಕೊಡುಗೆ. ನರೇಗಾ, ಆಧಾರ್ ಕಾರ್ಡ ಸಹ ಕಾಂಗ್ರೆಸ್ ಕೊಡುಗೆ ಎಂದು ತಿಳಿಸಿದರು.
ಮನಮೋಹನ್ ಸಿಂಗ್ ಅವರು ದೇಶದ ರೈತರ ₹70 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಅವರು ₹20 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು, ಅದು ಯಾರದ್ದು ಅದಾನಿ, ಅಂಬಾನಿ ಸೇರಿದಂತೆ ದೊಡ್ಡ ದೊಡ್ಡ ಉದ್ಯಮಿಗಳ . ಡಾಲರ್ ರೇಟ್ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡಿದ್ದ ಮೋದಿ ಅವರು ಇದೀಗ ರೂಪಾಯಿ ಡಾಲರ್ ಗೆ ₹94 ತಲುಪಿದ್ದರೂ ಆ ಬಗ್ಗೆ ಮಾತನಾಡಲ್ಲ ಎಂದು ಕುಟುಕಿದರು.
ಮೋದಿ ಅವರು ಈ ಹಿಂದೆ ತಾವು ಚಹಾ ಮಾರುವಾಗ ಚರಂಡಿ ಮೇಲೆ ಪೈಪ್ ಹಾಕಿ ಗ್ಯಾಸ್ ಉತ್ಪಾದನೆ ಮಾಡುತ್ತಿದ್ದರು ಎಂದು ಹೇಳಿದ್ದರು. ಇವತ್ತು ಮೋದಿ ಅವರ ವಿದೇಶಾಂಗ ನೀತಿ ನೋಡಿದರೆ ಈಗ ಚರಂಡಿ ಮೇಲೆ ಪೈಪ್ ಹಾಕಿ ಗ್ಯಾಸ್ ಉತ್ಪಾದನೆ ಮಾಡುವ ಸ್ಥಿತಿಗೆ ತಂದಿದ್ದಾರೆ ಎಂದು ಟೀಕಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಅಜಯಕುಮಾರ ಸರನಾಯಕ, ಆನಂದ ನ್ಯಾಮಗೌಡ, ನಾಗರಾಜ ಹದ್ಲಿ ಮತ್ತಿತರರು ಇದ್ದರು.ಸಾಲ ಮಾಡಿಯಾದ್ರೂ ಯುಕೆಪಿ ಪೂರ್ಣ:ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನಕ್ಕೆ ನಮ್ಮ ಸರ್ಕಾರ ಎಕರೆಗೆ ₹30 ಮತ್ತು ₹40 ಲಕ್ಷ ಪರಿಹಾರ ನಿಗದಿ ಪಡಿಸಿ, ಆರಂಭಿಕ ₹400 ಕೋಟಿ ಹಂಚಿಕೆ ಮಾಡಲಾಗಿದೆ. ಬಜೆಟ್ ನಲ್ಲಿ ₹3 ಸಾವಿರ ಕೋಟಿ ಇಟ್ಟಿದ್ದೇವೆ. ಪೂರಕ ಬಜೆಟ್ ನಲ್ಲಿ ಇನ್ನೂ ಹೆಚ್ಚಿಗೆ ಹಣ ನೀಡುವಾಗಿ ಸಿಎಂ ಹೇಳಿದ್ದಾರೆ. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದು ಸಮರ್ಥಿಸಿಕೊಂಡರು.ವಿಜಯಪುರದಲ್ಲಿ 5 ವರ್ಷದಲ್ಲಿ ₹2 ಲಕ್ಷ ಕೋಟಿ ಕೊಡುವುದಾಗಿ ಹಾಗೂ ಇತ್ತೀಚೆಗೆ ನಾಲ್ಕು ವರ್ಷ ಬಜೆಟ್ ನಲ್ಲಿ ವಾರ್ಷಿಕ ₹18 ಸಾವಿರ ಕೋಟಿ ಕೊಡುವ ಭರವಸೆ ಏನಾಯಿತು? ನೀವು ಜಲಸಂಪನ್ಮೂಲ ಸಚಿವರಾಗಿದ್ದಾಗ ಬಾಗಲಕೋಟೆ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ ವಸತಿಗೆ ಎಷ್ಟು ಕೋಟಿ ಕೊಟ್ಟಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಲು ಸಚಿವರು ತಡಬಡಾಯಿಸಿದರು. ಈ ಬಗ್ಗೆ ಸಾಕಷ್ಟು ಹಣ ಕೊಟ್ಟಿದ್ದೇನೆ. ಬೇಕಿದ್ದರೆ ನಿಮ್ಮ ಜೆ.ಟಿ. ಪಾಟೀಲರನ್ನು ಕೇಳಿ ಎಂದರೆ ವಿನಾಃ ಎಷ್ಟು ಹಣ ಒದಗಿಸಿದ್ದೇವೆ ಎನ್ನುವ ನಿಖರ ಮಾಹಿತಿ ನೀಡಲಿಲ್ಲ.