ಕನ್ನಡಪ್ರಭ ವಾರ್ತೆ ಲೋಕಾಪುರ
ದೇಶಾದ್ಯಂತ ಕಾಂಗ್ರೆಸ್ ಮತಕಳ್ಳತನ ವಿರುದ್ಧ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿನ್ನೆಲೆ ಹೆಬ್ಬಾಳ ಕ್ರಾಸ್ನಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ನಾಗಣಾಪುರ, ಜನತಾ ಪ್ಲಾಟ್, ಬಸವೇಶ್ವರ ವೃತ್ತ, ಎಪಿಎಂಸಿ ಕ್ರಾಸ್ ಬಾಗಲಕೋಟೆ ರಸ್ತೆ ಮಾರ್ಗವಾಗಿ ಸಾಗಿ ಲೋನಾರಿ ಲೇಔಟ್ನ ವೇದಿಕೆ ವರೆಗೂ ಕಾನ್ನಡಿಗೆಯಲ್ಲಿ ಸಮಾವೇಶಗೊಂಡಿತು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಪ್ರಜಾಪ್ರಭುತ್ವದ ಅಂತಿಮ ಅಸ್ತ್ರವಾದ ಮತದಾನ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿದ್ದರೆ, ನಾವು ಶಿಕ್ಷಣ, ರಸ್ತೆ ಅಥವಾ ಉದ್ಯೋಗದ ಬಗ್ಗೆ ಎಷ್ಟೇ ಹೋರಾಟ ನಡೆಸಿದರೂ ಪ್ರಯೋಜನವಿಲ್ಲ ಎಂದು ಕಳವಳ ವ್ಯಕ್ತಪಡಿಸಿ ಜ್ಞಾನೇಶಕುಮಾರ್ ರಾಜೀನಾಮೆ ನೀಡುವವರೆಗೂ ಕಾಂಗ್ರೆಸ್ ಪಕ್ಷದ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.ಕೆಪಿಸಿಸಿ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ ಮಾತನಾಡಿ, ಮೊದಲ ಬಾರಿಗೆ ಮತದಾರರನ್ನು ನೋಂದಾಯಿಸಲು ಸಾಮಾನ್ಯವಾಗಿ ಬಳಸುವ ನಮೂನೆ ೬ರಲ್ಲಿ ಮಾಡಲಾದ ಬದಲಾವಣೆಗಳ ಕುರಿತು ಕೇಂದ್ರ ಚುನಾವಣೆ ಆಯೋಗ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದು, ಜ್ಞಾನೇಶ್ ಕುಮಾರ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ನಿಷ್ಟಕ್ಷಪಾತ ನಾಶಪಡಿಸಿದ್ದಾರೆ. ಈಗ ದೇಶವನ್ನು ದಾರಿತಪ್ಪಿಸಿದ್ದಕ್ಕಾಗಿ ಬಹಿರಂಗಗೊಂಡಿದ್ದಾರೆ, ಜ್ಞಾನೇಶ್ ಕುಮಾರ್ ಒಬ್ಬ ಮತ ಕಳ್ಳ ಸುಳ್ಳುಗಾರ ಮತ್ತು ಪ್ರಜಾಪ್ರಭುತ್ವದ ಕಸಾಯಿಖಾನೆ ಎಂದು ಹೇಳಿದರು.
ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ವಕೀಲರಾದ ಎ.ಎಚ್. ಅಂಬಿ, ಉದಯಸಿಂಗ್ ಪಡತಾರೆ, ಶಿವಾನಂದ ಉದಪುಡಿ, ವೋಟ್ ಚೋರಿ ಚುನಾವಣೆ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮುಖ್ಯ ಚುನಾವಣೆ ಆಯುಕ್ತ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕಾಂಗ್ರೇಸ್ ಮುಖಂಡರಾದ ಶಿವಕುಮಾರ ಮಲಘಾಣ, ತಿಮ್ಮಣ್ಣ ಅರಳಿಕಟ್ಟಿ, ರಾಜುಗೌಡ ನ್ಯಾಮಗೌಡ, ರಾಜುಗೌಡ ಪಾಟೀಲ, ಸಂಜು ನಾಯಕ, ವೆಂಕಣ್ಣ ಗಿಡ್ಡಪ್ಪನವರ, ಕೃಷ್ಣಾ ಪರಡ್ಡಿ, ಕಲ್ಮೆಶ ಸಾರವಾಡ, ಮಹಾದೇವ ಹೊಸಟ್ಟಿ, ಗುರುರಾಜ ಉದಪುಡಿ, ಲಕ್ಷö್ಮಣ ಮಾಲಗಿ, ಮಹಾಂತೇಶ ಮಾಚಕನೂರ, ಹೊಳಬಸು ದಂಡಿನ, ವೆಂಕಟೇಶ ಅಂಕಲಗಿ, ರಾಘು ಮೊಕಾಶಿ, ಸಂಗಪ್ಪ ಇಮ್ಮಣ್ಣವರ, ಚಿನ್ನು ಅಂಬಿ, ಮುದಕಣ್ಣ ಅಂಬಿಗೇರ, ಬೀರಪ್ಪ ಮಾಯಣ್ಣವರ, ಆನಂದ ಹಿರೇಮಠ, ರವಿ ರೊಡ್ಡಪ್ಪನವರ, ಕೃಷ್ಣಾ ಜಟ್ಟೆನ್ನವರ, ರಹೆಮಾನ ತೊರಗಲ್ಲ, ಕೆ.ಕೆ. ಬಾಗವಾನ, ಜಾವೇದ್ ಮುಧೋಳ, ಸುಲ್ತಾನ ಕಲಾದಗಿ, ಶಬ್ಬೀರ್ ಬಾಗವಾನ ಸೇರಿ ಅಪಾರ ಸಂಖ್ಯೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು. ತಮ್ಮ ಕ್ಷೇತ್ರದಲ್ಲಿಯೇ ಸುಮಾರು ೨೯ ಸಾವಿರ ಮತಗಳಲ್ಲಿ ೫೫೮ಕ್ಕೂ ಅಧಿಕ ನಕಲಿ ಮತಗಳು ಹಾಗೂ ೫ ಸಾವಿರಕ್ಕೂ ಅಧಿಕ ಡಬಲ್ ವೋಟಿಂಗ್ ಪ್ರಕರಣಗಳು ಕಂಡುಬಂದಿವೆ. ಒಂದೇ ಒಂದು ಮತದಿಂದ ಪ್ರಧಾನಮಂತ್ರಿ, ಸಂಸದರು ಹಾಗೂ ಶಾಸಕರು ಗೆದ್ದ ಮತ್ತು ಸೋತ ಉದಾಹರಣೆಗಳಿವೆ. ಅಂತಹ ಅಮೂಲ್ಯ ಮತದಾನ ಹಕ್ಕನ್ನು ಕಸಿಯುವ ಹುನ್ನಾರ ನಡೆಯುತ್ತಿದೆ. ದೇಶದಲ್ಲಿ ಇಂತಹ ಕುತಂತ್ರಗಳು ನಡೆಯಲು ಬಿಡಬಾರದು ಎಂಬ ಸದುದ್ದೇಶದಿಂದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಈ ಜಾಗೃತಿ ಹೋರಾಟ ಹಮ್ಮಿಕೊಳ್ಳಲಾಗಿದೆ.