ಪರಿಸರ ಸಮತೋಲನದಿಂದ ಜೈವಿಕ ಸಂಪತ್ತಿನ ಉಳಿವು: ಡಿ.ವಿ. ಗಿರೀಶ್

KannadaprabhaNewsNetwork | Published : Jun 8, 2024 12:33 AM

ಸಾರಾಂಶ

ಚಿಕ್ಕಮಗಳೂರುಪರಿಸರದಲ್ಲಿ ಬಹಳ ಮುಖ್ಯವಾದ ಎರಡು ಅಂಶಗಳೆಂದರೆ ನೀರು ಮತ್ತು ಗಾಳಿ. ಇವುಗಳ ಸಮತೋಲನ ಕ್ಕಾಗಿ ಮಳೆ ಮತ್ತು ಮಣ್ಣನ್ನು ರಕ್ಷಿಸುವ ಜೊತೆಗೆ ಪರಿಸರವನ್ನು ಉಳಿಸಲು ಪಣ ತೊಟ್ಟಾಗ ಮಾತ್ರ ಮನುಕುಲದ ಉಳಿವಿಗೆ ದಾರಿಯಾಗುತ್ತದೆ ಎಂದು ವೈಲ್ಡ್‌ ಕ್ಯಾಟ್‌ ಸಿಯ ಸಂಸ್ಥಾಪಕ ಡಿ.ವಿ. ಗಿರೀಶ್‌ ಹೇಳಿದರು.

ಮಾಡೆಲ್ ಆಂಗ್ಲ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪರಿಸರದಲ್ಲಿ ಬಹಳ ಮುಖ್ಯವಾದ ಎರಡು ಅಂಶಗಳೆಂದರೆ ನೀರು ಮತ್ತು ಗಾಳಿ. ಇವುಗಳ ಸಮತೋಲನ ಕ್ಕಾಗಿ ಮಳೆ ಮತ್ತು ಮಣ್ಣನ್ನು ರಕ್ಷಿಸುವ ಜೊತೆಗೆ ಪರಿಸರವನ್ನು ಉಳಿಸಲು ಪಣ ತೊಟ್ಟಾಗ ಮಾತ್ರ ಮನುಕುಲದ ಉಳಿವಿಗೆ ದಾರಿಯಾಗುತ್ತದೆ ಎಂದು ವೈಲ್ಡ್‌ ಕ್ಯಾಟ್‌ ಸಿಯ ಸಂಸ್ಥಾಪಕ ಡಿ.ವಿ. ಗಿರೀಶ್‌ ಹೇಳಿದರು.ನಗರದ ಹೊರವಲಯದಲ್ಲಿರುವ ಮಾಡೆಲ್ ಆಂಗ್ಲ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ, ನೇಚರ್ ಕ್ಲಬ್ ನಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಿಸರದಲ್ಲಿ ಹಲವಾರು ಬೆಲೆ ಕಟ್ಟಲಾಗದ ವಸ್ತುಗಳಿವೆ. ಅವುಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಬೇಕು. ಅದರಲ್ಲಿಯೂ ಜೀವಕುಲದ ಪ್ರಾಣವಾಯುವಾದ ಗಾಳಿ, ನೀರು, ಮಣ್ಣು, ಮಳೆಯನ್ನು ದ್ವಿಗುಣ ಗೊಳಿಸಿ ಕೊಳ್ಳುವ ಪ್ರಯತ್ನದೆಡೆಗೆ ಸಾಗಬೇಕು. ನೀರಿನ ಮೂಲ ಮಳೆಯಾಗಿರುವುದರಿಂದ ಗಿಡ ಮರ ಕಾಡು ಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸಬೇಕು. ನೀರು, ವಿದ್ಯುತ್ ಅನ್ನು ಮಿತವಾಗಿ ಬಳಸಬೇಕೆಂದು ಕರೆ ನೀಡಿದರು.

ಮಳೆ ನೀರು ಕೊಯ್ಲು ಮಾಡಿ ನೀರಿನ ಸಂಗ್ರಹಣೆ ಮಾಡಬೇಕು. ಪ್ರಕೃತಿ ಉಳಿಸುವುದರೊಂದಿಗೆ ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು. ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕೆಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಡೆಲ್ ಶಾಲೆ ಪ್ರಾಂಶುಪಾಲ ಎಂ.ಎನ್.ಷಡಕ್ಷರಿ ಮಾತನಾಡಿ, ಮನುಷ್ಯ ದುರಾಸೆಯಿಂದ ಪ್ರಕೃತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ. 9 ರಿಂದ 12 ಇಂಚು ಮೇಲ್ಮಣ್ಣು ನಿರ್ಮಾಣವಾಗಲು ಸುಮಾರು 2 ಸಾವಿರ ವರ್ಷಗಳು ಬೇಕಾಗುತ್ತದೆ. ಆದ್ದರಿಂದ ಮಣ್ಣನ್ನು ರಕ್ಷಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪುರಾಣದಲ್ಲಿ ಈ ನೆಲದ ಪ್ರತಿಯೊಂದು ಪೂಜೆಗೆ ಯೋಗ್ಯವಾದುದು ಗಿಡ, ಮರ, ಮಣ್ಣನ್ನು, ನದಿ, ಸೂರ್ಯ, ಚಂದ್ರ, ಹಾವು ಇತ್ಯಾದಿ. ನೀರಿನ ಮಿತ ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಮನುಕುಲ ಎಚ್ಚೆತ್ತುಕೊಂಡು ನೀರಿನ ಮಿತ ಬಳಕೆಗೆ ಮುಂದಾಗದಿದ್ದರೆ, ಮುಂದೊಂದು ದಿನ ನೀರಿಗಾಗಿ ಮೂರನೇ ಮಹಾಯುದ್ಧ ನಡೆಯುವುದರಲ್ಲಿ ಆಶ್ಚರ್ಯವಿಲ್ಲವೆಂದು ತಮ್ಮ ಕಳವಳ ವ್ಯಕ್ತಪಡಿಸಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮರ ಗಳನ್ನು ಗುರುತಿಸುವುದು (ಟ್ರೀಸ್ ಐಡೆಂಟಿಫಿಕೇಶನ್) ಪಕ್ಷಿಗಳ ಗುರುತಿಸುವಿಕೆ, (ಬರ್ಡ್ಸ್ ಐಡೆಂಟಿ ಫಿಕೇಶನ್) ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರಿಸರ ಸಂಬಂಧಿ ಕಾರ್ಯಕ್ರಮಗಳು ಪ್ರದರ್ಶಿಸಿದರು. ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಆಂಗ್ಲ ಭಾಷಾ ಶಿಕ್ಷಕರಾದ ಶ್ರೀ ಇಮ್ರಾನ್ ಬಿ.ಎಂ ರವರ ನೇತೃತ್ವದಲ್ಲಿ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಜ್ಞಾವಿಧಿಯನ್ನು ಪ್ರತಿಯೊಬ್ಬರು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಯೋಗೀಶ್, ನೇಚರ್ ಕ್ಲಬ್ ಕೋ ಆರ್ಡಿನೇಟರ್ ಕಿಷ್ಟಿ ಪ್ರಭ, ಆಂಗ್ಲ ಭಾಷಾ ಶಿಕ್ಷಕರಾದ ಇಮ್ರಾನ್, ವಿದ್ಯಾರ್ಥಿಗಳಾದ ಸಾರಿಯ ಸುಲ್ತಾನ ಶೇಕ್, ಮೊಹಮ್ಮದ್ ಮುಸ್ತಾಫ, ಅಕ್ಸಾ ಮಿರ್ಜಾ, ಐರುತ್ ಉಪಸ್ಥಿತರಿದ್ದರು.ಪೋಟೋ ಫೈಲ್‌ ನೇಮ್‌ 7 ಕೆಸಿಕೆಎಂ 3ಚಿಕ್ಕಮಗಳೂರಿನ ಮಾಡೆಲ್‌ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಡಿ.ವಿ. ಗಿರೀಶ್‌ ಮಾತನಾಡಿದರು. ಎಂ.ಎನ್‌. ಷಡಕ್ಷರಿ ಇದ್ದರು.

Share this article