ಎರಡು ಬಾರಿ ಸೋಲಲು ಕಾಂಗ್ರೆಸ್ ಕಾರಣ: ನಿಖಿಲ್

KannadaprabhaNewsNetwork | Published : Nov 4, 2024 12:19 AM

ಸಾರಾಂಶ

ಚನ್ನಪಟ್ಟಣ: ಎನ್‌ಡಿಎ ಅಭ್ಯರ್ಥಿ ನಿಖಿಲ್ ವಿರುಪಾಕ್ಷಿಪುರ, ಮುಂಗಾಡಹಳ್ಳಿ, ಶ್ರೀನಿವಾಸಪುರ, ಬಲ್ಲಾಪಟ್ಟಣ, ಕಲರಹಳ್ಳಿ, ಅಂಚೀಪುರದಲ್ಲಿ ಪ್ರಚಾರದ ವೇಳೆ ಪಟಾಕಿ ಸಿಡಿಸಿ, ಹೂವಿನ ಸುರಿಮಳೆ ಸುರಿಸಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು.

ಚನ್ನಪಟ್ಟಣ: ಎನ್‌ಡಿಎ ಅಭ್ಯರ್ಥಿ ನಿಖಿಲ್ ವಿರುಪಾಕ್ಷಿಪುರ, ಮುಂಗಾಡಹಳ್ಳಿ, ಶ್ರೀನಿವಾಸಪುರ, ಬಲ್ಲಾಪಟ್ಟಣ, ಕಲರಹಳ್ಳಿ, ಅಂಚೀಪುರದಲ್ಲಿ ಪ್ರಚಾರದ ವೇಳೆ ಪಟಾಕಿ ಸಿಡಿಸಿ, ಹೂವಿನ ಸುರಿಮಳೆ ಸುರಿಸಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು.

ವಿರುಪಾಕ್ಷಿಪುರ ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಿದರು. ಶ್ರೀನಿವಾಸಪುರ ಗ್ರಾಮಸ್ಥರ ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದ ನಿಖಿಲ್, ಬಿಜೆಪಿ-ಜೆಡಿಎಸ್ ಮೊದಲನೇ ಬಾರಿ ಸಮ್ಮಿಶ್ರ ಸರ್ಕಾರ ಮಾಡಿತ್ತು. ಆಗ ಸಾರಾಯಿ, ಲಾಟರಿ ನಿಷೇಧ ಮಾಡಿದರು. ಮಹಿಳೆಯರ ಗೌರವ ಉಳಿಸಿದರು. ಈಗ ನನಗೊಂದು ಅವಕಾಶ ಕೊಟ್ಟರೆ ಆನ್ ಲೈನ್ ಗೇಮಿಂಗ್ ಗೆ ಕಡಿವಾಣ ಹಾಕಿ ಯುವಕರ ಬದುಕು ಹಸನು ಮಾಡುತ್ತೇವೆ ಎಂದು

ನನಗೆ ಒಂದು ಅವಕಾಶ ಕೊಡಿ ಇದಕ್ಕೆ ಕಡಿವಾಣ ಹಾಕ್ತೇನೆ. ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಎರಡು ಸಾವಿರ ಕೊಟ್ಟು, ಮದ್ಯದ ದರ ಏರಿಸಿ ಒಬ್ಬರಿಗೆ ಕೊಟ್ಟು ಮತ್ತೊಬ್ಬರ ಬಳಿ ಕಿತ್ತುಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಈಗಾಗಲೇ 110 ಹಳ್ಖಿಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಾ ಕಡೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಮಂಡ್ಯ ಮತ್ತು ರಾಮನಗರದ ಮಧ್ಯದಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ಸಿದ್ಧತೆ ಮಾಡ್ತಿದ್ದೇವೆ. ಕುಮಾರಸ್ವಾಮಿ ಅವರು ಪ್ರಧಾನಿ ಮೋದಿಯವರ ಸಂಪರ್ಕ ಮಾಡಿ ಚರ್ಚಿಸಿದ್ದಾರೆ. ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.ಪ್ರಚಾರ ಇಲ್ಲದೆ ಕೆಲಸ ಮಾಡಿದ್ದೇವೆ:

ಚನ್ನಪಟ್ಟಣಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ಕಳೆದ 40 ವರ್ಷದಿಂದ ಈ ಭಾಗದಲ್ಲಿ ದೇವೇಗೌಡರು ಜನರ ಸಂಪರ್ಕ ಹೊಂದಿದ್ದಾರೆ. ನೀರಾವರಿ ಯೋಜನೆಗಳ ಕೊಡುಗೆ ನೀಡಿದ್ದಾರೆ. ಈಗ ಬಂದು ಪಾಪ ಯಾರೋ ನಾನು ಭಗೀರಥ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ನಾವು ಪ್ರಚಾರ ತೆಗೆದುಕೊಳ್ಳದೇ ಆತ್ಮಸಾಕ್ಷಿಗೆ ಕೆಲಸ ಮಾಡಿದ್ದೇವೆ. ದೇವೇಗೌಡರು ಇಗ್ಗಲೂರು ಜಲಾಶಯ ನಿರ್ಮಾಣ ಮಾಡಿದ್ದಾರೆ. ತಾಲೂಕಿನ ನೀರಾವರಿ ಯೋಜನೆಗೆ ಅವರ ಕೊಡುಗೆ ಶಾಶ್ವತವಾಗಿದೆ. ನೀರಾ ಚಳವಳಿ ವೇಳೆ ದೇವೇಗೌಡರು ಚನ್ನಪಟ್ಟಣದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡಿದ್ದರು ಎಂದರು.

ಮಂಡ್ಯ ಹಾಗೂ ರಾಮನಗರದಲ್ಲಿ ಈಗಾಗಲೇ ಎರಡು ಚುನಾವಣೆಯಲ್ಲಿ ಸೋತಿದ್ದೇನೆ. ಒಬ್ಬ ಯುವಕನಾಗಿ, ಯುವಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಅದಕ್ಕೆ ಕ್ಷೇತ್ರದ ಜನ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಶಾಸಕ ಎಸ್ .ಆರ್.ವಿಶ್ವನಾಥ್, ಮಾಜಿ ಶಾಸಕ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಜೆಡಿಎಸ್ ಚನ್ನಪಟ್ಟಣ ತಾಲೂಕು ಅಧ್ಯಕ್ಷ ಜಯಮುತ್ತು, ಇಂಡವಾಳು ಸಚ್ಚಿದಾನಂದ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ ಶ್ರೀಕಂಠೇಗೌಡ , ಬಿಜೆಪಿ ಜಿಲ್ಲಾಧ್ಯಕ್ಷ ಆನಂದ್ ಸ್ವಾಮಿ ಇತರರಿದ್ದರು.

3ಕೆಆರ್ ಎಂಎನ್ 5.ಜೆಪಿಜಿ

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿರವರು ಬಿಜೆಪಿ ನಾಯಕರೊಂದಿಗೆ ವಿರುಪಾಕ್ಷಿಪುರ, ಮುಂಗಾಡಹಳ್ಳಿ, ಶ್ರೀನಿವಾಸಪುರ, ಬಲ್ಲಾಪಟ್ಟಣ, ಕಲರಹಳ್ಳಿ, ಅಂಚೀಪುರ ಗ್ರಾಮದಲ್ಲಿ ಪ್ರಚಾರ ನಡೆಸಿದರು.

Share this article