ಪುರಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು

KannadaprabhaNewsNetwork |  
Published : Dec 31, 2023, 01:30 AM IST
ಪುರಸಭೆ ಕಾಂಗ್ರೇಸ್ ಭರ್ಜರಿ ಗೆಲುವು:  | Kannada Prabha

ಸಾರಾಂಶ

ಕಾಂಗ್ರೆಸ್‌ ಅಭ್ಯರ್ಥಿ ಶಾಹಿರಾಬಾನು ಅಲ್ಲಾಭಕ್ಷ ಢವಳಗಿ 454 ಮತಗಳನ್ನು ಪಡೆದು, ಪಕ್ಷೇತರ ಅಭ್ಯರ್ಥಿ ಅಬ್ದುಲ್‌ ಅಜೀಜ್‌ ಡೋಂಗರಿಸಾಬ ಅವರನ್ನು ೨೩೭ ಮತಗಳ ಅಂತರದಿಂದ ಸೋಲಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪುರಸಭೆ ಸದಸ್ಯ ಅಲ್ಲಾಭಕ್ಷ ಢವಳಗಿ ನಿಧನದಿಂದ ತೆರವಾಗಿದ್ದ ಪುರಸಭೆಯ ವಾರ್ಡ್‌ ನಂ.೧೮ ಸೋಠೆಗಲ್ಲಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ಅಭ್ಯರ್ಥಿ ಶಾಹಿರಾಬಾನು ಅಲ್ಲಾಭಕ್ಷ ಢವಳಗಿ 454 ಮತಗಳನ್ನು ಪಡೆದು, ಪಕ್ಷೇತರ ಅಭ್ಯರ್ಥಿ ಅಬ್ದುಲ್‌ ಅಜೀಜ್‌ ಡೋಂಗರಿಸಾಬ ಅವರನ್ನು ೨೩೭ ಮತಗಳ ಅಂತರದಿಂದ ಸೋಲಿಸಿದರು.

ಕಾಂಗ್ರೆಸ್‌ನ ಶಾಹಿರಾಭಾನು ಅಲ್ಲಾಭಕ್ಷ ಢವಳಗಿ 454 ಮತ ಪಡೆದು ಜಯಶಾಲಿಯಾದರು. ಬಿಜೆಪಿಯ ದಯಾರಾಮಸಿಂಗ್ ತುಳಜಾರಾಮಸಿಂಗ್ ರಾಯಚೂರ 61, ಎಎಪಿಯ ನೂರಹಮ್ಮದ ಶಮಶೋದ್ದಿನ ಶಿವಣಗಿ 23, ಜೆಡಿಎಸ್‌ನ ಲಾಳೆಮಶ್ಯಾಕ ಉರ್ಫ್‌ ಬುಡ್ಡಾ ನಾಯ್ಕೋಡಿ 48, ಎಸ್‌ಡಿಪಿಐನ ಮೊಹಮ್ಮದ ಸೇಮಿಯುಲ್ಲಾ ಅಮೀರ ಹಂಜಾ ಹುಣಚಗಿ 18, ಪಕ್ಷೇತರ ಅಭ್ಯರ್ಥಿ ಅಬ್ದುಲಜೀಜ ಡೊಂಗರಿಸಾಬ ಢವಳಗಿ 217 ಮತಗಳನ್ನು ಪಡೆದರು. ೫ ನೋಟಾ ಮತಗಳು ಬಿದ್ದಿವೆ.

ಫಲಿತಾಂಶದ ಬಳಿಕ ತಾಲೂಕು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಮೈಬೂಬ ನಾಲತವಾಡ, ಕಾಮರಾಜ ಬಿರಾದಾರ, ಲಾಳೆಮಶ್ಯಾಕ ನಾಯ್ಕೋಡ, ಕುತುಬದ್ದಿನ ಸೋಠೆ, ಕಾಮರಾಜ ಬಿರಾದಾರ ಯಾಶಿನ ಸೋಠೆ, ಬಾಬು ನದಾಫ.ರಶೀದ ಬೇಪಾರಿ, ಮೈಬೂಬ ಗೊಳಸಂಗಿ, ಎಸ್ ಎಂ, ಸೋಟೆ, ಬಾಬು ಹುಸೇನ್ ಮುಲ್ಲಾ, ಇಮಾಮಲಿ ಚಿಮ್ಮಲಗಿ, ಹಬ್ಬು ಮುಜಾವರ. ಮೈಬೂಬ ಅತ್ತಾರ, ಪೀರು ಶಿವಪೂರಿ, ಶಿವಾನಂದ ಹಿರೇಮಠ, ಹಬೀಬ ನಾಲತವಾಡ, ಬಾಪ್ ಢವಳಗಿ, ಪುರಸಭೆ ಸದಸ್ಯ ರಿಯಾಜಮ್ಮದ ಢವಳಗಿ ಸೇರಿದಂತೆ ಹಲವರು ಇದ್ದರು.

--

ದಿ.ಅಲ್ಲಾಭಕ್ಷ ಢವಳಗಿ ನಿಷ್ಠಾವಂತ ಸರಳ ಮತ್ತು ಸಜ್ಜನ ರಾಜಕಾರಣಿ ಹಾಗೂ ಸಮಾಜ ಸೇವಕರಾಗಿದ್ದರು. ಅವರ ಅಗಲಿಕೆಯಿಂದ ಪಕ್ಷಕ್ಕೆ, ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಉಪಚುನಾವಣೆಯಲ್ಲಿ ಡವಳಗಿ ಮನೆಯವರಿಗೆ ಟಿಕೆಟ್ ನೀಡುವಂತೆ ಶಾಸಕ ಸಿ.ಎಸ್ ನಾಡಗೌಡರು ಸೂಚಿಸಿದ್ದರು. ಅದರಂತೆ ಆ ಕುಟುಂಬದವರೇ ವಿಜಯಶಾಲಿಯಾಗಿದ್ದಾರೆ.

- ಗುರು ತಾರನಾಳ. ತಾಲೂಕು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ
ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ