ಕನ್ನಡಪ್ರಭ ವಾರ್ತೆ ಹಲಗೂರು
ಲಯನ್ಸ್ ಕ್ಲಬ್ ಆವರಣದಲ್ಲಿ ಬಿ.ಡಬ್ಲ್ಯೂಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಲಯನ್ಸ್ ಕಣ್ಣು ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಜಿಲ್ಲಾ ಆರೋಗ್ಯ ಇಲಾಖೆ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಮಾತನಾಡಿ , ಹಲಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.
ವೈದ್ಯಾಧಿಕಾರಿ ಎಸ್.ದರ್ಶನ್ ಮಾತನಾಡಿ , ಈ ಶಿಬಿರದಲ್ಲಿ ನಾವು ಸುಮಾರು 75 ಜನರಿಗೆ ಬಿಪಿ ತಪಾಸಣೆ ನಡೆಸಿ ಹಾಗೂ ಕಣ್ಣಿನ ತಪಾಸಣೆ ನಡೆಸಲಾಗಿದೆ. 30 ಜನರಿಗೆ ಅತ್ಯವಶ್ಯಕವಾಗಿ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುವಂತೆ ಸೂಚನೆ ನೀಡಲಾಗಿದೆ ಎಂದರು.ಈ ವೇಳೆ ಕ್ಲಬ್ಬಿನ ಎ.ಎಸ್.ನಾಗೇಶ್,ಡಿ.ವೈ ನಾಗರಾಜು (ಬಾಬು), ಎನ್.ಯೋಗೇಶ್, ಡಿ.ಎಲ್.ಮಾದೇಗೌಡ, ಕೆ. ಶಿವರಾಜು, ಗುರುಸಿದ್ಧು, ಶಿಬಿರದ ಮೇಲ್ವಿಚಾರಕ ನಾಗೇಶ್ ಸೇರಿದಂತೆ ಇತರರು ಇದ್ದರು.ಆರೋಗ್ಯ ತಪಾಸಣಾ ಶಿಬಿರ, ವೃದ್ಧರಿಗೆ ಹಣ್ಣು ಹಂಪಲು ವಿತರಣೆ
ಕಿಕ್ಕೇರಿ ವಿಭಾಗದಯೋಜನೆ ಬಿ.ಸಿ.ಟ್ರಸ್ಟ್ ಯೋಜನಾ ಕಚೇರಿಯಿಂದ ನಡೆದ ಕಾರ್ಯಕ್ರಮದಲ್ಲಿ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಶ್ರೀ ಹೆಗ್ಗಡೆಯವರ ಆಶಯ, ಚಿಂತನೆ ಹಾಗೂ ಸಾಧನೆ ಅಪಾರ ಧರ್ಮಾಧಿಕಾರಿಗಳ ಆಶಯವೇ ಮಾನವೀಯತೆ, ಸೇವೆಯೇ ಧರ್ಮ. ಅವರ ಚಿಂತನೆ ಇಡೀ ಸಮಾಜಕ್ಕೆ ದಾರಿದೀಪ ಎಂದರು.ಗ್ರಾಮಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣದಲ್ಲಿ ಅವರ ಸಾಧನೆ ಅಸಾಧಾರಣ. ಅವರ ಹಾದಿಯಲ್ಲಿ ನಾವು ನಡೆಯಬೇಕು. ವೃದ್ಧರು ನಮ್ಮ ಆಸ್ತಿ. ಅವರನ್ನು ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಈ ಆಶ್ರಮದಲ್ಲಿ ಅವರಿಗೆ ಪ್ರೀತಿ, ಆರೈಕೆ ಸಿಗುತ್ತಿರುವುದು ಸಂತೋಷದ ವಿಷಯ. ಈ ಸೇವಾ ಕಾರ್ಯಗಳು ನಿರಂತರವಾಗಿಲಿ ಎಂದರು.