ಎಸ್‌ಐಆರ್ ಖಂಡಿಸಿ ಕಾಂಗ್ರೆಸ್‌ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Nov 20, 2026, 03:00 AM IST
ಎಸ್‌ಐಆರ್ ನಾಟಕ ಬಿಟ್ಟು ಮತದಾರರನ್ನು ಮರಳಿ ಸೇರಿಸಿ : ಸಿದ್ದು ಕೊಣ್ಣೂರ. | Kannada Prabha

ಸಾರಾಂಶ

ಎಸ್‌ಐಆರ್‌ ಖಂಡಿಸಿ, ಸಿಇಸಿ ಜ್ಞಾನೇಶಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಬನಹಟ್ಟಿಯಲ್ಲಿ ತೇರದಾಳ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಎಸ್‌ಐಆರ್‌ ಖಂಡಿಸಿ, ಸಿಇಸಿ ಜ್ಞಾನೇಶಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಬನಹಟ್ಟಿಯಲ್ಲಿ ತೇರದಾಳ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೆಲಕಾಲ ಪೊಲೀಸ್ ಠಾಣೆ ಎದುರು ಕುಡಚಿ-ಜಮಖಂಡಿ ರಾಜ್ಯ ಹೆದ್ದಾರಿ ತಡೆ ನಡೆಸಿದರು. ಬಳಿಕ ತಹಸೀಲ್ದಾರ ಗಿರೀಶ ಸ್ವಾದಿಯವರಿಗೆ ಮನವಿ ಸಲ್ಲಿಸಲಾಯಿತು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ ಮಾತನಾಡಿ, ಅನ್ಯಾಯದ ಮೂಲಕ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯುವ ಕನಸಲ್ಲಿರುವ ಬಿಜೆಪಿ ಕನಸು ನನಸಾಗದು. ಎಸ್‌ಐಆರ್ ಮೂಲಕ ಕಾಂಗ್ರೆಸ್ ಮತಗಳನ್ನು ನಿರ್ಣಾಮ ಮಾಡುವ ಹುನ್ನಾರ ನಡೆಯದು. ಜ್ಞಾನೇಶಕುಮಾರ್‌ರನ್ನು ವಜಾಗೊಳಿಸಿ ಅರ್ಹ ಮತದಾರರಿಗೆ ಮತದಾನ ಹಕ್ಕು ನೀಡುವ ಮೂಲಕ ಪ್ರಜಾಪ್ರಭುತ್ವ ಉಳಿಸಬೇಕೆಂದರು.

ಕಾಂಗ್ರೆಸ್ ಮುಖಂಡ ಭೀಮಶಿ ಮಗದುಮ್ ಮಾತನಾಡಿ, ಮುಂಬರುವ ೪ ರಾಜ್ಯಗಳಲ್ಲಿನ ಚುನಾವಣೆ ದೃಷ್ಟಿಯಿಂದ ಇಂತಹ ಕೆಟ್ಟ ನಿರ್ಧಾರಗಳನ್ನು ಕೈಗೊಂಡು ಪ್ರಜಾಪ್ರಭುತ್ವ ಹಕ್ಕಿನ ವಿರುದ್ಧ ಬಿಜೆಪಿ ಕಾರ್ಯ ನಡೆಸುತ್ತಿದೆ. ಅಂಬಾನಿ, ಅದಾನಿಗಳಂತವರ ₹೧೧ ಲಕ್ಷ ಕೋಟಿಯಷ್ಟು ಸಾಲಮನ್ನಾ ಮಾಡಿರುವ ಕೇಂದ್ರ ಸರ್ಕಾರ ರೈತರ ಕೇವಲ ₹೫.೫ ಲಕ್ಷ ಕೋಟಿ ಸಾಲಮನ್ನಾ ಮಾಡಲು ಹಿಂದೇಟು ಹಾಕುತ್ತಿರುವುದು ರೈತ ವಿರೋಧಿಗೆ ಹಿಡಿದ ಕನ್ನಡಿಯಾಗಿದೆಯೆಂದರು.

ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿದರು.

ಸುಮಿತ್ರಾ ಗುಳಬಾಳ, ಮಲ್ಲಪ್ಪ ಸಿಂಗಾಡಿ, ಶೇಖರ ಹಕ್ಕಲದಡ್ಡಿ, ಪ್ರಾಧಿಕಾರ ಅಧ್ಯಕ್ಷ ದಾನಪ್ಪ ಹುಲಜತ್ತಿ, ಸುರೇಶ ಪಾಟೀಲ, ರವಿ ಬಾಡಗಿ, ಇರ್ಷಾದ ಮೋಮಿನ್, ವಿದ್ಯಾ ಬಿಳ್ಳೂರ, ಕಿರಣ ಕರಲಟ್ಟಿ, ಬಸವರಾಜ ರಾಯರ, ಭರಮು ಉಳ್ಳಾಗಡ್ಡಿ, ರೇಣುಕಾ ಮಡ್ಡಿಮನಿ, ರಾಜು ಬಗನಾಳ, ಶೇಖರ ಹಕ್ಕಲದಡ್ಡಿ ಸೇರಿ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಂಕ್ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ: ಸದಾಶಿವ ಮೇತ್ರಿ
ಕಲಾ ಜಗತ್ತಿನಲ್ಲಿ ಪ್ರತಿಭೆ ಗುರುತಿಸಿಕೊಳ್ಳಿ