ಹಾನಗಲ್ಲ: ಬೇಕಾಬಿಟ್ಟಿ ಬೆಲೆ ಏರಿಕೆ, ದುಪ್ಪಟ್ಟು ಕರ ವಸೂಲಿಗೆ ಸೀಮಿತವಾದ ಕಾಂಗ್ರೆಸ್ ಸರ್ಕಾರಕ್ಕೆ ಈ ರಾಜ್ಯದ ಜನತೆಯ ಹಿತ ಕಾಯದೆ ಇರುವುದೇ ದೊಡ್ಡ ಗ್ಯಾರಂಟಿಯಾಗಿದ್ದು, ಬರ ಪರಿಹಾರವಿಲ್ಲ, ಕಬ್ಬು ಬೆಳೆದ ರೈತರ ಹಿತಕ್ಕೆ ನಿಲ್ಲುತ್ತಿಲ್ಲ, ಪರಿಣಾಮವಾಗಿ ಒಂದು ದಿನ ರಾಜ್ಯದಲ್ಲಿ ದಂಗೆಯಾಗುವ ಸ್ಥಿತಿ ನಿರ್ಮಾಣವಾದೀತು ಎಂದು ಬಿಜೆಪಿ ನಾಯಕರು ಎಚ್ಚರಿಸಿದರು.
ಶೀಘ್ರ ಪ್ರತಿ ಗ್ರಾಮ ಪಂಚಾಯಿತಿ, ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ ಜನವಿರೋಧಿ ನೀತಿಯ ವಿರುದ್ಧ ಜಾಗೃತಿ, ಪ್ರತಿಭಟನಾ ಜಾಥಾ ನಡೆಸುತ್ತೇವೆ. ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ಪ್ರತಿಭಟಿಸಿ ಹೋರಾಟ ತೀವ್ರಗೊಳಿಸುವುದಲ್ಲದೆ, ಶಾಸಕರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಒತ್ತಾಯಿಸಿ, ಬೆಲೆ ಏರಿಕೆ ನಿಯಂತ್ರಿಸುವ ಮೂಲಕ ಬಡ ಮಧ್ಯಮ ವರ್ಗದ ಜನತೆಯ ಹಿತ ಕಾಯಬೇಕು ಎಂದು ಒತ್ತಾಯಿಸಿ ತಾಲೂಕು ತಹಸೀಲ್ದಾರ್‌ಗೆ ಮನವಿ ಅರ್ಪಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಕೃಷ್ಣ ಈಳಿಗೇರ, ಶಿವಲಿಂಗಪ್ಪ ತಲ್ಲೂರ, ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ ಮಾತನಾಡಿದರು. ಆನಂದ ಹವಳಣ್ಣನವರ, ನಿಂಗಪ್ಪ ಗೊಬ್ಬೇರ, ಬಿ.ಎಸ್. ಅಕ್ಕಿವಳ್ಳಿ, ರಾಘವೇಂದ್ರ ತಹಸೀಲ್ದಾರ್, ಸಚಿನ ರಾಮಣ್ಣನವರ, ಸಂತೋಷ ಭಜಂತ್ರಿ, ಸಂತೋಷ ಟೀಕೋಜಿ, ನಾಗರಾಜ ಉದಾಸಿ, ಶೋಭಾ ಉಗ್ರಣ್ಣನವರ, ಯೋಗಿನ ಸೊಪ್ಪಿನ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ರಾಮು ಯಳ್ಳೂರ, ಸುನೀಲ ಹಿರೇಮಠ, ಶಿವಾನಂದ ಸಂಗೂರಮಠ, ಮಂಜುನಾಥ ಕೊಂಚೀಗೇರಿ, ಮಿಥುನ, ಬಸು ಹಾದಿಮನಿ, ಸೋಮಶೇಖರ ಕೋತಂಬರಿ, ಈರಣ್ಣ ನಿಂಬಣ್ಣನವರ, ಮಹೇಶ ಬಣಕಾರ, ರಾಜಣ್ಣ ಪಟ್ಟಣದ, ಸುಜಾತಾ ನಂದಿಶೆಟ್ಟರ, ಸುನಿತಾ ಬಳ್ಳಾರಿ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.