ಸ್ಥಳೀಯರ ಸಹಭಾಗಿತ್ವದಲ್ಲಿ ಕಾಡು, ಪ್ರಾಣಿಗಳ ಸಂರಕ್ಷಣೆ

KannadaprabhaNewsNetwork |  
Published : Jan 13, 2026, 03:00 AM IST
ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಜೋಯಿಡಾ ಸ್ಥಳೀಯರ ಸಭೆ ನಡೆಯಿತು. | Kannada Prabha

ಸಾರಾಂಶ

ಕಾಳಿ ಹುಲಿ ಯೋಜನೆ ಮತ್ತು ಹಳಿಯಾಳ ಅರಣ್ಯ ವಿಭಾಗಗಳ ಮೂಲ ನಿವಾಸಿಗಳ ಜಂಟಿ ಸಭೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ ವೃತ್ತ ಟಿ. ಹಿರಾಲಾಲ ಅಧ್ಯಕ್ಷತೆಯಲ್ಲಿ ದಾಂಡೇಲಿಯ ಹಾರ್ನ್ ಬಿಲ್ ಸಭಾ ಭವನದಲ್ಲಿ ಕಾಲ ನಡೆಯಿತು.

ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳೀಯರ ಸಭೆಯಲ್ಲಿ ತೀರ್ಮಾನ

ಕನ್ನಡಪ್ರಭ ವಾರ್ತೆ ದಾಂಡೇಲಿ

ಕಾಳಿ ಹುಲಿ ಯೋಜನೆ ಮತ್ತು ಹಳಿಯಾಳ ಅರಣ್ಯ ವಿಭಾಗಗಳ ಮೂಲ ನಿವಾಸಿಗಳ ಜಂಟಿ ಸಭೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ ವೃತ್ತ ಟಿ. ಹಿರಾಲಾಲ ಅಧ್ಯಕ್ಷತೆಯಲ್ಲಿ ದಾಂಡೇಲಿಯ ಹಾರ್ನ್ ಬಿಲ್ ಸಭಾ ಭವನದಲ್ಲಿ ಕಾಲ ನಡೆಯಿತು.

ಸಭೆಯಲ್ಲಿ ಸಮಸ್ಯೆ ಒಂದೊಂದಾಗಿ ಆಲಿಸುವ ಮೂಲಕ ಪರಿಹಾರ ಸೂಚಿಸುತ್ತಾ, ಸ್ಥಳೀಯರ ಸಹಭಾಗಿತ್ವದಲ್ಲಿ ಕಾಡು ಮತ್ತು ಪ್ರಾಣಿಗಳ ಸಂರಕ್ಷಣೆ ಮಾಡುವ ಅಂತಿಮ ತೀರ್ಮಾನಕ್ಕೆ ಬರಲಾಯಿತು.

ಕಾಳಿ ಹುಲಿ ಯೋಜನೆ ಮತ್ತು ಹಳಿಯಾಳ ವಿಭಾಗದಲ್ಲಿ ತಲೆತಲಾಂತರದಿಂದ ಅದಿಭೋಗಿಸಿಕೊಂಡು ಬರುವ ಕುಮರಿ ಜಮೀನು (ರಾಗಿ ಬೇಸಾಯ) ಜನರಿಗೆ ಸೇರಿದ್ದು, ಸಂಬಂಧಿಸಿದ ಉದ್ದೇಶದ ಸಾಗುವಳಿಗೆ ಬಳಸಲು ಅರಣ್ಯ ಇಲಾಖೆಯಿಂದ ತೊಂದರೆ ನೀಡಬಾರದೆಂದು ಅಧಿಕಾರಿಗಳಿಗೆ ಸಿಸಿಎಫ್‌ ಆದೇಶ ನೀಡಿದರು. ಈಗಾಗಲೇ 2002ರಲ್ಲಿ ಕುಮರಿ ಸಾಗುವಳಿದಾರರ ರೈತರು ಹಳಿಯಾಳ ಡಿಎಫ್‌ಓಗೆ ನೀಡಿದ ಮಾಹಿತಿ ಮತ್ತು ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದನ್ನು ಪರಿಗಣಿಸುವುದು ಮತ್ತು ಇತರ ರಾಜ್ಯಗಳಲ್ಲಿ ಆದ ಮಂಜೂರು ಉಲ್ಲೇಖ ಪರಿಗಣಿಸಿ ಪಹಣಿ ಮೇಲೆ ರೈತರ ಹೆಸರು ಬರುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ತೀರ್ಮಾನ ಮಾಡಲಾಯಿತು.

ಉದ್ಯೋಗ ಸೃಷ್ಟಿ ಮತ್ತು ಸ್ಥಳಿಯರ ಆದಾಯ ಹೆಚ್ಚಿಸಲು ಸ್ವಯಂ'''' ಕಾಳಿ ಹುಲಿ ಯೋಜನೆ ಎಲ್ಲಾ ವಲಯಗಳಿಗೆ ವಿಸ್ತರಣೆ ಮಾಡುವುದು. ಸ್ಥಳೀಯರಿಗೆ ಅರಣ್ಯ ಇಲಾಖೆಯಲ್ಲಿ ಮೊದಲ ಆದ್ಯತೆ ನೀಡಿ ಉದ್ಯೋಗ ನೀಡುವುದು, ಮಹಿಳೆಯರ ಉದ್ಯೋಗ ಸೃಷ್ಟಿ ಮಾಡುವುದು, ಮಕ್ಕಳ ಶಿಕ್ಷಣ ಪ್ರೋತ್ಸಾಹ ಮಾಡುವುದು. ಸ್ಥಳಿಯರ ಸಂಸ್ಕೃತಿ, ದೇವರು ಇವುಗಳ ಸಂರಕ್ಷಣೆ ಮತ್ತು ಜಾನಪದ ವಿಶ್ವವಿದ್ಯಾಲಯದ ಅಭಿವೃದ್ಧಿ ಮಾಡುವುದು.

ಕಳ್ಳಬೇಟೆ ನಿಗ್ರಹ ದಳದ ಕ್ಯಾಂಪ್ ಗಳಲ್ಲಿ ಕಾವಲುಗಾರರನ್ನು ಸ್ಥಳಿಯವಾಗಿ ನೇಮಿಸುವುದು ಮತ್ತು ಖಾಯಂಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು. ಸ್ವ ಖುಷಿ ಪ್ಯಾಕೇಜ್ ನೀಡುವ ಸಾಮಾಯಿಕ ಜಮಿನಿನ ವಾಂಟಣಿ ಮಾಡದೇ ನೀಡುವಂತಿಲ್ಲ, ಅಂತಹ ಪ್ರಕರಣಗಳಿದ್ದರೆ ಸರಿಪಡಿಸುವುದು.

ಕಾವಲುಗಾರರ ಖಾತೆಗೆ ಹಣ ಹಾಕಿ

ಜೋಯಿಡಾ ವಲಯದಲ್ಲಿ ಕೆಲಸ ಮಾಡುವ ಕಾವಲುಗಾರರಿಗೆ ಮಾಸಿಕ ಹಣ ಬ್ಯಾಂಕ್ ಖಾತೆಗೆ ನೀಡುವ ಬದಲು ನೇರವಾಗಿ ಕೈಗೆ ಕಡಿಮೆ ಹಣ ನೀಡಲಾಗುತ್ತದೆ ಎಂದು ಸ್ಥಳೀಯರು ದೂರಿದಾಗ, ಈ ತಿಂಗಳಿಂದ ಅವರವರ ಬ್ಯಾಂಕ್ ಖಾತೆಗೆ ಹಣ ಹಾಕಲು ಕ್ರಮವಹಿಸುವಂತೆ ಹಳಿಯಾಳ ಡಿಎಫ್‌ಓಗೆ ಸಿಸಿಎಫ್‌ ಸೂಚಿಸಿದರು.

ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ್ ಗಾನಡಾ, ಸಾಮಾಜಿಕ ಹೋರಾಟಗಾರ ಗೋಪಾಲ ಭಟ್, ದತ್ತಾರಾಮ ದೇಸಾಯಿ, ಪ್ರಸನ್ನ ಗಾವಡಾ, ಸುಭಾಷ ಮಾಂಜರೇಕರ ಮುಂತಾದವರು ವಿವಿಧ ಸಮಸ್ಯೆಗಳ ಗಮನ ಸೆಳೆದರು.

ಸಭೆಯಲ್ಲಿ ಕಾಳಿ ಹುಲಿ ಯೋಜನೆ ದಾಂಡೇಲಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಸಿಂಧೆ, ಹಳಿಯಾಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್, ಎಸಿಎಫ್‌ ಎಂ.ಎಸ್. ಕಳ್ಳಿಮಠ, ಸಂತೋಷ ಚೌವ್ಹಾಣ್, ಅಣಶಿ, ಕುಂಬಾರ ವಾಡಾ, ಗುಂದ, ಕ್ಯಾಸಲರಾಕ್, ಪಣಸೋಲಿ, ಕದ್ರಾ, ಜೋಯಿಡಾ, ಜಗಲಪೇಟ, ತಿನೈಘಾಟ ಸೇರಿದಂತೆ ಎಲ್ಲಾ ವಲಯ ಅರಣ್ಯಾಧಿಕಾರಿಗಳು, ಪ್ರಮುಖರಾದ ಕೃಷ್ಣ ಮಿರಾಶಿ, ಗುರುದತ್ತ ಮಿರಾಶಿ, ಸುನಿಲ್ ಮಿರಾಶಿ, ರಾಮಕೃಷ್ಣ ಪೆಡ್ನೇಕರ, ಚಂದ್ರಶೇಖರ ಸಾವರಕರ್, ಪ್ರಭಾಕರ ವೇಳಿಪ, ಸುನಿಲ್ ದೇಸಾಯಿ, ದಾಮೋದರ ಗೌಡ ಮುಂತಾದವರಿದ್ದರು. ಅಣಶಿ ಎಸಿಎಫ್‌ ಗಿರೀಶ್ ಸಂಕರಿ ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರು 5 ಪಾಲಿಕೆಗೆ ಎಲೆಕ್ಷನ್‌ ನಡೆಸುವುದಕ್ಕೆ ಜೂ.30 ಡೆಡ್ಲೈನ್‌
ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌