ಮೋದಿಜಿ ಟೀಕೆ ಮಾಡುವ ನೈತಿಕತೆ ಕಾಂಗ್ರೆಸ್ಸಿಗರಿಗಿಲ್ಲ: ಗುರುಲಿಂಗಪ್ಪ ಅಂಗಡಿ

KannadaprabhaNewsNetwork |  
Published : Jun 10, 2026, 02:45 AM IST
ಮೋದಿಜಿಯವರನ್ನು ಟೀಕೆ ಮಾಡುವ ನೈತಿಕತೆ ಕಾಂಗ್ರೆಸ್ಸಿಗರಿಗಿಲ್ಲ: ಗುರುಲಿಂಗಪ್ಪ ಅಂಗಡಿ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ಬೆಲೆಯೇರಿಕೆ ಮಾಡಿದ್ದಾರೆ ಎಂದು ಮಾತನಾಡುವ ಕಾಂಗ್ರೆಸ್ಸಿಗರದ್ದು, ರಾಜ್ಯದಲ್ಲಿ ಬೆಲೆ ಏರಿಕೆಯೇ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಧಾನಿ ನರೇಂದ್ರ ಮೋದಿಯವರು ಬೆಲೆಯೇರಿಕೆ ಮಾಡಿದ್ದಾರೆ ಎಂದು ಮಾತನಾಡುವ ಕಾಂಗ್ರೆಸ್ಸಿಗರದ್ದು, ರಾಜ್ಯದಲ್ಲಿ ಬೆಲೆ ಏರಿಕೆಯೇ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಕಿಡಿಕಾರಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಎಂ.ಬಿ. ಪಾಟೀಲರು ಸೇರಿ ಕಾಂಗ್ರೆಸ್‌ ನಾಯಕರೆಲ್ಲ ಬಿಜೆಪಿ ಅವಧಿಯಲ್ಲಿ ಗ್ಯಾಸ್ ಹಾಗೂ ತೈಲ ಸೇರಿ ಎಲ್ಲದರ ಮೇಲೂ ಬೆಲೆ ಏರಿಕೆ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಸಚಿವ ಎಂ.ಬಿ. ಪಾಟೀಲರು ಸಹ ಕೇಂದ್ರದ ಬೆಲೆ ಏರಿಕೆ ಬಗ್ಗೆ ಮಾತನಾಡುವ ಮೊದಲು ರಾಜ್ಯದ ಬೆಲೆ ಏರಿಕೆ ಬಗ್ಗೆ ಗಮನಿಸಬೇಕು. ಏಕೆಂದರೆ ಕೇಂದ್ರದಲ್ಲಿ ಅವರದ್ದೇ ಯುಪಿಎ ಸರ್ಕಾರದ ಡಾ.ಮನಮೋಹನಸಿಂಗ್‌ ಆಡಳಿತದಲ್ಲಿ 10 ವರ್ಷಗಳಲ್ಲಿ ಪೆಟ್ರೋಲ್ ಮೇಲೆ 103 ಪರ್ಸೆಂಟ್ ಏರಿಕೆಯಾಗಿದ್ದು, ನರೇಂದ್ರ ಮೋದಿ ಅವರ 10 ವರ್ಷಗಳ ಅವಧಿಯಲ್ಲಿ ಕೇವಲ 45 ಪರ್ಸೆಂಟ್ ಮಾತ್ರ ಬೆಲೆ ಏರಿಕೆಯಾಗಿದೆ. ಯುಪಿಎ ಅವಧಿಯಲ್ಲಿ 10 ವರ್ಷಗಳಲ್ಲಿ ಡಿಸೇಲ್ ಬೆಲೆ 150 ಪರ್ಸೆಂಟ್ ಆಗಿದ್ದು, ಮೋದಿ ಅವರ ಅವಧಿಯಲ್ಲಿ ಕೇವಲ 82 ಪರ್ಸೆಂಟ್ ಮಾತ್ರ ಹೆಚ್ಚಳವಾಗಿದೆ ಎಂದು ಹೇಳಿದರು.ಸಚಿವ ಎಂ.ಬಿ. ಪಾಟೀಲರು ತಮ್ಮ ಭಾಷಣದಲ್ಲಿ 2028ಕ್ಕೆ ನಗರ ಕ್ಷೇತ್ರದಿಂದ ಅಲ್ಪಸಂಖ್ಯಾತರನ್ನು ಶಾಸಕರನ್ನಾಗಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿರುವುದನ್ನು ಗಮನಿಸಿದರೆ ಅವರು ಇದುವರೆಗೂ ಅಲ್ಪಸಂಖ್ಯಾತರನ್ನು ಶಾಸಕರನ್ನಾಗಿಸಲು ಪ್ರಯತ್ನಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದನ್ನು ಅಲ್ಪಸಂಖ್ಯಾತರು ಸೂಕ್ಷ್ಮವಾಗಿ ಅವಲೋಕಿಸಬೇಕು. ಮಾತೆತ್ತಿದರೆ ಬಿಜೆಪಿಯಲ್ಲಿ ಅಡ್ಜೆಸ್ಟ್ ಮೆಂಟ್ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ನಾಯಕರ ಬಗ್ಗೆ ಮಾತನಾಡುವ ನಗರ ಶಾಸಕ ಯತ್ನಾಳರು ಹೆಸ್ಕಾಂ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಡಿರುವ ಭಾಷಣ ಎಲ್ಲರೂ ಕೇಳಬೇಕು. ಸಚಿವ ಎಂ.ಬಿ. ಪಾಟೀಲರ ಕೆಲಸದ ಕುರಿತು ಪ್ರಚಾರ ಮಾಡಲು ಎಂ.ಬಿ. ಪಾಟೀಲರೇ ನನಗೆ ಕರೆ ಮಾಡಿದ್ದರು. ರೇಲ್ವೆಯಲ್ಲಿ ಬೆಂಗಳೂರಿಗೆ ಹೊರಟಿದ್ದ ನಾನು ಬಾದಾಮಿ ರೈಲು ನಿಲ್ದಾಣದಲ್ಲಿ ಅರ್ಧಕ್ಕೆ ರೈಲಿನಿಂದ ಇಳಿದು ಬಂದೆ. ಸಿದ್ದರಾಮಯ್ಯನವರ ಎದುರಿನಲ್ಲೇ ಎಂ.ಬಿ. ಪಾಟೀಲರ ಕಾರ್ಯ ಹೊಗಳಿದೆ ಎಂದಿದ್ದಾರೆ. ಇದು ಅವರದ್ದು ಅಡ್ಜಸ್ಟ್‌ಮೆಂಟ್‌ ಪಾಲಿಟಿಕ್ಸ್ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದ ಅವರು, ಈ ಮೂಲಕ ಎಂ.ಬಿ. ಪಾಟೀಲರೊಂದಿಗೆ ಹೊಂದಿದ ತಮ್ಮ ಒಳಒಪ್ಪಂದವನ್ನು ಯತ್ನಾಳರೇ ಬಹಿರಂಗಪಡಿಸಿದ್ದಾರೆ ಎಂದು ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡ ಡಿ.ಜಿ. ಬಿರಾದಾರ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲರಜಾಕ್‌ ವಾಲಿಕಾರ ಇದ್ದರು.

ರಾಜ್ಯ ಸರ್ಕಾರ ಒಂದು ಲೀಟರ್ ಪೆಟ್ರೊಲ್ ಮೇಲೆ ₹33 ಹಾಗೂ ಡಿಸೇಲ್ ಮೇಲೆ ₹21 ಟ್ಯಾಕ್ಸ್ ಹಾಕುತ್ತಿದೆ. ಆದರೆ ಜನಪರವಾದ ಮೋದಿಯವರ ಸರ್ಕಾರ ಬಂದ ಮೇಲೆ ತೈಲಗಳ ಮೇಲಿನ ಟ್ಯಾಕ್ಸ್ ಕಡಿತಗೊಳಿಸಿದ್ದಾರೆ. ರಾಜ್ಯವೂ ತೈಲಗಳ ಮೇಲೆ ಟ್ಯಾಕ್ಸ್ ಕಡಿತಗೊಳಿಸಲಿ. ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿಯ 10 ವರ್ಷಗಳಲ್ಲಿ ಚಿನ್ನಸ್ಬೆಲೆ 377 ಪರ್ಸೆಂಟ್ ಬೆಲೆ ಏರಿಕೆಯಾಗಿದ್ದು, ಬಿಜೆಪಿ ಅವಧಿಯಲ್ಲಿ ಕೇವಲ 163 ಪರ್ಸೆಂಟ್ ಹೆಚ್ಚಾಗಿದೆ. ಕಾಂಗ್ರೆಸ್‌ನವರೇ ಸಾಕಷ್ಟು ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಬಿಜೆಪಿ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇವರಿಗಿಲ್ಲ.

-ಗುರುಲಿಂಗಪ್ಪ ಅಂಗಡಿ ಬಿಜೆಪಿ ಜಿಲ್ಲಾಧ್ಯಕ್ಷರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್‌.ಬಿ.ತಿಮ್ಮಾಪುರಗೆ ಸಚಿವ ಸ್ಥಾನ ನೀಡಿ
ಕೃಷ್ಣಾ ನ್ಯಾಯಾಧಿಕರಣ ತಿರ್ಪೀನಂತೆ ಅಧಿಸೂಚನೆ ಹೊರಡಿಸಲಿ: ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ