ಕಳೆದ ಕೆಲವು ದಿನಗಳಿಂದ ಪಟ್ಟಣದ ವಿವಿಧಡೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಪಟ್ಟಣದ ದೇಸಾರ ವಾಡೆ, ಭೂವಿ ಗಲ್ಲಿ, ಪಿಕೆಪಿಎಸ್ ಸೊಸೈಟಿ ಹತ್ತಿರ, ಬ್ರಾಹ್ಮಣ ಗಲ್ಲಿ ಹೀಗೆ ವೆಂಕಟೇಶ್ವರ ನಗರ ಹಲವಾರು ವಾರ್ಡ್ಗಳಲ್ಲಿ ಜನರಿಗೆ ದುರ್ವಾವಾಸನೆ ಬೀರುತ್ತಿರುವ ಕಂದುಬಣ್ಣದ ನೀರು ಪೂರೈಕೆಯಿಂದಾಗಿ ಸಾರ್ವಜನಿಕರಲ್ಲಿ ಅನಾರೋಗ್ಯದ ಭೀತಿ ಕಾಡುತ್ತಿದೆ.
ಕನ್ನಡಪ್ರಭ ವಾರ್ತೆ ಲೋಕಾಪುರ
ಕಳೆದ ಕೆಲವು ದಿನಗಳಿಂದ ಪಟ್ಟಣದ ವಿವಿಧಡೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಪಟ್ಟಣದ ದೇಸಾರ ವಾಡೆ, ಭೂವಿ ಗಲ್ಲಿ, ಪಿಕೆಪಿಎಸ್ ಸೊಸೈಟಿ ಹತ್ತಿರ, ಬ್ರಾಹ್ಮಣ ಗಲ್ಲಿ ಹೀಗೆ ವೆಂಕಟೇಶ್ವರ ನಗರ ಹಲವಾರು ವಾರ್ಡ್ಗಳಲ್ಲಿ ಜನರಿಗೆ ದುರ್ವಾವಾಸನೆ ಬೀರುತ್ತಿರುವ ಕಂದುಬಣ್ಣದ ನೀರು ಪೂರೈಕೆಯಿಂದಾಗಿ ಸಾರ್ವಜನಿಕರಲ್ಲಿ ಅನಾರೋಗ್ಯದ ಭೀತಿ ಕಾಡುತ್ತಿದೆ.ಪ್ರಾಯೋಗಿಕವಾಗಿ ಆರಂಭಿಸಿರುವ ವಾರ್ಡುಗಳ ನಲ್ಲಿಗಳಲ್ಲಿ ದುರ್ವಾಸನೆ ಭರಿತ, ಕಾಫಿ ಬಣ್ಣದ ನೀರು ಪೂರೈಕೆ ಆಗುತ್ತಿದೆ. ಹಲವು ದಿನಗಳಿಂದ ಮನೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬುದು ಜನರ ಆರೋಪ.
ಸರ್ಕಾರ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಾಕಷ್ಟು ಅನುದಾನ ನೀಡಿದರೂ ಪಪಂ ಅಧಿಕಾರಿಗಳು ಅಧಿಕಾರಿಗಳು ಕುಡಿಯುವ ಫಿಲ್ಟರ್ ಮಾಡದೇ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದಾರೆ. ಫಿಲ್ಟರ್ ಮಾಡಿದ ನೀರನ್ನು ಸಾರ್ವಜನಿಕರಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ೧ನೇ ವಾರ್ಡಿನ ಜನರು ಒತ್ತಾಯಿಸಿದ್ದಾರೆ.ಕಲುಷಿತ ನೀರು ಪೂರೈಕೆಗೆ ಆಕ್ರೋಶಗೊಂಡ ಸ್ಥಳೀಯರು ಗುರುವಾರ ಪಟ್ಟಣ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಭೂವಿ ಗಲ್ಲಿಯ ಸಾರ್ವಜನಿಕರಾದ ಫಕ್ರದ್ದೀನ ಬೂದಿಹಾಳ, ಗುಲಾಬಸಾಬ ಅತ್ತಾರ, ಸೈಯದಸಾಬ ಜೀರಗಾಳ, ಲಾಲಸಾಬ ತೋರಗಲ್ಲ, ವಿಠ್ಠಲ ಹಡಪದ, ಇನಾಯತಲ್ಲಾ ಜಮಾದಾರ, ಹುಸೇನಸಾಬ ರಾಮದುರ್ಗ, ಸಲೀಮಬಾಷಾ ಬೂದಿಹಾಳ, ಶೌಕತ ಕರ್ನಾಚಿ, ಅಲ್ಲಿಸಾಬ ಟಪಾಲದಾರ, ಬೋರುಸಾಬ ತೋರಗಲ್ಲ, ಸಾದೀಕ ರಾಮದುರ್ಗ, ಜಾವೀದ್ ಜೀರಗಾಳ, ಕಾಶೀಮಬೇಗ ಜಮಾದಾರ, ಗಣೇಶ ಭೋವಿ, ಶೀವು ಭೋವಿ, ವಸೀಮ ಅತ್ತಾರ, ಶಬ್ಬೀರ ತೋರಗಲ್ಲ, ಹಯಾತಬಾಷಾ ರಾಮದುರ್ಗ, ಅಬ್ದುಲರೆಹಮಾನ ರಾಮದುರ್ಗ, ಸುಭಾನಿ ಜಮಾದಾರ. ಹಾಗೂ ವಾರ್ಡ ನಂ-೯ ಮಹಿಳೆಯರು ಈ ವೇಳೆ ಇದ್ದರು.ಪಟ್ಟಣ ಪಂಚಾಯಿತಿಯವರು ವರ್ಚಗಲ್ ಕೆರೆಯಿಂದ ಫಿಲ್ಟರ್ ಮಾಡದೇ ಕಲುಷಿತ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ನೀರು ದುರ್ವಾಸನೆ ಬೀರುತ್ತಿದೆ. ಹಲವು ತಿಂಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿರುವುದು ಪಟ್ಟಣ ಪಂಚಾಯಿತಿ ಅಧಿಕಾರಿಗೆ ತಿಳಿಸಿದ್ದರೂ ಗಮನ ಹರಿಸುತ್ತಿಲ್ಲ. ಈ ನೀರನ್ನು ಕುಡಿದು ಯಾವುದೇ ಅನಾಹುತ ಆದರೆ ಅದಕ್ಕೆ ಪಪಂ ಅಧಿಕಾರಿಗಳು, ತಹಸೀಲ್ದಾರರೇ ನೇರ ಹೊಣೆಗಾರರು. ಕೂಡಲೇ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವದು.
- ಗುಲಾಬಸಾಬ ಅತ್ತಾರ ಸ್ಥಳೀಯ ವಾರ್ಡ್ ನಿವಾಸಿಗಳು, ಲೋಕಾಪುರವರ್ಚಗಲ್ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ಕಲುಷಿತ ನೀರು ಪೂರೈಕೆಯಾಗುವ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಎಲ್ಲ ವಾಟರ್ ಮನ್ಗಳ ಜೊತೆಗೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.
- ಸಾಬಣ್ಣಾ ಪೂಜೇರ ಪಪಂ ಮುಖ್ಯಾಧಿಕಾರಿಗಳು ಲೋಕಾಪುರ