ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಐದು ಶತಮಾನಗಳ ನಿರಂತರ ಹೋರಾಟದ ಫಲವಾಗಿ ಹಿಂದೂ ಸಮಾಜಕ್ಕೆ ಸಂದ ಶ್ರೀರಾಮ ಜನ್ಮಭೂಮಿಯ ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮ ಮಂದಿರದಲ್ಲಿ ಜ.22 ರ ಬೆಳಿಗ್ಗೆ 11 ಗಂಟೆಗೆ ಶ್ರೀ ಬಾಲ ರಾಮನ ವಿಗ್ರಹದ ಪ್ರತಿಷ್ಠಾಪನೆಯಾಗಲಿದೆ ಎಂದು ಎಂದು ವಿಶ್ವ ಹಿಂದೂ ಪರಿಷತ್ ಶೃಂಗೇರಿ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್ ಹೇಳಿದರು.ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿತನಾಗಲಿರುವ ಶ್ರೀರಾಮಚಂದ್ರ ಪ್ರತಿಯೊಬ್ಬ ಹಿಂದೂವಿನ ಹೃದಯದ ಮಿಡಿತ ವಾಗಿದ್ದಾರೆ. ಆದ್ದರಿಂದ ಪ್ರತಿಷ್ಠಾಪನೆ ಆಗುತ್ತಿರುವ ಜ.೨೨ರಂದು ಅಯೋಧ್ಯೆಯಲ್ಲಿ ಜರುಗಲಿರುವ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಇಡೀ ರಾಷ್ಟ್ರದ ಚೇತನ ಒಂದಾಗಿ ಆ ಪುಣ್ಯ ಕ್ಷಣಗಳಲ್ಲಿ ತಾವು ಇದ್ದಲ್ಲಿಂದಲೇ ಪೂರ್ಣ ಪ್ರಮಾಣದಲ್ಲಿ ಭಾಗವಹಿಸುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಪ್ರತಿ ಮನೆ, ಮನೆಗೆ ಈಗ ಪೂಜಿತನಾದ ಶ್ರೀರಾಮಲಲ್ಲಾನ ಎದುರು ವಿಧಿ ವಿಧಾನಗಳಿಂದ ಪೂಜಿಸಲ್ಪಟ್ಟ ಪ್ರಸಾದ ಮಂತ್ರಾಕ್ಷತೆಯನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶಾದ್ಯಂತ ಎಲ್ಲಾ ಹಿಂದೂ ಮನೆಗಳನ್ನು ತಲುಪಿಸುವ ಅಭಿಯಾನ ರೂಪಿಸಿದೆ. ಅದರಂತೆ ಶೃಂಗೇರಿಯಲ್ಲೂ ಅಭಿಯಾನದ ಯಶಸ್ಸಿಗೆ ಸಮಿತಿಗಳು ರಚನೆಯಾಗಿದ್ದು ಜನವರಿ ಒಂದರಿಂದ 15ರ ಒಳಗೆ ನಮ್ಮ ಜಿಲ್ಲೆಯ ಎಲ್ಲಾ ರಾಮಭಕ್ತರ ಮನೆಗಳಿಗೂ ಮಂತ್ರಾಕ್ಷತೆ, ಮಂದಿರದ ಭಾವಚಿತ್ರ, ವಿವರಗಳು, ನಿವೇದನಾ ಕರಪತ್ರ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ವಿಶೇಷ ಕಾರಣಗಳನ್ನು ಹೊರತುಪಡಿಸಿ ಜಿಲ್ಲೆಯಾದ್ಯಂತ ಜನವರಿ 7 ರಂದು ಒಂದೇ ದಿನದಲ್ಲಿ ಮಂತ್ರಾಕ್ಷತೆ ಅಭಿಯಾನ ಪೂರ್ಣಗೊಳಿಸಲು ಕಾರ್ಯಕರ್ತರು ಹುಮ್ಮಸ್ಸಿನಿಂದ ತಯಾರಾಗಿರುತ್ತಾರೆ. ಈಗಾಗಲೇ ಮಂತ್ರಾಕ್ಷತೆ ಪ್ರತಿಯೊಂದು ಗ್ರಾಮ ಗಳು ಭಕ್ತಿ ಪೂರ್ವಕವಾಗಿ ಸ್ವೀಕರಿಸಿ ವಾದ್ಯ ಮೆರವಣಿಗೆಗಳಲ್ಲಿ ಕೊಂಡೊಯ್ದು ದೇವಸ್ಥಾನಗಳಲ್ಲಿ ಇಳಿಸಿಕೊಂಡಿದ್ದಾ ರೆ. ಹಂಚಿಕೆಗೆ ಮಂತ್ರಾಕ್ಷತೆಯನ್ನು ಪ್ಯಾಕೆಟ್ ಗಳಲ್ಲಿ ತುಂಬಿಸುವುದು ನಿವೇದನಾ ಕರ ಪತ್ರ ಹಾಗೂ ರಾಮಮಂದಿರದ ಫೋಟೋ ವಿಂಗಡನ ಕಾರ್ಯಕ್ರಮಗಳಲ್ಲಿ ರಾಮಭಕ್ತರು ಸಂಭ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಜ. 22 ರಂದು ಶೃಂಗೇರಿ ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮ ಹಾಗೂ ವಾರ್ಡ್, ಆಯ್ದ ದೇವಾಲಯಗಳಲ್ಲಿ ರಾಮಭಕ್ತರು ಸಾಮೂಹಿಕವಾಗಿ ಸೇರಿ ಪೂಜೆ ಭಜನೆ ಮತ್ತು ಹೋಮ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಾಮೂಹಿಕವಾಗಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ವೀಕ್ಷಿಸುವ ಏರ್ಪಾಡುಗಳನ್ನು ಮಾಡಿಕೊಳ್ಳುತ್ತಿದ್ದಾರೆ.ಹಾಗೆಯೇ ಅಂದು ಸಂಜೆ ಪ್ರತೀ ಹಿಂದೂಗಳ ಮನೆಯಲ್ಲಿ ಉತ್ತರ ದಿಕ್ಕಿಗೆ ಮುಖ ಮಾಡಿ ಐದು ದೀಪಗಳನ್ನು ಬೆಳಗಿಸಿ ಐದು ಶಮಾನಗಳ ಸುಧೀರ್ಘ ಹೋರಾಟ, ಬಲಿದಾನ ನೆನೆದು ಸತ್ಯಮೇವ ಜಯತೆ ಎನ್ನುವ ಸನಾತನ ಜ್ಞಾನ ಅರಿವಿನ ಬೆಳಕನ್ನು ಹರಡುವಂತೆ ಮನವಿ ಮಾಡಿದ್ದಾರೆ.