ದೌರ್ಜನ್ಯ ತಡೆಗೆ ಸಂವಿಧಾನ ಅಗತ್ಯ

KannadaprabhaNewsNetwork |  
Published : Jul 21, 2025, 01:30 AM IST
೨೦ಕೆಎಲ್‌ಆರ್-೧ಕೋಲಾರದ ಸುವರ್ಣ ಕನ್ನಡ ಭವನದಲ್ಲಿ ಸಮಾನ ಮನಸ್ಕರ ಸಂಘಟನೆಯಿಂದ ಜಿಲ್ಲಾ ಮಟ್ಟದ ಎರಡು ದಿನ ಸಂವಿಧಾನ ಓದು ಅಧ್ಯಯನ ಶಿಬಿರದ ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಸಂವಿಧಾನ ಬದಲಾಯಿಸಬೇಕು, ಸಂವಿಧಾನದಲ್ಲಿ ಜಾತ್ಯತೀತೆ ತೆಗೆದು ಹಾಕಬೇಕು, ಸಮಾಜವಾದ ತೆಗೆಯಬೇಕೆಂಬ ಇತ್ಯಾದಿಗಳು ಚರ್ಚೆಗಳಾಗುತ್ತಿದೆ, ಆದರೆ ನಾವುಗಳು ಸಂವಿಧಾನ ದಾರಿಯಲ್ಲಿ ಹೋಗಿ ಕುಂದು ಕೊರತೆಗಳನ್ನು ನೀಗಿಸಲು ಸಂವಿಧಾನ ಅಧ್ಯಯನ ಮಾಡಬೇಕು. ಇಡೀ ಜನತೆಗೆ ಸಂವಿಧಾನವನ್ನು ತಲುಪಿಸಬೇಕು.

ಕನ್ನಡಪ್ರಭ ವಾರ್ತೆ ಕೋಲಾರಸಂವಿಧಾನ ಕಳೆದುಕೊಂಡಲ್ಲಿ, ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್‌ರನ್ನು ಕಳೆದುಕೊಂಡಷ್ಟೇ ಅಘಾತಕಾರಿಯಾಗಲಿದೆ, ಸಂವಿಧಾನ ಬಿಟ್ಟುಕೊಟ್ಟಲ್ಲಿ ಇಂದು ಪಂಚಾಂಗ ತಂದಿಡುವ ಸಾಧ್ಯತೆ ಇದೆ. ದೌರ್ಜನ್ಯ, ದಬ್ಬಾಳಿಕೆ, ಜಾತಿಯತೇಗಳನ್ನು ಕೊನೆಗೊಳಿಸಲು ಸಂವಿಧಾನ ಅಗತ್ಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.ನಗರದ ಸುವರ್ಣ ಕನ್ನಡ ಭವನದಲ್ಲಿ ಸಮಾನ ಮನಸ್ಕರ ಸಂಘಟನೆ ಹಮ್ಮಿಕೊಂಡಿದ್ದ ಸಂವಿಧಾನ ಓದು ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿ, ಸಂವಿಧಾನ ಜಾರಿಯಾಗಿ ೭೬ ವರ್ಷಗಳೇ ಕಳೆದಿದ್ದರೂ ಸಹ ಅಲ್ಪಸ್ವಲ್ಪ ಸಾಧನೆ ಮಾಡಿದ್ದೇವೆ. ಇನ್ನು ಜೀವನದಲ್ಲಿ ಮುಂದೆ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು. ಸಂವಿಧಾನ ಬಗ್ಗೆ ಅರಿವು ಮೂಡಿಸಿ

ಸಂವಿಧಾನ ಬದಲಾಯಿಸಬೇಕು, ಸಂವಿಧಾನದಲ್ಲಿ ಜಾತ್ಯತೀತೆ ತೆಗೆದು ಹಾಕಬೇಕು, ಸಮಾಜವಾದ ತೆಗೆಯಬೇಕೆಂಬ ಇತ್ಯಾದಿಗಳು ಚರ್ಚೆಗಳಾಗುತ್ತಿದೆ, ಆದರೆ ನಾವುಗಳು ಸಂವಿಧಾನ ದಾರಿಯಲ್ಲಿ ಹೋಗಿ ಕುಂದು ಕೊರತೆಗಳನ್ನು ನೀಗಿಸಲು ಸಂವಿಧಾನ ಅಧ್ಯಯನ ಮಾಡಬೇಕು. ಇಡೀ ಜನತೆಯನ್ನು ಸಂವಿಧಾನ ತಲುಪಿಸಬೇಕು. ಸಂವಿಧಾನ ರಕ್ಷಿಸುವಂತ ಸಿಪಾಯಿಗಳನ್ನು ಕ್ರೋಡೀಕರಿಸಬೇಕು ಹಾಗಾಗಿ ರಾಜ್ಯ ಪ್ರವಾಸ ಕೈಗೊಂಡು ಪ್ರತಿ ಜಿಲ್ಲೆಯಲ್ಲೂ ಸಂವಿಧಾನದ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಭಾರತದ ಪ್ರತಿಯೊಬ್ಬ ನಾಗರೀಕರು ಸಂವಿಧಾನ ಓದಿದಾಗ ಮಾತ್ರ ಜವಾಬ್ದಾರಿಯುತ ಪ್ರಜೆಯಾಗಲು ಸಾಧ್ಯ ಸಂವಿಧಾನವು ನಮ್ಮನ್ನು ಶಿಸ್ತಿನ ಫಥದಲ್ಲಿ ಸಾಗವಂತೆ ಮಾರ್ಗದರ್ಶನ ತೋರಲಿದೆ. ಮಾನವೀಯ ಮೌಲ್ಯಗಳ ಆದರ್ಶದ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವಂತೆ ಅರಿವುಂಟು ಮಾಡಲಿದೆ ಎಂದು ಹೇಳಿದರು.

ಜಿ.ರಾಜಶೇಖರ ಮೂರ್ತಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಎ.ಮಂಜುನಾಥ್, ರೈತ ಮುಖಂಡ ಪಿ.ಆರ್.ಸೂರ್ಯನಾರಾಯಣ, ಎಸ್‌ಪಿ ಬಿ.ನಿಖಿಲ್, ಜಿ.ಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಹಿರಿಯ ದಲಿತ ಮುಖಂಡ ಟಿ.ವಿಜಯಕುಮಾರ್, ವಕೀಲ ಎಸ್.ಸತೀಶ್, ಶಾಂತಿ ಪ್ರಕಾಶನ ಮುಬಾರಕ್ ಬಗ್ವಾನ್, ಮಹಿಳಾ ವಿಮೋಚನ ಶಾಂತಮ್ಮ ಇದ್ದರು. ಮಂಜುಳ ನಿರೂಪಿಸಿ, ಅರಿವು ಡಾ.ಶಿವಪ್ಪ, ಆದಿಮ ಎನ್.ಗೋವಿಂದಪ್ಪ. ನಾಗರಾಜ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ