ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಮಾದಾಪುರ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಪ್ರತಿಜ್ಞಾವಿಧಿ ಬೋಧನೆ ಮಾಡಿ, ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಸಂವಿಧಾನ ದಿನವನ್ನು ರಾಷ್ಟ್ರೀಯ ಕಾನೂನು ದಿನವಾಗಿದೆ ಎಂದರು.
ಈ ಪವಿತ್ರ ಗ್ರಂಥ ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಕೈಬರಹದ ರೂಪದಲ್ಲಿದ್ದು, ಹಾಳಾಗದಂತೆ ಹೀಲಿಯಂ ಕವಚದಲ್ಲಿ ಸಂರಕ್ಷಿಸಿರುವುದು ವಿಶೇಷವಾಗಿದೆ. ಸ್ವಾತಂತ್ರ್ಯ, ಸಮಾನತೆ, ಸೋದರತ್ವ, ವಿಶ್ವಭ್ರಾತೃತ್ವ ಸಾರುವ ಪವಿತ್ರ ಸಂವಿಧಾನದ ಸಾರಅರಿತರೆ ನಮ್ಮದೇಶ ಸುಭದ್ರ, ನೆಮ್ಮದಿಯ ನಾಡಾಗಿ ಸುಂದರ ಬದುಕು ಕಾಣಬಹುದಾಗಿದೆ ಎಂದರು.ಸಂವಿಧಾನದಲ್ಲಿ 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳು ಹಾಗೂ 89 ತಿದ್ದುಪಡಿಗಳಿವೆ. ಸಂವಿಧಾನ ರಚನೆಯಾಗಲು 2 ವರ್ಷ 11ತಿಂಗಳು 18 ದಿನಗಳ ಕಾಲ ತೆಗೆದುಕೊಂಡು ಎಲ್ಲರ ಬಾಳಿನ ಬೆಳಕಾಗಿದೆ ಎಂದು ಹೇಳಿದರು.
ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅಂಬೇಡ್ಕರ್ ಬಲು ದೊಡ್ಡ ಕೊಡುಗೆಯಾಗಿ ನೀಡಿದ್ದು, ಇಡೀ ವಿಶ್ವವೇ ನಮ್ಮ ಸಂವಿಧಾನವನ್ನು ಗೌರವಿಸುತ್ತಿರುವುದು ಹೆಮ್ಮೆಯಾಗಿದೆ ಎಂದು ಶ್ಲಾಘಿಸಿದರು.