ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಸಮಿತಿ ಮುಖಂಡರು,ಕಾರ್ಯಕರ್ತರು ಆಯುಕ್ತರ ವಿರುದ್ಧ ಘೋಷಣೆ ಕೂಗಿ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಎಂಎಲ್ಸಿ ಎನ್.ಎಸ್.ಬೋಸರಾಜು, ಎಂಎಲ್ಸಿ ಎ.ವಸಂತ ಕುಮಾರ ಹಾಗೂ ಡಿಸಿಸಿ ಅಧ್ಯಕ್ಷ ಕೆ.ಶಾಂತಪ್ಪ ಅವರು, ಸ್ವಾಯತ್ತತೆ ಸಂಸ್ಥೆಯಾಗಿರುವ ಕೇಂದ್ರ ಚುನಾವಣಾ ಆಯೋಗ ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಬದಲು ಮತದಾರರ ಹಕ್ಕು ಕಸಿಯುವ ಹುನ್ನಾರ ನಡೆಸಿರುವದು ಬಹಿರಂಗವಾಗಿದ್ದು, ಮುಖ್ಯ ಚುನಾವಣಾ ಆಯುಕ್ತರೇ ನೇರ ಕಾರಣವೆಂಬದನ್ನು ಸಹ ಆಯುಕ್ತರೇ ಬಹಿರಂಗ ಪಡೆಸಿದ್ದಾರೆ. ಈಗಾಗಲೇ ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನಡೆದ ಮತದಾರರ ವಿಶೇಷ ಪರಿಷ್ಕರಣೆ ಹೆಸರಿನಲ್ಲಿ ಲಕ್ಷಾಂತರ ಜನರ ಮತದಾನ ಹಕ್ಕು ಕಸಿಯಲಾಗಿದೆ. ರಾಜ್ಯದಲ್ಲಿಯೂ ಸಹ ಅರ್ಹ ಮತದಾರರು ಮತದಾನ ಹಕ್ಕಿನಿಂದ ವಂಚಿತವಾಗಿದ್ದಾರೆ. ಆಯೋಗ ಪಕ್ಷಪಾತ ಧೋರಣೆಯಿಂದ ವರ್ತಿಸಿ ಜನರ ವಿಶ್ವಾಸಕ್ಕ ಧಕ್ಕೆ ತರುವಕೆಲಸ ನಡೆಯುತ್ತಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಇವರು ಕೇಂದ್ರ ಸರ್ಕಾರ ಪ್ರಭಾವಿಗಳ ಸೂಚನೆ ಮೇರೆಗೆ ಅವೈಜ್ಞಾನಿಕ ಎಸ್ಐಆರ್ ನಡೆಸಿ ಈಗ ನೋಟಿಸ್ ನೀಡುವದಿಲ್ಲ ಎಂದು ಹೇಳುತ್ತಿರುವದು ಆಯೋಗದ ವಿಶ್ವಾಸರ್ಹತೆಯನ್ನು ಅನುಮಾನದಿಂದ ನೋಡುಂತಾಗಿದೆ ಎಂದರು ಆರೋಪಿಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಮಾಜಿ ಸಚಿವ ಎನ್.ಎಸ್.ಬೋಸರಾಜ, ಕೇಂದ್ರ ಚುನಾವಣಾ ಆಯೋಗ ಪಕ್ಷಪಾತ ಧೋರಣೆ ಅನುಸರಿಸುತ್ತಿರುವುದು ಬಹಿರಂಗಗವಾಗಿದೆ. ಜ್ಞಾನೇಶಕುಮಾರ ಏಪಕ್ಷೀಯವಾಗಿ ನಡೆದುಕೊಂಡು ಕೇಂದ್ರ ಸರ್ಕಾರ ಪೂರಕವಾಗಿ ವರ್ತನೆ ಮಾಡುತ್ತಿದ್ದಾರೆ. ಆಯೋಗದ ಆಯುಕ್ತರು ಎಚ್ಚರಿಕೆ ನೀಡಿದರೂ ದುರುದ್ದೇಶ ಪೂರಕವಾಗಿ ಮತದಾನ ಹಕ್ಕು ಕಸಿಯುವ ಸಂವಿಧಾನ ವಿರೋಧಿ ನಡೆಯನ್ನು ಪ್ರದರ್ಶಿಸಿದ್ದು, ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಜ್ಞಾನೇಶ್ ಕುಮಾರರನ್ನು ವಜಾಗೊಳಿಸಿ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾನ್ವಿ ಶಾಸಕ ಜಿ.ಹಂಪಯ್ಯ ನಾಯಕ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಮುಖಂಡರಾದ ಮಹ್ಮದ ಶಾಲಂ, ಜಯಣ್ಣ, ರುದ್ರಪ್ಪ ಅಂಗಡಿ, ಬಸವರಾಜ ಪಾಟೀಲ್ ದರೂರು, ಅರುಣ ದೋತರಬಂಡಿ, ಡಾ.ರಜಾಕ ಉಸ್ತಾದ ಸೇರಿ ಪಕ್ಷದ ಮುಂಚೂಣಿ ಸಮಿತಿಗಳ ಮುಖ್ಯಸ್ಥರು, ಸದಸ್ಯರು, ಮಹಿಳೆಯರು ಹಾಗೂ ಕಾರ್ಯಕರ್ತರು ಸೇರಿ ಅನೇಕರು ಭಾಗವಹಿಸಿದ್ದರು.