ಮನಸ್ಸಿನ ಸಮತೋಲನಕ್ಕೆ ಸ್ಥಿತಪ್ರಜ್ಞೆ ಅಗತ್ಯ

KannadaprabhaNewsNetwork |  
Published : Mar 27, 2024, 01:05 AM IST
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗಿದ ’ಮಾಸದ ಮಾತು’ ಕಾರ್ಯಕ್ರಮದಲ್ಲಿ ಮನೋವೈದ್ಯ ಡಾ. ಸಿ.ಆರ್.ಚಂದ್ರಶೇಖರ ಮಾತನಾಡಿದರು.  | Kannada Prabha

ಸಾರಾಂಶ

ಮನುಷ್ಯನಿಗೂ ಹಾಗೂ ಇತರ ಪ್ರಾಣಿಗಳಿಗೆ ಇರುವ ವ್ಯತ್ಯಾಸ ವಿಷದೀಕರಿಸಿ ಪ್ರಾಣಿಗಳಲ್ಲಿ ಆಸೆ ಆಕಾಂಕ್ಷೆ ಮಿತವಾಗಿದ್ದು, ಆದರೆ ಮನುಷ್ಯರಲ್ಲಿ ಹಾಗಿಲ್ಲ. ಸಂಪತ್ತಿನ ಗಳಿಕೆ, ಕೀತಿಶನಿ, ಇನ್ನೂ ಬೇಕು ಎನ್ನುವ ಬಯಕೆಗಳು ಮಾನವನಲ್ಲಿ ಮಾನಸಿಕ ಕ್ಷೋಭೆಯನ್ನುಂಟು ಮಾಡುತ್ತಿವೆ

ಗದಗ: ವ್ಯಕ್ತಿ ತನ್ನ ಇತಿಮಿತಿ ಅರಿತು ಬದುಕನ್ನು ನಡೆಸಬೇಕು. ಅತಿ ಆಸೆ, ಹಪಾಹಪಿತನ ವ್ಯಕ್ತಿಯಲ್ಲಿ ಉದ್ವೇಗ, ಭಯ, ಗೊಂದಲಗಳನ್ನು ಸೃಷ್ಠಿಸಿ ಮಾನಸಿಕ ಒತ್ತಡ ಸೃಷ್ಠಿಸುತ್ತಿದೆ. ಬದಲಾದ ಜೀವನಶೈಲಿ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿದೆ. ವ್ಯಕ್ತಿ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸ್ವಿತಪ್ರಜ್ಞೆ ಹೊಂದುವುದು ಅಗತ್ಯವಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸಿ.ಆರ್.ಚಂದ್ರಶೇಖರ ಹೇಳಿದರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ನಡೆದ ಮಾಸದ ಮಾತು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಮನುಷ್ಯನಿಗೂ ಹಾಗೂ ಇತರ ಪ್ರಾಣಿಗಳಿಗೆ ಇರುವ ವ್ಯತ್ಯಾಸ ವಿಷದೀಕರಿಸಿ ಪ್ರಾಣಿಗಳಲ್ಲಿ ಆಸೆ ಆಕಾಂಕ್ಷೆ ಮಿತವಾಗಿದ್ದು, ಆದರೆ ಮನುಷ್ಯರಲ್ಲಿ ಹಾಗಿಲ್ಲ. ಸಂಪತ್ತಿನ ಗಳಿಕೆ, ಕೀತಿಶನಿ, ಇನ್ನೂ ಬೇಕು ಎನ್ನುವ ಬಯಕೆಗಳು ಮಾನವನಲ್ಲಿ ಮಾನಸಿಕ ಕ್ಷೋಭೆಯನ್ನುಂಟು ಮಾಡುತ್ತಿವೆ.

ಮನಸ್ಸಿನ ಹತೋಟಿ ಮೆದುಳಿನಿಂದ ನಡೆಯುತ್ತಿರುವುದರಿಂದ ಹಾರ್ಮೋನುಗಳು ಅಗತ್ಯ ಪ್ರಮಾಣದಲ್ಲಿ ಶ್ರವಿಸುವಂತೆ ಮಾಡಬೇಕು. ಮನಸ್ಸನ್ನು ಆನಂದದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ನಮ್ಮ ಆಚರಣೆ ಬದಲಾಯಿಸಿಕೊಳ್ಳಬೇಕು. ಸಮಾಜಮುಖಿ ಚಿಂತನೆ, ಉಪಕಾರ, ದಯೆ, ಅನುಕಂಪ,ಪ್ರೀತಿ ತೋರುವಿಕೆಯ ಮೂಲಕ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದೆಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಡಾ. ಜಿ.ಬಿ. ಪಾಟೀಲ ಮಾತನಾಡಿ, ಮಾನಸಿಕ ಆರೋಗ್ಯ ತಜ್ಞ ಡಾ. ಚಂದ್ರಶೇಖರ ಅವರು ಬೆಂಗಳೂರಿನ ನಿಮಾನ್ಸ ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದರೂ ನಿರಂತರ ರಾಜ್ಯದ ಎಲ್ಲ ಭಾಗಗಳ ವಿದ್ಯಾಸಂಸ್ಥೆಗಳಿಗೆ ಹೋಗಿ ಮಾನಸಿಕ ಆರೋಗ್ಯದ ಕುರಿತು ಉಪನ್ಯಾಸ, ಪುಸ್ತಕಗಳ ವಿತರಣೆ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆಂದರು. ಇದೇ ಸಂದರ್ಭದಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಆರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಡಾ.ಸಿ.ಆರ್. ಚಂದ್ರಶೇಖರ ವೈದ್ಯರಾಗಿ ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಳ್ಳದೇ ರೋಗಿಯ ಮನೆಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಿ ಜನಸಾಮಾನ್ಯರ ಮನೋವೈದ್ಯರಾಗಿದ್ದಾರೆ. 310 ಕ್ಕೂ ಅಧಿಕ ಪುಸ್ತಕಗಳ ಮೂಲಕ ಅಂಗೈಯಲ್ಲಿ ಆರೋಗ್ಯ ನೀಡಿದ್ದಾರೆ. ತಮ್ಮ ಬದುಕನ್ನೇ ಸಮಾಜಕ್ಕೆ ಸಮರ್ಪಿಸಿಕೊಂಡ ಅಪರೂಪದ ವೈದ್ಯರಾಗಿದ್ದಾರೆ ಎಂದರು.

75 ವಸಂತಗಳನ್ನು ಪೂರೈಸಿದ ನಿಮಿತ್ತ ಪರಿಷತ್ತಿನಿಂದ ಅವರನ್ನು ಸನ್ಮಾನಿಸಲಾಯಿತು. ಸಂವಾದದಲ್ಲಿ ಡಾ.ರಾಜೇಂದ್ರ ಗಡಾದ, ಎ.ಎಸ್. ಮಕಾನದಾರ ಪ್ರೊ. ಚಂದ್ರಶೇಖರ ವಸ್ತ್ರದ, ಪ್ರೊ.ಅನ್ನದಾನಿ ಹಿರೇಮಠ ಮೊದಲಾದವರು ಭಾಗವಹಿಸಿದ್ದರು. ಮಂಜುಳಾ ವೆಂಕಟೇಶಯ್ಯ ಆತಿಥ್ಯ ವಹಿಸಿದ್ದರು. ಮನೋವೈದ್ಯ ಡಾ. ವಿಜಯ ಹರವಿಶೆಟ್ಟರ, ಡಾ. ಸೋಮಶೇಖರ ಬಿಜ್ಜಳ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಚ್. ಬೇಲೂರ, ಮುಂಡರಗಿ ಕಸಾಪ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ, ಶಿರಹಟ್ಟಿ ಕಸಾಪ ಅಧ್ಯಕ್ಷ ಎಸ್.ಬಿ.ಹೊಸೂರ, ಡಾ. ಕಾವೆಂಶ್ರೀ ವಿಶ್ವನಾಥ, ನಾಲವಾಡದ ವೆಂಕಟೇಶ ಗುಡಿ, ಸತೀಶಕುಮಾರ ಚನ್ನಪ್ಪಗೌಡರ, ಶೇಖಣ್ಣ ಕಳಸಾಪುರಶೆಟ್ರು, ಡಾ.ಎಸ್.ಬಿ. ಶೆಟ್ಟರ, ಡಿ.ಎಸ್. ಬಾಪುರಿ, ಡಾ. ವಿಜಯದತ್ತ ವಿ.ಎಂ, ಬಸವರಾಜ ವಾರಿ, ಕಾರ್ತಿಕ ಮುನವಳ್ಳಿ, ಸಿ.ಎಂ.ಮಾರನಬಸರಿ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!