ಸಾಧನೆಗೆ ನಿರಂತರ ಪರಿಶ್ರಮ ಸಂಯಮ ಮುಖ್ಯ: ಗುಡೇಕೋಟೆ ರಾಜಣ್ಣ

KannadaprabhaNewsNetwork |  
Published : Nov 09, 2026, 02:30 AM IST
ಕೂಡ್ಲಿಗಿ ತಾಲೂಕು ಗುಡೇಕೋಟೆಯಲ್ಲಿ ತಾಪಂ ಮಾಜಿ  ಉಪಾಧ್ಯಕ್ಷೆ ವಿಶಾಲಾಕ್ಷ್ಮಮ್ಮ ರಾಜಣ್ಣ ಅವರ ನಿವಾಸದಲ್ಲಿ ಆಯೋಜಿಸಿದ್ದ ನಾಟಕ ನಿರ್ಧೇಶಕ ಹರೀಶ್ ಜಿಂಕೆ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಿವುನಾಯಕ ದೊರೆ, ನಿವೃತ್ತ ಪ್ರಾಂಶುಪಾಲ ಡಾ.ಎಂ.ರಾಜಣ್ಣ ಮುಂತಾದವರು ಹಾಜರಿದ್ದರು.   | Kannada Prabha

ಸಾರಾಂಶ

ಇಂದು ಪ್ರಶಸ್ತಿ, ಪುರಸ್ಕಾರ ಎಲ್ಲೆಂದರಲ್ಲಿ ಯಾರಿಗೆ ಬೇಕೋ ಅವರಿಗೆ ನೀಡುವ ಮೂಲಕ ಪ್ರಶಸ್ತಿಗಳ ಗೌರವ ಕಡಿಮೆಯಾಗುತ್ತಿರುವುದು ವಿಪರ್ಯಾಸ

ಕೂಡ್ಲಿಗಿ: ಸಾಧನೆ ಆ ಕ್ಷಣ ಉದ್ಭವಿಸುವುದಲ್ಲ, ನಿರಂತರ ಪರಿಶ್ರಮ, ತ್ಯಾಗ, ಸಂಯಮ, ತಾಳ್ಮೆಯಿಂದ ದೊರೆಯುವ ಪ್ರತಿಫಲವಾಗಿರುತ್ತದೆ, ಯುವಪೀಳಿಗೆ ಇದನ್ನರಿತು ಗುರು, ಗುರಿಯ ಮೂಲಕ ಸಾಧನೆಯ ಮೆಟ್ಟಿಲೇರಬೇಕಾಗುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಗುಡೇಕೋಟೆ ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಶುಕ್ರವಾರ ತಾಲೂಕಿನ ಗುಡೇಕೋಟೆಯ ತಾಪಂ ಮಾಜಿ ಉಪಾಧ್ಯಕ್ಷೆ ವಿಶಾಲಾಕ್ಷಮ್ಮ ರಾಜಣ್ಣ ನಿವಾಸದಲ್ಲಿ ಆಯೋಜಿಸಿದ್ದ ಗುಡೇಕೋಟೆ ಗಟ್ಟಿಗಿತ್ತಿ ಒನಕೆ ಓವವ್ವ, ಮರಳಿ ಬಾ ನಾಟಕದ ನಿರ್ದೇಶಕ ಹರೀಶ್ ಜಿಂಕೆ ಅವರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ಪ್ರಶಸ್ತಿ, ಪುರಸ್ಕಾರ ಎಲ್ಲೆಂದರಲ್ಲಿ ಯಾರಿಗೆ ಬೇಕೋ ಅವರಿಗೆ ನೀಡುವ ಮೂಲಕ ಪ್ರಶಸ್ತಿಗಳ ಗೌರವ ಕಡಿಮೆಯಾಗುತ್ತಿರುವುದು ವಿಪರ್ಯಾಸ, ನಿಜವಾದ ಕಲಾವಿದ,ಸಾಧಕರಿಗೆ ಪ್ರಶಸ್ತಿಗಳು ದೊರೆತಾಗ ಮಾತ್ರ ಪ್ರಶಸ್ತಿಗಳಿಗೆ ಮೌಲ್ಯ ಬರುತ್ತವೆ, ಭೀಮಣ್ಣ ಗಜಾಪುರ ರಚನೆಯ ಹರೀಶ್ ಜಿಂಕೆ ನಿರ್ದೇಶನದ ಮರಳಿ ಬಾ ನಾಟಕ ಎರಡು ತಿಂಗಳಲ್ಲಿ 50 ಪ್ರದರ್ಶನ ಕಂಡು ಶಾಲಾ ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುವ ಮೂಲಕ ಈ ನಾಟಕ ತಂಡ ಸಮಾಜಮುಖಿ ಕಾರ್ಯ ಮಾಡಿದ್ದು ಇಂತಹ ನಿರ್ದೇಶಕನಿಗೆ ವಿಜಯನಗರ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ಅರ್ಥಪೂರ್ಣವಾಗಿದೆ ಎಂದರು.

ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವುನಾಯಕ ದೊರೆ ಮಾತನಾಡಿ, ಮೊಬೈಲ್ ಬಂದ ಮೇಲೆ ನಾಟಕ ಮರೆಯಾಗಿ ಬಿಡುತ್ತವೆ ಎಂದು ಎಲ್ಲರು ಆತಂಕಕ್ಕೊಳಗಾಗಿದ್ದರು. ಆದರೂ ರಂಗಭೂಮಿಗೆ ಅಳಿವಿಲ್ಲ ಎನ್ನುವುದನ್ನು ಮರಳಿಬಾ ನಾಟಕ, ಗುಡೇಕೋಟೆ ಗಟ್ಟಿಗಿತ್ತಿ ಒನಕೆ ಓಬವ್ವ ನಾಟಕಗಳ ಪ್ರದರ್ಶನ ಕೂಡ್ಲಿಗಿ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ರಂಗಾಸಕ್ತರಲ್ಲಿ ಹೊಸ ಭರವಸೆ ಹುಟ್ಟಿಸಿವೆ, ಹಳ್ಳಿಗಾಡಿನಲ್ಲಿಯೂ ಸಹ ಹಬ್ಬ ಹರಿದಿನಗಳಲ್ಲಿ ಸಾಮಾಜಿಕ, ಪೌರಾಣಿಕ ನಾಟಕಗಳ ಸುಗ್ಗಿಯೇ ನಡೆಯುತ್ತದೆ ಇದರಿಂದ ಹಳ್ಳಿಗಾಡಿನ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿದಂತಾಗುತ್ತದೆ ಎಂದರು.

ತಾಪಂ ಮಾಜಿ ಉಪಾಧ್ಯಕ್ಷೆ ವಿಶಾಲಾಕ್ಷಮ್ಮ ರಾಜಣ್ಣ ಪ್ರಾಸ್ತವಿಕವಾಗಿ ಮಾತನಾಡಿದರು. ಭಜನಾ ಹಿರಿಯ ಕಲಾವಿದ ರಾಮಸಾಗರಹಟ್ಟಿ ಗುರುಶಂಕ್ರಪ್ಪ ತತ್ವಪದ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು. ಮುಖ್ಯಅತಿಥಿಗಳಾಗಿ ಭೀಮಣ್ಣ ಗಜಾಪುರ, ಹುಡೇಂ ಕೃಷ್ಣಮೂರ್ತಿ, ಸಂಜೆವಾಣಿ ನಾಗರಾಜ್, ಮನೋಹರ್ ಹೆಗಡೆ, ನಾಗರಹುಣಿಸೆ ದುರುಗೇಶ್, ಶಿಕ್ಷಕ ಎಚ್. ಪಾಂಡುರಂಗ, ಗುರುಶಂಕ್ರಪ್ಪ, ವಿಶಾಲಾಕ್ಷಿ ರಾಜಣ್ಣ, ಮನೋಹರ್ ಹೆಗಡೆ, ಪಿಡಿಒ ಜಿ. ಹನುಮಂಂತಪ್ಪ, ಮಾಜಿ ಗ್ರಾಪಂ ಸದಸ್ಯ ಕೆ. ಮಂಜುನಾಥ್, ಇಂದ್ರೇಶ್, ಕಲಾವಿದ ನುಂಕೇಶ್, ಕುರಿಹಟ್ಟಿ ರಾಜು, ಬಣವಿಕಲ್ಲು ಮಂಜುನಾಥ, ಗುಡೇಕೋಟೆ ರಾಮಾಂಜಿನಿ, ಅಜಯ್, ಅಮಾನ್, ದಾದಾ ಖಲಂದರ್, ಎಂ.ಆರ್. ಹೇಮಂತ್ ಬಾಪುಲೆ, ಸೌಮ್ಯ, ತೇಜಸ್ವಿನಿ ಮುಂತಾದವರು ಹಾಜರಿದ್ದರು.

ನುಂಕೇಶ್ ಪ್ರಾರ್ಥಿಸಿದರು. ಮನೋಹರ ಹೆಗಡೆ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ