ಪ್ರಜಾಪ್ರಭುತ್ವದಡಿಯಲ್ಲಿ ಸಂವಿಧಾನ ದಿನ ಮಹತ್ವದ್ದು: ರಮೇಶ ಪೆದ್ದೆ

KannadaprabhaNewsNetwork |  
Published : Nov 27, 2026, 01:30 AM IST
ಚಿತ್ರ 26ಬಿಡಿಆರ್52 | Kannada Prabha

ಸಾರಾಂಶ

ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ ಎಂದು ಗ್ರೇಡ್ -2 ತಹಶೀಲ್ದಾರ್ ರಮೇಶ ಪೆದ್ದೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಮಲನಗರನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ ಎಂದು ಗ್ರೇಡ್ -2 ತಹಶೀಲ್ದಾರ್ ರಮೇಶ ಪೆದ್ದೆ ಹೇಳಿದರು.ಕಮಲನಗರ ಪಟ್ಟಣದ ಸಿದ್ದರಾಮೇಶ್ವರ ಪದವಿ ಮಹಾವಿದ್ಯಾಲಯ ಬಳಿ ಗುರುವಾರ ತಾಲೂಕು ಆಡಳಿತ, ತಾ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಂವಿಧಾನ ದಿನಾಚರಣೆ ಅಂಗವಾಗಿ ಜಾಥಾಗೆ ಗ್ರೇಡ್ -2 ತಹಶೀಲ್ದಾರ್ ರಮೇಶ ಪೆದ್ದೆ ಚಾಲನೆ ನೀಡಿ ಮಾತನಾಡಿ, ನಮ್ಮ ಸಂವಿ ಧಾನವು ನಮ್ಮೆಲ್ಲರನ್ನೂ ರಕ್ಷಿಸುವ ಬಹುದೊಡ್ಡ ಕಾನೂನು. ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿನಿಂದಲೇ ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕೆಂದರು.ಮಾಜಿ ತಾಪಂ ಅಧ್ಯಕ್ಷ ಶ್ರೀರಂಗ ಪರಿಹಾರ, ನಿವೃತ್ತ ಪ್ರಾಚಾರ್ಯರಾದ ಎಸ್.ಎನ್.ಶಿವಣಕರ ಮಾತನಾಡಿದರು. ಸಂವಿಧಾನ ಜಾಥಾ ಸಿದ್ದರಾಮೇಶ್ವರ ಪದವಿ ಮಹಾವಿದ್ಯಾಲಯದಿಂದ ಪ್ರಾರಂಭವಾಗಿ, ಅಲ್ಲಮ ಪ್ರಭು ವೃತ್ತ, ಸೋನಾಳ ಮುಖ್ಯ ರಸ್ತೆ, ಅತಥಿ ಗೃಹ, ಹಳೆ ಪೊಲೀಸ್ ಸ್ಟೆಷನ್, ಬಸವೇಶ್ವರ ವೃತ್ತ, ಗ್ರಾಮ ಪಂಚಾಯತ ರಸ್ತೆ ಮೂಲಕ ತಹಶೀಲ ಆವರಣಕ್ಕೆ ಬಂದು ತಲುಪಿತು. ಈ ಸಂದರ್ಭದಲ್ಲಿ ಗೋವಿಂದರಾವ ತಾಂದಳೆ, ಅಮೂಲ ಸೂರ್ಯವಂಶಿ, ಜ್ಞಾನೋಬಾ ಕಾಂಬಳೆ, ರವಿ ತಪಶ್ಯಾಳೆ, ಜನಾರ್ಧನ ಸಾವರಗೆಕರ, ಶೆರು ಬಾಗವಾನ, ತಾ.ಪಂ ಇ.ಒ ಹಣಮಂತರಾಯ ಕೌಟಗೆ, ಪಿಡಿಒ ದಿಲೀಪ ಸಂತಪುರೆ, ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕರಾದ ಪಾರ್ವತಿ ಬಾಯಿ ಸ್ವಾಮಿ, ಶ್ರಿಕಾಂತ ರಾಠೊಡ, ಪಟ್ಟಣದ ವಿವಿಧ ಶಾಲೆಯ ಮಕ್ಕಳು, ತಹಶೀಲ ಕಛೇರಿ, ತಾ.ಪಂ ಕಛೇರಿಯ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂವಿಧಾನ ಆಶಯಗಳ ಅರಿತು ಪಾಲಿಸುವುದು ಪ್ರತಿ ಪ್ರಜೆಯ ಕರ್ತವ್ಯ-ನಾಗರಾಜ
ಸಭೆ ಅರ್ಧಕ್ಕೆ ಎದ್ದು ಹೋದ ಟಿ.ಎಂ. ಶಾಹಿದ್ ತೆಕ್ಕಿಲ್