ಕಾಂಗ್ರೆಸ್‌ನದು ನೈತಿಕ ಗೆಲುವಲ್ಲ, ಅನೈತಿಕ ಗೆಲುವು: ಡಾ.ವೀರಣ್ಣ ಚರಂತಿಮಠ

KannadaprabhaNewsNetwork |  
Published : May 06, 2026, 03:00 AM IST
ಡಾ.ವೀರಣ್ಣ ಚರಂತಿಮಠ | Kannada Prabha

ಸಾರಾಂಶ

ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರ ದುರ್ಬಳಕೆ ಮತ್ತು ಹಣಬಲ ಮೂಲಕ ಅನೈತಿಕ ಗೆಲುವು ಸಾಧಿಸಿದೆ. ಇದರಿಂದ ಬಿಜೆಪಿ ಕಾರ್ಯಕರ್ತರು ಎದೆಗುಂದಿಲ್ಲ ಎಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ವೀರಣ್ಣ ಚರಂತಿಮಠ ಪ್ರತಿಕ್ರಿಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರ ದುರ್ಬಳಕೆ ಮತ್ತು ಹಣಬಲ ಮೂಲಕ ಅನೈತಿಕ ಗೆಲುವು ಸಾಧಿಸಿದೆ. ಇದರಿಂದ ಬಿಜೆಪಿ ಕಾರ್ಯಕರ್ತರು ಎದೆಗುಂದಿಲ್ಲ ಎಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ವೀರಣ್ಣ ಚರಂತಿಮಠ ಪ್ರತಿಕ್ರಿಯಿಸಿದ್ದಾರೆ.

ಒಂದು ಕ್ಷೇತ್ರದ ಉಪಚುನಾವಣೆ ಗೆಲ್ಲಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಡೀ ಸಚಿವ ಸಂಪುಟದೊಂದಿಗೆ ಠಿಕಾಣಿ ಹೂಡಿದ್ದರು. ಆಡಳಿತ ವಿರೋಧಿ ಅಲೆಗೆ ಸರಕಾರ ಬೆಚ್ಚಿ ಬಿದ್ದಿತ್ತು ಎಂಬುದಕ್ಕೆ ಸಾಕ್ಷಿಯಾಗಿತ್ತು, ಈ ಸರಕಾರ ಕಳೆದ 3 ವರ್ಷಗಳಲ್ಲಿ ರಾಜ್ಯದ ಜನತೆಯ ಹಾಗೂ ಕೃಷ್ಣಾ ಯೋಜನೆ ಸಂತ್ರಸ್ತರ ಒಂದು ಸಮಸ್ಯೆಯನ್ನೂ ಆಲಿಸಲಿಲ್ಲ. ಮೊತ್ತೊಂದೆಡೆ ಕಾಂಗ್ರೆಸ್ಸಿಗೆ ಮತ ಹಾಕದಿದ್ದರೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಾಗಿ ಮತದಾರರಿಗೆ ಬೇದರಿಕೆ ಹಾಕಿದ್ದರು. ಚುನಾವಣೆ ಪೂರ್ವದಲ್ಲಿ ಮತದಾರರ ಮೇಲೆ ಪ್ರಭಾವ ಬಿರುವುದಕ್ಕಾಗಿ ಗ್ಯಾರಂಟಿ ಯೋಜನೆಗಳ ಅನುದಾನ ಬಿಡುಗಡೆಗೊಳಿಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಿದರು. ಕಾಂಗ್ರೆಸ್ಸಿನ ಈ ಎಲ್ಲ ಕುತಂತ್ರ ಗಮನಿಸಿದರೆ ಕಾಂಗ್ರೆಸ್‌ ಪಕ್ಷ ಹಾಗೂ ಸರಕಾರ ಉಪ ಚುನಾವಣೆ ಎದರಿಸಲು ಅಧಿರವಾಗಿತ್ತು ಎಂಬುದನ್ನು ದೃಢಪಡಿಸುತ್ತದೆ ಎಂದು ಹರಿಹಾಯ್ದರು.

ಒಂದು ಕ್ಷೇತ್ರ ಗೆಲ್ಲುವುದಕ್ಕಾಗಿ ಇಡಿ ಸರಕಾರವೇ ಬಾಗಲಕೋಟೆಯಲ್ಲಿ ಬೀಡು ಬಿಟ್ಟಿತ್ತು. ಹಾಗಾಗಿ ಅಧಿಕಾರದ ದುರ್ಬಳಕೆ, ಹಣಬಲ ಹಾಗೂ ಜಾತಿ ರಾಜಕಾರಣದಂತಹ ಕುತಂತ್ರಗಳ ಮೂಲಕ ಕಾಂಗ್ರೆಸ್‌ ಅನೈತಿಕ ಗೆಲುವು ಸಾಧಿಸಿದೆ. ಬಿಜೆಪಿ ಸರಕಾರ ಮಾಡಿರುವ ಸಾಧನೆ ಕ್ಷೇತ್ರದಲ್ಲಿ 3 ಬಾರಿ ಶಾಸಕನಾಗಿ ಮಾಡಿರುವ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಬಿಜೆಪಿ ಕಾರ್ಯಕರ್ತರು ನೈತಿಕ ವಿಜಯ ಸಾಧಿಸಿದ್ದಾರೆ. ಹಾಗಾಗಿ ಕಾರ್ಯಕರ್ತರು ನೈತಿಕವಾಗಿ ಕುಗ್ಗದೆ ಮುಂಬರುವ ಸ್ಥಳೀಯ ಚುನಾವಣೆಗಳ ಮೂಲಕ ಕಾಂಗ್ರೆಸ್‌ ಕುತಂತ್ರಗಳಿಗೆ ಮತದಾರರು ಮತ್ತು ಪಕ್ಷದ ಕಾರ್ಯಕರ್ತರು ತಕ್ಕ ಉತ್ತರ ನೀಡಲಿದ್ದಾರೆ. ಹಿಂದಿನ ಚುನಾವಣೆಗಿಂತ ಈ ಉಪ ಚುನಾವಣೆಯಲ್ಲಿ ಹೆಚ್ಚಿನ ಮತನೀಡಿದ ಕ್ಷೇತ್ರದ ಎಲ್ಲ ಮತದಾರರು ಹಾಗೂ ನನ್ನ ಪರವಾಗಿ ಪ್ರಚಾರ ಮೂಲಕ ಮತಯಾಚನೆಗೆ ಆಗಮಿಸಿದ್ದ ಪಕ್ಷದ ರಾಜ್ಯ ಎಲ್ಲ ವರಿಷ್ಠರು, ಜಿಲ್ಲೆಯ ಎಲ್ಲ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರಿಗೂ ಕೃತಘ್ನತೆ ಸಲ್ಲಿಸಿದ್ದಾರೆ.

ಕೃತಜ್ಞತೆ ಸಲ್ಲಿಸಿದ ಚರಂತಿಮಠ: ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದ ಮತದಾರರಿಗೆ ಹಾಗೂ ಶ್ರಮಿಸಿದ ಕಾರ್ಯಕರ್ತರಿಗೆ , ಮುಖಂಡರುಗಳಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು, ಸೋಲು-ಗೆಲುವು ರಾಜಕೀಯದಲ್ಲಿ ಸಹಜವಾದ ಪ್ರಕ್ರಿಯೆ. ಸೋಲನ್ನು ಸವಾಲಾಗಿ ಸ್ವೀಕರಿಸಿ ಕುಗ್ಗದೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಹೊಸ ಛಲದಿಂದ ದುಡಿಯೋಣ, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯೋಣ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ತಿಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಾಘಾತ: ಆಸ್ಪತ್ರೆಯಲ್ಲಿ 10 ಬೆಡ್‌ಗಳು ಸನ್ನದ್ಧ
ಅಥಣಿಗೆ ಬರಲಿದೆ ಕವರ್ಡ್ ಕಂಡಕ್ಟರ್ ಕೇಬಲ್‌