ಕನ್ನಡಪ್ರಭ ವಾರ್ತೆ ಚವಡಾಪುರಜಗತ್ತಿನ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನ ಹೊಂದಿರುವ ದೇಶ ನಮ್ಮದು, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಜೀವಂತವಾಗಿರುವುದೇ ಸಂವಿಧಾನವೆಂಬ ಜೀವಂತ ಗ್ರಂಥದಿಂದ ಎಂದು ಶಾಸಕ ಎಂ.ವೈ ಪಾಟೀಲ್ ಅಭಿಪ್ರಾಯ ಪಟ್ಟರು.
ಪ್ರೊಬೆಷನರಿ ಐಎಎಸ್ ಅಧಿಕಾರಿ ತಾಪಂ ಇಒ ಗಜಾನನ ಬಾಳೆ, ತಹಸೀಲ್ದಾರ ಸಂಜೀವಕುಮಾರ ದಾಸರ್ ಮಾತನಾಡಿ, ನಮಗೆಲ್ಲರಿಗೂ ಭಾರತೀಯರೆನ್ನುವ ಗರ್ವ, ಅಭಿಮಾನ ಹೆಚ್ಚುವಂತೆ ಮಾಡಿದ್ದು ಭಾರತೀಯ ಸಂವಿಧಾನ ಹೀಗಾಗಿ ಸಂವಿಧಾನದ ಆಶಯಕ್ಕೆ ತಕ್ಕಂತೆ ನಾವೆಲ್ಲರೂ ಬದುಕು ಸಾಗಿಸಬೇಕೆಂದು ಹೇಳಿದರು.
ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಅಧಿಕಾರಿಗಳಾದ ವಿಜಯಮಹಾಂತೇಶ ಹೂಗಾರ, ಬಾಬುರಾವ್ ಜ್ಯೋತಿ, ಶಾಂತಪ್ಪ ಜಾಧವ, ಶರಣಬಸಪ್ಪ ಹೊಸಮನಿ, ಹಾಜಿಮಲಂಗ, ಬಾಸು ಚವ್ಹಾಣ, ಮಡಿವಾಳಪ್ಪ ಬಾಗೋಡಿ, ಲಕ್ಷ್ಮೀಕಾಂತ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥೀಗಳು, ಸರ್ಕಾರಿ ಇಲಾಖೆ ಅಧಿಕಾರಿಗಳು, ಪಟ್ಟಣದ ನಾಗರಿಕರು ಇದ್ದರು.