ನಾಪೋಕ್ಲಿನಲ್ಲಿ ಸಂಪರ್ಕ ಕಡಿತ: ಜನಜೀವನ ಅಸ್ತವ್ಯಸ್ತ

KannadaprabhaNewsNetwork |  
Published : Aug 03, 2026, 02:45 AM IST
2ಎನ್ ಪಿ ಕೆ-7ನಾಪೋಕ್ಳು - ಮೂರ್ನಾಡು ಸಂಪರ್ಕ ರಸ್ತೆಯ ಹುದ್ದೂರು ಗ್ರಾಮಪಂಚಾಯಿತಿ ಬೊಲಿ ಬಾಣೆ ಬಳಿ ರಸ್ತೆ ಕಾವೇರಿಪ್ರವಾಹದಿಂದ ರಸ್ತೆ ಮುಳುಗಡೆಯಾಗಿ  ವಾಹನ ಸಂಚಾರ ಸಂಪೂರ್ಣ  ಸ್ಥಗಿತಗೊಂಡಿದೆ.2ಎನ್ ಪಿ ಕೆ-8.ನಾಪೋಕ್ಲು ಮಡಿಕೇರಿ ಮುಖ್ಯ ಸಂಪರ್ಕ ರಸ್ತೆಯ ಕೊಟ್ಟಮುಡಿಯಲ್ಲಿಕಾವೇರಿ ಪ್ರವಾಹ ಏರುತ್ತಿದ್ದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು | Kannada Prabha

ಸಾರಾಂಶ

ಬಿರುಸಿನ ಮಳೆಯಿಂದಾಗಿ ನಾಪೋಕ್ಲು ಕಂದಾಯ ವ್ಯಾಪ್ತಿಯ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿ, ತೊರೆಗಳು ಉಕ್ಕಿ ಹರಿಯುತ್ತಿದ್ದು ತಗ್ಗು ಪ್ರದೇಶದ ಬಹುತೇಕ ರಸ್ತೆಗಳು, ಗದ್ದೆ ತೋಟಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ.

ನಾಪೋಕ್ಲು: ಬಿರುಸಿನ ಮಳೆಯಿಂದಾಗಿ ನಾಪೋಕ್ಲು ಕಂದಾಯ ವ್ಯಾಪ್ತಿಯ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿ, ತೊರೆಗಳು ಉಕ್ಕಿ ಹರಿಯುತ್ತಿದ್ದು ತಗ್ಗು ಪ್ರದೇಶದ ಬಹುತೇಕ ರಸ್ತೆಗಳು, ಗದ್ದೆ ತೋಟಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ.

ಸಮೀಪದ ಬಲಮುರಿಯ ಕಿರು ಸೇತುವೆ, ಪೆರಿಯಪರಂಬು-ಕಲ್ಲು ಮೊಟ್ಟೆ ರಸ್ತೆ ಮುಳುಗಡೆಯಾಗಿದೆ. ನಾಪೋಕ್ಳು-ಮೂರ್ನಾಡು ಸಂಪರ್ಕ ರಸ್ತೆಯ ಹುದ್ದೂರು ಗ್ರಾಪಂನ ಬೊಲಿಬಾಣೆ ಬಳಿ ರಸ್ತೆ ಪ್ರವಾಹದಿಂದ ಮುಳುಗಡೆಯಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪೊಲೀಸರು ಎಚ್ಚರಿಕೆ ಫಲಕ ಅಳವಡಿಸಿದ್ದಾರೆ.

ನಾಪೋಕ್ಲು-ಮಡಿಕೇರಿ ಮುಖ್ಯ ಸಂಪರ್ಕ ರಸ್ತೆಯ ಕೊಟ್ಟಮುಡಿಯಲ್ಲಿ ಪ್ರವಾಹ ಹೆಚ್ಚುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯದ್ದು ಗೋಡ್ಸೆ, ಕಾಂಗ್ರೆಸಿಗರದ್ದು ಗಾಂಧಿ ವಂಶ: ಮೌರ್ಯ
ಮೇವು ಕೊರತೆ ನೀಗಿಸಲು ಸಿದ್ಧತೆ: ಉಡುಪಿ ಡಿಸಿ ಸ್ವರೂಪ