ಜಲಮೂಲಗಳ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಲಿ-ಡಾ. ನಿಂಗೋಜಿ

KannadaprabhaNewsNetwork |  
Published : Feb 02, 2024, 01:02 AM IST
ಕಾರ್ಯಕ್ರಮವನ್ನು ಡಾ.ವಿ.ಎ.ನಿಂಗೋಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಪಂಚ ಭೂತಗಳಲ್ಲಿ ಒಂದಾದ ನೀರು ನಾಗರಿಕತೆಯ ಬೆಳವಣಿಗೆಗೆ ಕಾರಣವಾಗಿದೆ. ಪಶು, ಪಕ್ಷಿ, ಪ್ರಾಣಿಗಳು ಸೇರಿದಂತೆ ಮಾನವ ಕುಲಕ್ಕೆ ನೀರು ಅತ್ಯವಶ್ಯಕ. ಆದರೆ ಜಲಮೂಲದ ಸಂರಕ್ಷಣೆ ಆಗುತ್ತಿಲ್ಲ. ಜಲ ಮೂಲಗಳ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಪಿ.ಪಿ.ಜಿ ಮಹಾವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ವಿ.ಎ. ನಿಂಗೋಜಿ ಹೇಳಿದರು.

ಗದಗ: ಪಂಚ ಭೂತಗಳಲ್ಲಿ ಒಂದಾದ ನೀರು ನಾಗರಿಕತೆಯ ಬೆಳವಣಿಗೆಗೆ ಕಾರಣವಾಗಿದೆ. ಪಶು, ಪಕ್ಷಿ, ಪ್ರಾಣಿಗಳು ಸೇರಿದಂತೆ ಮಾನವ ಕುಲಕ್ಕೆ ನೀರು ಅತ್ಯವಶ್ಯಕ. ಆದರೆ ಜಲಮೂಲದ ಸಂರಕ್ಷಣೆ ಆಗುತ್ತಿಲ್ಲ. ಜಲ ಮೂಲಗಳ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಪಿ.ಪಿ.ಜಿ ಮಹಾವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ವಿ.ಎ. ನಿಂಗೋಜಿ ಹೇಳಿದರು.

ನಗರದ ಕೆ.ಎಲ್.ಇ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ ಅರ್ಥಶಾಸ್ತ್ರ ವಿಭಾಗ ಹಾಗೂ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಲಶಕ್ತಿ ಅಭಿಯಾನ ಕುರಿತ ರಾಜ್ಯಮಟ್ಟದ ಒಂದು ದಿನದ ವಿದ್ಯಾರ್ಥಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಲ ಸಂರಕ್ಷಣೆ, ಒಣ ವ್ಯವಸಾಯ ಪದ್ಧತಿ ಹಾಗೂ ಮಳೆ ನೀರು ಕೊಯ್ಲುವಿನ ಮಹತ್ವವನ್ನು ವಿವರಿಸಿ ನೀರಿನ ಲಭ್ಯತೆಯಿಂದ ಮಾನವ ಜೀವನ ವಿಕಾಸದತ್ತ ಸಾಗಲು ಕಾರಣವಾಗಿದೆ. ನಾಗರಿಕತೆಯ ಬೆಳವಣಿಗೆಯ ಮೂಲ ಸೆಲೆಗಳಾದ ವಿದ್ಯುತ್ ಉತ್ಪಾದನೆ, ಆಧುನಿಕ ವ್ಯವಸಾಯ ಪದ್ಧತಿ, ಕೈಗಾರಿಕೆಗಳ ಸ್ಥಾಪನೆ ಮುಂತಾದ ಕಾರ್ಯಗಳಿಗೆ ನೀರು ಅತ್ಯವಶ್ಯಕ. ನೀರು ಉತ್ಪಾದನೆ ಪ್ರಕ್ರಿಯೆಗೆ ಜೀವಾಳ ಎಂದರು.

ಕಾಲಕಾಲಕ್ಕೆ ಮಳೆ ಆಗದಿರುವುದು ಸರಿಯಾದ ಕ್ರಮದಲ್ಲಿ ಬೆಳೆ ತೆಗೆಯಲಾಗದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರ ಆತ್ಮಹತ್ಯೆಗೆ ಅವರ ಅನಕ್ಷರತೆ ಕಾರಣ. ಮಳೆ ನೀರು, ಕೃಷಿ, ಜಲ ಸಂರಕ್ಷಣೆಯ ಕುರಿತು ರೈತರಿಗೆ ಜಾಗೃತಿಯನ್ನು ಮೂಡಿಸುವ ಕೆಲಸವಾಗಬೇಕು. ನೀರಿನ ಸಂರಕ್ಷಣೆ ಮಾಡಿ ಅದನ್ನು ನಮ್ಮ ದಿನಬಳಕೆಗೆ ಬಳಸಬೇಕು ಎಂದರು.

ಐ.ಕ್ಯೂ.ಎ.ಸಿ ಸಂಯೋಜಕ ಪ್ರೊ. ಪ್ರದೀಪ ಸಂಗಪ್ಪಗೋಳ ಮಾತನಾಡಿ, ಜಲ ಸಂರಕ್ಷಣೆಯು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಇಂದಿನ ಯುವ ಪೀಳಿಗೆ ಮಳೆ ನೀರು ಕೊಯ್ಲಿನ್ನು ಗ್ರಾಮೀಣ ಭಾಗಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನೆಹರು ಯುವ ಕೇಂದ್ರದ ಪ್ರತಿನಿಧಿ ವೀರೇಂದ್ರ ಪಾಟೀಲ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೀಣಾ, ಆರ್‌ಡಿಪಿಆರ್‌ದ ಡಾ. ಸಂಗನಗೌಡ ಪಾಟೀಲ, ಪ್ರೊ.ವಿಜಯ ಲಕ್ಷ್ಮಿ ಮೆಣಸಿನಕಾಯಿ ನಿರ್ಣಾಯಕರಾಗಿ ಆಗಮಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಓಬಯ್ಯ ಸ್ವಾಗತಿಸಿದರು. ಸುಶ್ಮಿತಾ ಪೂರ್ಜಾ ಪ್ರಾರ್ಥಿಸಿದರು. ರವಿ ಪೂಜಾರ ನಿರೂಪಿಸಿದರು. ಡಾ. ಕಿರಣ ಸುಡಿ ವಂದಿಸಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ