ವಿದ್ಯಾರ್ಥಿಗಳು ಮಾನವೀಯತೆ ಬೆಳೆಸಿಕೊಳ್ಳಲಿ: ಶರಣ ಸಾಹಿತಿ ಸವಿತಾ ಮಾಟೂರ

KannadaprabhaNewsNetwork | Published : Feb 6, 2024 1:31 AM

ಸಾರಾಂಶ

ಶಿಕ್ಷಣವು ಸಾಮನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ಯಾವುದೇ ಘಟನೆಯನ್ನು ಸಕಾರಾತ್ಮಕವಾಗಿ ನೋಡಿದಾಗ ಎಲ್ಲರಲ್ಲಿಯೂ ಒಳ್ಳೆಯ ಗುಣಗಳನ್ನು ಕಾಣಬಹುದು.

ಯಲಬುರ್ಗಾ: ಸತ್ಯ, ಶುದ್ಧ ಕಾಯಕ ಮಾಡುತ್ತಾ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದು ಇಲಕಲ್‌ನ ಶರಣ ಸಾಹಿತಿ ಸವಿತಾ ಎಂ.ಮಾಟೂರ ಹೇಳಿದರು.ಪಟ್ಟಣದ ಎಸ್.ಎ. ನಿಂಗೋಜಿ ಸೆಂಟ್ರಲ್ ಪಬ್ಲಿಕ್ ಸ್ಕೂಲಿನ ದಶಮಾನೋತ್ಸವ, ತಾಪಂ ಮಾಜಿ ಸದಸ್ಯೆ ಲಲಿತಾ ವೀರಪ್ಪ ನಿಂಗೋಜಿ ಸ್ಮರಣಾರ್ಥ ಕಾಯಕರತ್ನ ಪ್ರಶಸ್ತಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಶಿಕ್ಷಣವು ಸಾಮನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ಯಾವುದೇ ಘಟನೆಯನ್ನು ಸಕಾರಾತ್ಮಕವಾಗಿ ನೋಡಿದಾಗ ಎಲ್ಲರಲ್ಲಿಯೂ ಒಳ್ಳೆಯ ಗುಣಗಳನ್ನು ಕಾಣಬಹುದು ಎಂದರು.ದೃಢ ವಿಶ್ವಾಸದಿಂದ ಜೀವನ ಸಾಗಿಸಿದಾಗ ಏನೆಲ್ಲ ಸಾಧಿಸಬಹುದು. ಸಾಧನೆ ಸಾಧಕನ ಸ್ವತ್ತು. ಹಾಗಾಗಿ ಆಲಸಿ ಆಗದೇ ವಿದ್ಯಾರ್ಥಿ ಗಳು ಪರಿಶ್ರಮ ಪಟ್ಟು ಬಂಗಾರದ ಜೀವನ ಮಾಡಿಕೊಳ್ಳಬೇಕು. ಓದಿನ ಮೂಲಕ ಬಾಳನ್ನು ಬೆಳಗಿಸಿಕೊಳ್ಳಲು ಸರಳ ಸೂತ್ರಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.ಜಿಪಂ ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಶಿ ಮಾತನಾಡಿ, ಸ್ವಾತಂತ್ರ‍್ಯ ಹೋರಾಟಕ್ಕಾಗಿ ಹೋರಾಡಿದ ನಿಂಗೋಜಿ ಕುಟುಂಬದವರು ಅಪಾರ ಸಾಧನೆಗೆ ಸಾಕ್ಷಿಗಳಾಗಿದ್ದಾರೆ. ಶಿಕ್ಷಣ, ಸಾಹಿತ್ಯ, ಸಹಕಾರ, ಸಮಾಜ ಸೇವೆಯಲ್ಲಿ ನಿರತರಾದ ಅವರು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣದಿಂದ ವೈದ್ಯಕೀಯ ಬಿಇಡಿ ಡಿಗ್ರಿ ಕಾಲೇಜುಗಳನ್ನು ಸ್ಥಾಪಿಸಿದ್ದು ಶ್ಲಾಘನೀಯ ಎಂದರು.ಎ.ಎಂ. ಮದರಿ ಮಾತನಾಡಿ, ನಿಂಗೋಜಿ ಕುಟುಂಬದವರು ಅನೇಕ ಜನಪರ ಕಾರ್ಯಕ್ರಮಗಳಲ್ಲಿ ಸದಾ ನಿರತರಾಗಿರುವುದು ಗಮನಾರ್ಹ ಎಂದರು.ಕೊಪ್ಪಳದ ರಾಮಕೃಷ್ಣ ಆಶ್ರಮದ ಚೈತನ್ಯಾನಂದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ರತ್ಮಮ್ಮ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎ. ನಿಂಗೋಜಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ವೀರಣ್ಣ ಗಾಣಗೇರ, ಬಸವರಾಜ ಕರಾಟೆ, ರಾಜಶೇಖರ ನಿಂಗೋಜಿ, ಗೌಡಪ್ಪ ಬಲಕುಂದಿ, ರಾಮಣ್ಣ ಪ್ರಭಣ್ಣನವರ, ಮುದಕಪ್ಪ ಮಾಟೂರ, ಶಿವಪುತ್ರಪ್ಪ ಮಲಿಗೋಡದ, ಬಿ.ರಾಘವೇಂದ್ರ, ಬಸನಗೌಡ ಪೋ.ಪಾಟೀಲ ಇದ್ದರು.ಸಿಬಿಎಸ್ಸಿ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

Share this article