ಮದ್ದೂರು:
ಧರಣಿ ಸತ್ಯಾಗ್ರಹ 340ನೇ ದಿನಕ್ಕೆ ಕಾಲಿರಿಸಿದ್ದು, ಈ ವೇಳೆ ಮಾತನಾಡಿದ ರೈತಪರ ಹೋರಾಟಗಾರ್ತಿ ಸುನಂದ ಜಯರಾಮ್, ಸಂವಿಧಾನ ರಚನೆಯಾಗಿ 70 ವರ್ಷಗಳು ಸಂದಿವೆ. ಮಹಾತ್ಮ ಗಾಂಧಿ ಸೇರಿದಂತೆ ಅನೇಕರ ಹಿರಿಯರ ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದರು.
ಸ್ವಾತಂತ್ರ್ಯ ಪ್ರತಿವ್ಯಕ್ತಿಯ ಸ್ವಹಿಚ್ಚಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಡಾ.ಅಂಬೇಡ್ಕರ್ ತಾವು ಹುಟ್ಟಿ ಬೆಳೆದ ರೀತಿ ಮತ್ತು ಅನುಭವ ತೆಗೆದುಕೊಂಡು ಓರ್ವ ಪ್ರಜೆ ಹೇಗೆ ಕಾನೂನಿನ ಚೌಕಟ್ಟಿನಲ್ಲಿ ಬದುಕಬೇಕು ಎನ್ನುವುದನ್ನು ಅಧ್ಯಯನದ ಮೂಲಕ ಸಂವಿಧಾನವನ್ನು ರಚನೆ ಮಾಡಿದ್ದಾರೆ ಎಂದರು.ಮುಖಂಡರಾದ ಜಿ.ಟಿ.ಚಂದ್ರಶೇಖರ್, ಮೋಹನ್, ದೇವೇಗೌಡ, ಜಯರಾಮ್, ಗುರುಮೂರ್ತಿ, ಶಾಂತಮ್ಮ, ಅನುಪಮಾ , ನಾಗಮ್ಮ, ಆಶಾ, ಕೆಂಪಾಚಾರಿ ಮತ್ತಿತರರು ಭಾಗವಹಿಸಿದ್ದರು.ಭಾರತದ ಸಂವಿಧಾನವನ್ನು ವಿಶ್ವದ ಹಲವು ದೇಶಗಳು ಗೌರವಿಸುತ್ತಿವೆ: ಯದುವೀರ್ ಒಡೆಯರ್
ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಬಿಜೆಪಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ತನಾಡಿದರು.ಡಾ.ಅಂಬೇಡ್ಕರ್ ಅವರು ಒಂದು ಜನಾಂಗಕ್ಕೆ ಸೀಮಿತರಲ್ಲದೆ ಪ್ರತಿಯೊಂದು ಜನಾಂಗಕ್ಕೆ ಸೇರಿದವರು. ಅವರು ರಚಿಸಿದ ಸಂವಿಧಾನ ಜ್ಯಾತ್ಯತೀತವಾಗಿ ಪ್ರತಿಯೊಬ್ಬರಿಗೂ ಅಗತ್ಯವಿದೆ. ಅವರ ಸಂವಿಧಾನದಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರೆಯುಯು ವಿಶ್ವಾಸವಿದೆ. ದೇಶ ವಿದೇಶದಲ್ಲೂ ನಮ್ಮ ಸಂವಿಧಾನವನ್ನು ಗೌರವಿಸುವುದರಿಂದ ವಿಶ್ವದಲ್ಲಿ ಭಾರತದ ಸಂವಿಧಾನವೇ ಮಾದರಿಯಾಗಿದೆ ಎಂದರು.