ಬಿಜೆಪಿ ರೋಣ ಮಂಡಲ ಮತ್ತು ಎಸ್.ಸಿ.ಮೋರ್ಚಾ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಮಾಟರಂಗಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಗಜೇಂದ್ರಗಡ
ಬಿಜೆಪಿ ರೋಣ ಮಂಡಲ ಮತ್ತು ಎಸ್.ಸಿ.ಮೋರ್ಚಾ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಮಾಟರಂಗಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಕೆ. ಚವ್ಹಾಣ ಮಾತನಾಡಿ, ನ್ಯಾಯ, ಸ್ವಾತಂತ್ರ‍್ಯ, ಸಮಾನತೆ ಮತ್ತು ಸಹೋದರತ್ವದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವುದು ಹಾಗೂ ನಾಗರಿಕರಲ್ಲಿ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು ಸಂವಿಧಾನ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು
ಈ ವೇಳೆ ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುಖಂಡ ಉಮೇಶ ಮಲ್ಲಾಪುರ ಮಾತನಾಡಿ, ಸಂವಿಧಾನ ಸಭೆಯು ೨ ವರ್ಷ, ೧೧ ತಿಂಗಳು, ೧೮ ದಿನಗಳ ಕಾಲ ಶ್ರಮಿಸಿ ೧೯೪೯, ನ. ೨೬ರಂದು ಸಂವಿಧಾನವನ್ನು ಅಂಗೀಕರಿಸಿತು. ಇದು ೧೯೫೦ರ ಜ. ೨೬ರಂದು ಜಾರಿಗೆ ಬಂದಿತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೨೫ನೇ ಜನ್ಮದಿನೋತ್ಸವದ ಸ್ಮರಣಾರ್ಥ, ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರವು ೨೦೧೫ರಿಂದ ನವೆಂಬರ್ ೨೬ ಅನ್ನು ಅಧಿಕೃತವಾಗಿ ಸಂವಿಧಾನ ದಿನ ಎಂದು ಆಚರಿಸಲು ಪ್ರಾರಂಭಿಸಿತು ಎಂದರು.
ಈ ಸಂದರ್ಭ ಶಿವರಾಜ್ ಬಂಡಿ, ಎಸ್.ಸಿ. ಮೋರ್ಚಾ ಅಧ್ಯಕ್ಷ ಭೀಮಪ್ಪ ಮಾದರ, ನೀಲಪ್ಪ ಗುರಿಕಾರ, ಮಹಾಂತೇಶ ಪೂಜಾರ, ಶಂಕ್ರಪ್ಪ ಗುರಿಕಾರ, ಮಾರುತಿ ನಾಯ್ಕರ, ದುರಗಪ್ಪ ಸಂದಿಮನಿ, ಶಿವಕುಮಾರ ಜಾಧವ, ಕುಮಾರ ರಾಠೋಡ, ರಮೇಶ್ ವಕ್ಕರ್ ಸೇರಿ ಇತರರು ಇದ್ದರು.ಇಂದು ಕನ್ನಡ ರಾಜ್ಯೋತ್ಸವ, ಕನಕದಾಸ ಜಯಂತಿ
ಗಜೇಂದ್ರಗಡ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದಿಂದ ೭೧ನೇ ಕನ್ನಡ ರಾಜ್ಯೋತ್ಸವ, ೫೩೯ನೇ ಕನಕದಾಸ ಜಯಂತಿ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಇಲ್ಲಿನ ದುರ್ಗಾ ವೃತ್ತದಲ್ಲಿ ನ.೨೭ರ ಸಂಜೆ ೫.೩೦ಕ್ಕೆ ನಡೆಯಲಿದೆ.ಕರ್ನಾಟಕ ವಿಧಾನಸಭಾ ಅಧ್ಯಕ್ಷ ಜಿ.ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್.ಸೋಂಪುರ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಗಿನೆಲೆ ಶಾಖಾಮಠ ಬಾದಿಮನಾಳದ ಶಿವಸಿದ್ದೇಶ್ವರ ಸ್ವಾಮೀಜಿ, ಮಳೆರಾಜೇಂದ್ರಸ್ವಾಮಿ ಮಠ ಮುರನಾಳದ ಜಗನ್ನಾಥ ಸ್ವಾಮೀಜಿ, ಟಕ್ಕೇದ ದರ್ಗಾದ ಸೈಯದ್ ನಿಜಾಮುದ್ದೀನಶಾ ಅಶ್ರಫಿ ಸಾನಿಧ್ಯ ವಹಿಸಲಿದ್ದು, ವಿಶೇಷ ಆಮಂತ್ರಿತರಾಗಿ ಆನಂದಸ್ವಾಮಿ ಗಡ್ಡದೇವರಮಠ ಸೇರಿ, ವಾಸಣ್ಣ ಕುರಡಗಿ, ಮಿಥುನ ಪಾಟೀಲ, ಅಶೋಕ ಬಾಗಮಾರ, ಸಿದ್ದಣ್ಣ ಬಂಡಿ ಸೇರಿ ಇತರರು ಆಗಮಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.