- ಹಿಂದೂಗಳು ಒಂದಾಗಿದ್ದರಿಂದ ಕಾಂಗ್ರೆಸ್‌ಗೂ, ಮುಸ್ಲಿಂರಿಗೂ ಸಮಾಧಾನವಿಲ್ಲ - - -
ಚನ್ನಗಿರಿ ತಾಲೂಕಿನ ಮರಡಿ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ ಮುಸ್ಲಿಮರು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದರೂ ಕ್ರಮ ಜರುಗಿಸಿಲ್ಲ. ಪಾಕಿಸ್ತಾನ ಜಿಂದಾಬಾದ್ ಅಂದವರ ವಿರುದ್ಧವೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಇಡೀ ರಾಜ್ಯದಲ್ಲಿ ಹಿಂದೂ ಸಮಾಜ ಒಂದಾಗಿರುವುದಕ್ಕೆ ಇತ್ತ ಕಾಂಗ್ರೆಸ್ ಸರ್ಕಾರಕ್ಕೂ ಸಮಾಧಾನವಿಲ್ಲ, ಅತ್ತ ಈ ರಾಜ್ಯದ ಮುಸ್ಲಿಮರಿಗೂ ಸಮಾಧಾನವಿಲ್ಲ. ರಾಜ್ಯದಲ್ಲಿ ಗಣೇಶೋತ್ಸವಗಳನ್ನು ಮಾಡಬೇಕೋ ಅಥವಾ ಬೇಡವೋ ಕಾಂಗ್ರೆಸ್ ಸರ್ಕಾರ ಹೇಳಿ ಬಿಡಲಿ ನೋಡೋಣ. ಪಾಕಿಸ್ತಾನ ಜಿಂದಾಬಾದ್ ಅನ್ನೋರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಸರ್ಕಾರವು ಭಾರತ್ ಮಾತಾ ಕೀ ಜೈ ಘೋಷಣೆ ಮಾಡಬೇಕೋ ಅಥವಾ ಬೇಡವೋ ಎಂಬುದನ್ನೂ ಸ್ಪಷ್ಟ ಮಾಡಿ ಬಿಡಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.ಮಸೀದಿಗಳ ಮುಂದೆ ಶ್ರೀ ಗಣೇಶ ಮೆರವಣಿಗೆ ಸಾಗುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಕಾಂಗ್ರೆಸ್ ಸರ್ಕಾರ ಹೇಳಿಬಿಡಲಿ. ರಾಜ್ಯಾದ್ಯಂತ ಹಳ್ಳಿಹಳ್ಳಿಗಳ ಪ್ರತಿ ಗಣೇಶೋತ್ಸವದಲ್ಲೂ ಯುವಕರು ಹಿಂದುತ್ವದ ಬಗ್ಗೆ ಜಾಗೃತರಾಗಿದ್ದಾರೆ. ನಾನಾಗಲೀ, ಬಸವನಗೌಡ ಪಾಟೀಲ ಯತ್ನಾಳ್ ಆಗಲಿ ಹಿಂದುತ್ವದ ಪರ ಇಲ್ಲಿಗೆ ಬಂದಿದ್ದೇವೆ. ಇಡೀ ರಾಜ್ಯದಲ್ಲಿ ಹಿಂದುತ್ವದ ಪರ ನಿಲ್ಲುತ್ತೇವೆ. ಎಲ್ಲಿಯವರೆಗೆ ಮುಸಲ್ಮಾನರ ಬೆಂಬಲಿತ ಕಾಂಗ್ರೆಸ್ ಸರ್ಕಾರ ರಾಜ್ಯದಿಂದ ತೊಲಗುವುದಿಲ್ಲವೋ, ಅಲ್ಲಿಯವರೆಗೆ ಹಿಂದುತ್ವದ ಪರ ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದವರು ಕುರುಬರಿಗೆ ಎಸ್‌ಟಿ ಮೀಸಲಾತಿ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಬೀದರ್, ಕಲುಬುರಗಿ, ಯಾದಗಿರಿ ಭಾಗದ ಕುರುಬರಿಗೆ ಬಹಳ ಹಿಂದೆಯೇ ಎಸ್‌ಟಿಗೆ ಸೇರ್ಪಡೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಹೋಗಿತ್ತು. ಈಗ ಕ್ಲ್ಯಾರಿಪಿಕೇಷನ್‌ಗೆ ಕೇಂದ್ರದಿಂದ ಬಂದಿದೆ. ತಾನೇ ಏನೋ ಮಾಡಿದ್ದೇನೆ, ಕಾಂಗ್ರೆಸ್ ಸರ್ಕಾರವೇ ಏನೋ ಮಾಡುತ್ತೆಂಬಂತೆ ನಾಟಕ ಮಾಡಿದರು. ಎಸ್‌ಟಿ ಮೀಸಲಾತಿ ವಿಚಾರದ ನಾಟಕಕ್ಕಾಗಿಯೇ ನಿನ್ನೆ ಮಂಗಳವಾರ ಸಭೆ ಮಾಡಿದರು. ಆಗಷ್ಟೇ ಅರ್ಥವಾಗಿ ಜನ ಛೀಮಾರಿ ಹಾಕುತ್ತಾರೆಂದು ಸಭೆಯನ್ನೇ ಮುಂದಕ್ಕೆ ಹಾಕಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಟೀಕಿಸಿದರು.
(ಕೋಟ್)
- ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ.
(ಸಾಂದರ್ಭಿಕ ಚಿತ್ರ)