ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ
ಪಟ್ಟಣದ ಸಂತೆ ಮೈದಾನದ ರಾಮದೇವರ ಬೀದಿಯ ರಾಮಂದಿರದಲ್ಲಿ ವಿಶೇಷ ಅಲಂಕಾರದಿಂದ ಪೂಜೆ ನಡೆಸಲಾಯಿತು. ಬೆಳಗ್ಗೆ ಹೊಂಡದ ಆಂಜನೇಯಸ್ವಾಮಿ ದೇವಾಲಯ ಬಳಿ ಭಾರಿ ಸಂಖ್ಯೆಯಲ್ಲಿ ರಾಮಭಕ್ತರು ಪಾಲ್ಗೊಂಡಿದ್ದರು. ನೂರಾರು ಮಂದಿ ಕೇಸರಿ ಬಣ್ಣದ ಸೀರಿ, ಶಾಲು ಹೊದ್ದು ಕುಂಭ, ಆರತಿ ತಟ್ಟೆಯೊಂದಿಗೆ ರಾಮದೇವರ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪುಟ್ಟಮಕ್ಕಳು ಜೈ ಶ್ರೀರಾಮ ಘೋಷಣೆ ಕೂಗುತ್ತಿದ್ದರು. ರಾಮ, ಸೀತೆ, ಲಕ್ಷ್ಮಣ, ಆಂಜನೇಯನ ವೇಷಹಾಕಿ ಮೆರವಣಿಗೆಗೆ ವಿಶೇಷ ಮೆರಗನ್ನು ತಂದರು.
ವಿಶೇಷವೆಂದರೆ, ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಆಕಳು ಕರುವೊಂದು ಮೆರವಣಿಗೆಯಲ್ಲಿ ಬಂದು ನಂತರ ಭಜನೆ ಪೂಜೆ ಮಾಡುವವರೆಗೂ ಜೊತೆಯಲ್ಲಿದ್ದು, ಎಲ್ಲರೂ ಆಶ್ಚರ್ಯಪಡುವಂತೆ ಮಾಡಿತು. ಅನಂತರ ಮೆರವಣಿಗೆ ರಾಮ ದೇವಸ್ಥಾನಕ್ಕೆ ಆಗಮಿಸಿತು.ಅನಂತರ ಮಹಿಳೆಯರು ರಾಮದೇವರ ಭಜನೆ ಮಾಡಿದರು. ಭಕ್ತರು ಚಪ್ಪಾಳೆ ತಟ್ಟುತ್ತಾ ಭಜನೆ ಮಾಡಿ, ಸಂತಸಪಟ್ಟರು. ಶ್ರೀರಾಮ ಪ್ರತಿಷ್ಠಾಪನೆ ಹಿನ್ನೆಲೆ ರಾಮದೇವರಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು. ಅನಂತರ ಆಗಮಿಸಿದ ಭಕ್ತರಿಗೆ ವಿಶೇಷ ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮ ನೇತೃತ್ವವನ್ನು ಆದಿತ್ಯ ಗ್ಯಾಸ್ ಏಜೆನ್ಸಿ ಮಾಲೀಕ ಅಗಡಿ ಅಶೋಕ, ಚೆನ್ನವೀರಶೆಟ್ಟಿ, ಪವನ್ ಕಲಾಲ್ ಪಂಪಹೌಸ್ ಮಂಜು, ಮಲ್ಲಿಕ್ ಕಲಾಲ್, ಚಂದ್ರಶೇಖರ ಮಂಚಾಲಿ, ಅಗಡಿ ಆದಿತ್ಯ, ನಾಗೇಂದ್ರ, ಗೌರಮ್ಮ ಅಗಡಿ, ನಿವೇದಿತಾ ರಾಜು, ಆಶಾ ಮಂಜುನಾಥ, ವಸಂತಮ್ಮ ಸೇರಿದಂತೆ ಹಲವಾರು ಪ್ರಮುಖರು ಪಾಲ್ಗೊಂಡಿದ್ದರು.
- - --22ಕೆ.ಎಸ್ ಎಚ್ಆರ್1: ಶಿರಾಳಕೊಪ್ಪ ಪಟ್ಟಣದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದಲ್ಲಿ ರಾಮದೇವರ ಮೆರವಣಿಗೆ ನಡೆಸಲಾಯಿತು.