ದ.ಕ. ದಲ್ಲಿ ಕಾಂಗ್ರೆಸ್‌ ಬಲ ಹೆಚ್ಚಳ: ಮಿಥುನ್‌ ರೈ

KannadaprabhaNewsNetwork |  
Published : Sep 14, 2025, 01:06 AM IST
ಕಿನ್ನಿಗೋಳಿಯಲ್ಲಿ ಕೂಡ  ಕಡಬದಂತೆ ಕಾಂಗ್ರೆಸ್ ಅಧಿಕಾರಕ್ಕೆ-ಮಿಥುನ್‌ ರೈ | Kannada Prabha

ಸಾರಾಂಶ

ಕಿನ್ನಿಗೋಳಿಯ ರಾಜರತ್ನಪುರ ಸರಫ್ ಅಣ್ಣಯ್ಯ ಆಚಾರ್ಯ ಸಭಾಭವನದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ನ 18 ವಾರ್ಡ್ ಗಳ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಮುಖವಾಡ ಕಳಚಿ ಬಿದ್ದಿದ್ದು ಕಾಂಗ್ರೆಸ್ ಬಲಯುತವಾಗಿ ಹೊರಹೊಮ್ಮುತ್ತಿದೆ, ಇದಕ್ಕೆ ಇತ್ತೀಚೆಗೆ ನಡೆದ ಕಡಬ ಪಟ್ಟಣ ಪಂಚಾಯತಿನ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿರುವುದೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಕಿನ್ನಿಗೋಳಿಯಲ್ಲಿ ಕೂಡ ಕಾಂಗ್ರೆಸ್ ಜಯ ಗಳಿಸಲಿದೆಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ ಹೇಳಿದರು.

ಕಿನ್ನಿಗೋಳಿಯ ರಾಜರತ್ನಪುರ ಸರಫ್ ಅಣ್ಣಯ್ಯ ಆಚಾರ್ಯ ಸಭಾಭವನದಲ್ಲಿ ನಡೆದ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ನ 18 ವಾರ್ಡ್ ಗಳ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ವಾರ್ಡಿಗೂ ಪಟ್ಟಣ ಪಂಚಾಯತಿನ ಹೊರಗಿನ ನಾಯಕರುಗಳನ್ನು ಉಸ್ತುವಾರಿಯನ್ನಾಗಿ ನೇಮಿಸಿದ್ದು, ಈ ಉಸ್ತುವಾರಿಗಳು ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸುವವರೆಗೂ ಪ್ರತಿ ವಾರ್ಡ್ ನಲ್ಲೂ ಕಾರ್ಯ ನಿರ್ವಹಿಸಲಿದ್ದಾರೆ ಹೇಳಿದರು.

ಈ ಸಂದರ್ಭ ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ ನ ಜಿಲ್ಲಾ ಉಸ್ತುವಾರಿ ಕಾರ್ಪೊರೇಟರ್ ಅನಿಲ್ ಕುಮಾರ್ ಪೂಜಾರಿ ಮಂಗಳೂರು, ಕೆಪಿಸಿಸಿ ಸದಸ್ಯ ವಸಂತ ಬರ್ನಾಡ್, ಕಿನ್ನಿಗೋಳಿ ಪಟ್ಟಣ ಪಂಚಾಯತಿನ ಪ್ರಜಾಪ್ರತಿನಿಧಿ ಅಧ್ಯಕ್ಷ ಪ್ರಮೋದ್ ಕುಮಾರ್, ಅಲ್ಪಸಂಖ್ಯಾತ ಅಧ್ಯಕ್ಷ ಟಿ ಎಚ್ ಮಯ್ಯದಿ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಉಸ್ತುವಾರಿ ಸುನಿಲ್ ಸಿಕ್ವೇರಾ, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಜಾಕ್ಸನ್ ಸಲ್ದಾನ, ಕೆಮ್ರಲ್ ಮಾಜಿ ಉಪಾಧ್ಯಕ್ಷ ಸುರೇಶ್ ದೇವಾಡಿಗ ಪಂಜ, ಪಕ್ಷದ ನಾಯಕರುಗಳಾದ ಜನಾರ್ದನ ಬಂಗೇರ, ತಿಮ್ಮಪ್ಪ ಕೋಟ್ಯಾನ್, ನವೀನ್ ಕಟೀಲು, ಫಿಲೋಮಿನಾ. ಲೋಬೋ, ವಿಲ್ಮಾ ಡಿಕೋಸ್ಟ, ಅನಿತಾ ಅರಾನ್ನ, ನಾರಾಯಣ ಶೆಟ್ಟಿ, ಚಂದ್ರಶೇಖರ ಮತ್ತಿತರರಿದ್ದರು. ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಂಬಾರ ವಂದಿಸಿದರು. ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ