ಮುಂಡರಗಿ: ಪ್ರಶಿಕ್ಷಾರ್ಥಿಗಳು ದೊಡ್ಡದಾದ ಗುರಿಯನ್ನು ಇಟ್ಟುಕೊಳ್ಳುತ್ತಾರೆ. ಆದರೆ ಆ ಗುರಿಗೆ ತಕ್ಕಂತೆ ಪ್ರಯತ್ನವಿಲ್ಲದ ಕಾರಣ ಅವರು ಜೀವನದಲ್ಲಿ ಯಶಸ್ವಿಯನ್ನು ಕಾಣುತ್ತಿಲ್ಲ. ಆದ್ದರಿಂದ ಗುರಿಯ ಜೊತೆಗೆ ಸತತ ಪ್ರಯತ್ನವೂ ಬೇಕಾಗುತ್ತದೆ. ಅಂದಾಗ ಮಾತ್ರ ನಿಗದಿತ ಗುರಿಯನ್ನು ತಲುಪಲು ಸುಲಭವಾಗಿತ್ತದೆ ಎಂದು ಜ.ತೋಂಟದಾರ್ಯ ಸರಕಾರಿ ಪ್ರಥಮ ಧರ್ಜೆ ಕಾಲೇಜಿನ ರಾಜ್ಯಶಾಸ್ತ್ರದ ಪ್ರಧ್ಯಾಪಕಿ ಡಾ ಭಾರತಿ ಬ್ಯಾಳಿ ಹೇಳಿದರು.
ಆಡಳಿತಧಿಕಾರಿ ಡಾ.ಬಿ.ಜಿ.ಜವಳಿ ಮಾತನಾಡಿ ಕೃತಕ ಬುದ್ದಿಮತ್ತೆ ಬಂದರೂ ಅದು ಶಿಕ್ಷಕರ ಕೆಲಸ ನಿರ್ವಹಿಸದು. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಜವಾಬ್ದಾರಿಯುತ ಪಾಠವನ್ನು ಮಾಡಿ ನೀತಿ, ಮಾನವೀಯತೆ ಮತ್ತು ದೇಶಪ್ರೇಮ ಕಲಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಕಾಲೇಜು ಮೇಲ್ವಿಚಾರಣಾ ಸಮಿತಿಯ ಉಪಕಾರ್ಯಾಧ್ಯಕ್ಷ ಯು.ಸಿ.ಹಂಪಿಮಠ ಮತ್ತು ಪ್ರಶಿಕ್ಷಣಾರ್ಥಿಗಳಾದ ಮಂಜುನಾಥ ಕೆ, ಶೋಭಾ ಹೊನ್ನೂರ, ಕೊಟ್ರೇಶ ಎಚ್, ಮಂಜುನಾಥ ಕಲ್ಮನಿ ಮಾತನಾಡಿದರು. ಕಾಲೇಜು ಮೇಲ್ವಿಚಾರಣಾ ಸಮಿತಿಯ ಕಾರ್ಯಾಧ್ಯಕ್ಷ ಸಿ.ಎಸ್.ಅರಸನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಎಂ.ವಿ.ಕುಲಕರ್ಣಿ ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷೆ ಎಸ್.ವಿ.ಹಂಚಿನಾಳ ವರದಿವಾಚನ ಮಾಡಿದರು. ರೇಖಾ ಗಳಗನಾಥ ನಿರೂಪಿಸಿದರು. ಮಂಜುನಾಥ ಕಲ್ಮನಿ ವಂದಿಸಿದರು.