ಕನ್ನಡಪ್ರಭ ವಾರ್ತೆ ಗೋಕಾಕ
ಪಹಲ್ಗಾಮ್ ದಾಳಿಯಲ್ಲಿ ನಮ್ಮ ದೇಶದ 26 ನಾಗರಿಕರನ್ನು ಹತ್ಯೆ ಮಾಡಿದ ಉಗ್ರರ ಹಾಗೂ ಉಗ್ರರ ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ನಮ್ಮ ಸೇನೆ ಆಪರೇಷನ್ ಸಿಂದೂರ ಹೆಸರಿನಲ್ಲಿ ತಕ್ಕ ಪಾಠಕಲಿಸಿದೆ. ಉಗ್ರರ ಅಡಗುತಾಣಗಳು ಹಾಗೂ ಪಾಕಿಸ್ತಾನದ ಏರ್‌ಬೇಸ್‌ಗಳನ್ನು ದ್ವಂಸ ಮಾಡಿ ನಮ್ಮ ಹೆಣ್ಣುಮಕ್ಕಳ ತಂಟೆಗೆ ಬಂದರೆ ನಾವು ಸೆದೆಬಡೆಯದೆ ಬಿಡುವುದಿಲ್ಲ ಎಂದು ಉತ್ತರ ನೀಡಿದೆ. ಇದನ್ನು ಸಂಭ್ರಮಿಸಬೇಕಾದ ಕಾಂಗ್ರೆಸ್ ಪಕ್ಷ ಸಾಕ್ಷಿ ಕೇಳುತ್ತಿರುವುದು ಸೇನೆಗೆ ಮತ್ತು ದೇಶಕ್ಕೆ ಮಾಡುತ್ತಿರುವ ಬಹುದೊಡ್ಡ ದ್ರೋಹ ಎಂದು ಕಿಡಿಕಾರಿದರು.
ರಾಷ್ಟ್ರ ರಕ್ಷಣೆಯಲ್ಲಿ ಸೈನಿಕರಿಗೆ ಹಾಗೂ ಅವರ ಕುಟುಂಬಗಳಿಗೆ ನೈತಿಕ ಬಲ ತುಂಬುವ ಕಾರ್ಯವಾಗಬೇಕಿದೆ. ದೇಶಕ್ಕಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿ ನಮ್ಮ ನಿಮ್ಮೆಲ್ಲರ ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ತಿರಂಗಾ ಯಾತ್ರೆ ಗೌರವ ಸೂಚಕವಾಗಿದೆ. ಪ್ರತಿಯೊಬ್ಬರು ಸೈನಿಕರಿಗೆ ಹಾಗೂ ಸೈನಿಕರ ಕುಟುಂಬಕ್ಕೆ ಬೆಂಬಲವಾಗಿ ನಿಂತುಕೊಳ್ಳುವಂತೆ ಕರೆ ನೀಡಿದರು.ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ 200 ಮೀ. ಉದ್ದದ ತ್ರಿವರ್ಣ ಧ್ವಜವು ತಿರಂಗಾ ಯಾತ್ರೆಯುದ್ದಕ್ಕೂ ಅತ್ಯಂತ ಮೆರಗು ತಂದಿತು. ಮೆರವಣಿಗೆಯೂದ್ದಕ್ಕೂ ಭಾರತದ ಪರ ಘೋಷಣೆ ಮೊಳಗಿದವು.
ಈ ವೇಳೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಬಿಜೆಪಿ ಬೆಳಗಾವಿ ಗ್ರಾಮೀಣ ಅಧ್ಯಕ್ಷ ಸುಭಾಸ ಪಾಟೀಲ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಆರ್‌ಎಸ್‌ಎಸ್‌ನ ಎಮ್ ಡಿ ಚುನಮರಿ, ಮುಖಂಡರಾದ ಭೀಮಗೌಡ ಪೋಲಿಸಗೌಡರ, ಸುರೇಶ ಸನದಿ, ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಪ್ರಮೋದ ಜೋಶಿ, ಆನಂದ ಅತ್ತುಗೋಳ, ಮಂಜುನಾಥ ಪ್ರಭುನಟ್ಟಿ, ರಾಜೇಶ್ವರಿ ಒಡೆಯರ, ಸುರೇಶ ಪತ್ತಾರ, ಅಬ್ಬಾಸ ದೇಸಾಯಿ, ಪರಶುರಾಮ ಭಗತ, ಬಾಳೆಶ ತೋಟಗಿ, ಪಂಡಿತಪ್ಪ ಕಂಬಳಿ, ಕುಸುಮಾ ಖನಗಾಂವಿ, ಅಡಿವೆಪ್ಪ ನಾವಲಗಟ್ಟಿ, ಲಕ್ಕಪ್ಪ ತಹಶೀಲದಾರ, ಲಕ್ಷ್ಮಣ ತಳ್ಳಿ, ಶ್ರೀರಂಗ ನಾಯಕ, ಮಾಜಿ ಸೈನಿಕರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.