ಕೈ ವಶವಾದ ಹಾಲು ಉತ್ಪಾದಕರ ಸಂಘ । ಕಾಂಗ್ರೆಸ್‌ಗೆ 12ರಲ್ಲಿ 11 ಸ್ಥಾನ
ಹೋಬಳಿಯ ಅತ್ತಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ನೆಡೆದ ಚುನಾವಣೆಯಲ್ಲಿ 12 ನಿರ್ದೇಶಕರ ಪೈಕಿ 11 ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಹಾಲು ಉತ್ಪಾದಕರ ಸಂಘ ಕಾಂಗ್ರೆಸ್ ವಶವಾಗಿದೆ.
ತೀವ್ರ ಪ್ರತಿಷ್ಠೆಯ ಕಣವಾಗಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಮುಂಜಾಗ್ರತ ಕ್ರಮವಾಗಿ ಪೊಲೀಸರ ಬಿಗಿ ಭದ್ರತೆಯಲ್ಲಿ ಭಾನುವಾರ ಚುನಾವಣೆ ನಡೆಯಿತು. ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ 12 ಅಭ್ಯರ್ಥಿಗಳು ಜೆಡಿಎಸ್ ಬೆಂಬಲಿತ 12 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರು. ಭಾನುವಾರ ಬೆಳಿಗ್ಗೆಯಿಂದಲೇ ಮತದಾನ ಶಾಂತಿಯುತವಾಗಿ ನಡೆಯಿತು. ಸಂಜೆ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತ 11 ಅಭ್ಯರ್ಥಿಗಳು ಜೆಡಿಎಸ್ ಬೆಂಬಲಿತ ಒಬ್ಬ ಅಭ್ಯರ್ಥಿ ಜಯಗಳಿಸಿದರು. ಚುನಾವಣಾಧಿಕಾರಿಯಾಗಿ ಅಣ್ಣಪ್ಪ ಕಾರ್ಯ ನಿರ್ವಹಿಸಿದರು.ಈ ಚುನಾವಣೆಯು ಸೇರಿ ಕಳೆದ 4 ಅವಧಿಯ ಚುನಾವಣೆಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಜಯಗಳಿಸಿದ್ದರು. ಈ ಚುನಾವಣೆಯಲ್ಲಿ ಜಯಗಳಿಸುವ ಮೂಲಕ 5ನೇ ಬಾರಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ.
ನೂತನ ನಿರ್ದೇಶಕರಾದ ಎ .ಕೆ.ಅಶೋಕ್, ಯೋಗೇಶ್, ಎಟಿ ಧನಂಜಯ, ಗೋವಿಂದ ಜಿ., ಚಂದ್ರೇಗೌಡ, ಎಆರ್ ವೆಂಕಟೇಶ್, ನಾಗರತ್ನ, ಸ್ಮಿತಾ, ಮಂಗಳ ಕೆ.ಎನ್., ಭಾರತಿ, ಎ ಎಲ್ ಲಿಂಗರಾಜು, ಪಾರ್ವತಮ್ಮ, ಅವರನ್ನು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅಭಿನಂದಿಸಿದರು.
ಮುಖಂಡರಾದ ಮಾಲಿಂಗೇಗೌಡ, ಎ.ಎನ್.ನಾಗೇಂದ್ರ ಪ್ರಸಾದ್, ಟಿ. ಕಂಬೇಗೌಡ, ಎ.ಟಿ. ಶ್ರೀನಿವಾಸ್, ಸಹದೇವಣ್ಣ, ಸಣ್ಣ ತಿಮ್ಮೇಗೌಡ, ಮೊಗಣ್ಣ ಗೌಡ, ಹನುಮಂತೇಗೌಡ, ಕಿರಣ್, ಹುಲಿಕೆರೆ ಶಿವಸ್ವಾಮಿ, ಬಾಂಬೆ ರಮೇಶ್, ಕಾರ್ಯದರ್ಶಿ ತಿಮ್ಮ ಶೆಟ್ಟಿ, ಹಾಲು ಪರೀಕ್ಷಕ ಎನ್. ಮಂಜಪ್ಪ ಹಾಜರಿದ್ದರು.ಅತ್ತಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ ಹಿನ್ನೆಲೆ ನೂತನ ನಿರ್ದೇಶಕರನ್ನು ಮುಖಂಡರು, ಕಾರ್ಯಕರ್ತರು ಅಭಿನಂದಿಸಿದರು.