ಪ್ರಜಾಪ್ರಭುತ್ವ ಮೌಲ್ಯ ಉತ್ತೇಜಿಸಲು ಸಂವಿಧಾನ ಅವಶ್ಯಕ: ರಾಜಣ್ಣ ನ್ಯಾಮತಿ

KannadaprabhaNewsNetwork |  
Published : Nov 27, 2025, 02:30 AM IST

ಸಾರಾಂಶ

ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ, ವಿಶ್ವದ ಅತ್ಯಂತ ದೊಡ್ಡದಾದುದು. ಇದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಮತ್ತು ಹಕ್ಕುಗಳನ್ನು ನೀಡುವ ಜತೆಗೆ ಪ್ರತಿಯೊಬ್ಬರೂ ಸಮಾನರು ಎಂದು ತಿಳಿಸಿಕೊಡುತ್ತದೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ ಹೇಳಿದರು.

ಬ್ಯಾಡಗಿ: ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರ್ಯದಂತಹ ಮೌಲ್ಯಗಳನ್ನು ಉತ್ತೇಜಿಸಲು ಸಂವಿಧಾನದ ಅವಶ್ಯಕತೆ ಇದೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ ಹೇಳಿದರು.

ಪಟ್ಟಣದ ಬಿಇಎಸ್ ಮಹಾವಿದ್ಯಾಲಯದ ಆಶ್ರಯದಲ್ಲಿ ಧಾರವಾಡದ ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಬ್ಯಾಡಗಿ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ಬ್ಯಾಡಗಿ ಶಿಕ್ಷಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿವಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ, ವಿಶ್ವದ ಅತ್ಯಂತ ದೊಡ್ಡದಾದುದು. ಇದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಮತ್ತು ಹಕ್ಕುಗಳನ್ನು ನೀಡುವ ಜತೆಗೆ ಪ್ರತಿಯೊಬ್ಬರೂ ಸಮಾನರು ಎಂದು ತಿಳಿಸಿಕೊಡುತ್ತದೆ. ಭಾರತ ಸ್ವಾತಂತ್ರ‍್ಯ ಪಡೆದ ನಂತರ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಕರಡು ಸಮಿತಿ ವಿಶ್ವದ ವಿವಿಧ ದೇಶಗಳ ಸಂವಿಧಾನ ಅಧ್ಯಯನ ಮಾಡಿ ಪ್ರತಿಯೊಬ್ಬರೂ ಒಪ್ಪುವ ರೀತಿಯಲ್ಲಿ ರಚಿಸಿ, ಭಾರತಕ್ಕೆ ಒಂದು ಶ್ರೇಷ್ಠವಾದ ಸಂವಿಧಾನ ನೀಡಿದ್ದಾರೆ ಎಂದರು.

ಸಂವಿಧಾನ ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್‌ ಅವರಿಗೆ ನಾವೆಲ್ಲರೂ ಕೃತಜ್ಞರು. 1949ರಲ್ಲಿ ಸಂವಿಧಾನ ಕರಡು ಸಮಿತಿ ಸಾಕಷ್ಟು ಚಿಂತನೆ ನಡೆಸಿ, ಎಲ್ಲರೂ ಒಪ್ಪುವಂತಹ ಸಂವಿಧಾನ ನೀಡಿದೆ. ಅವು ಉಲ್ಲಂಘನೆಗೊಂಡಾಗ ನ್ಯಾಯಾಲಯದ ಮೂಲಕ ನ್ಯಾಯ ದೊರಕಿಸಿಕೊಳ್ಳುವ ಅಧಿಕಾರವನ್ನೂ ನಮಗೆ ನೀಡಿದೆ. ನಾವು ನಮ್ಮ ಹಕ್ಕುಗಳಿಗಿಂತ ನಮ್ಮ ಕರ್ತವ್ಯಗಳನ್ನು ಜವಾಬ್ದಾರಿಯುತ ರೀತಿಯಲ್ಲಿ ಪಾಲಿಸಿದಾಗ ಮಾತ್ರ ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಧಾರವಾಡದ ಕೇಂದ್ರ ಸಂವಹನ ಇಲಾಖೆಯ ಮುರಳೀಧರ ಕಾರಭಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಇಎಸ್ ಕಾಲೇಜು ಪ್ರಾಚಾರ್ಯ ಡಾ. ಎನ್.ಎಸ್. ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಚಾರ್ಯ ಡಾ. ಸುರೇಶಕುಮಾರ ಪಾಂಗಿ, ಡಾ. ಪ್ರಭುಲಿಂಗ ದೊಡ್ಮನಿ, ಪ್ರಶಾಂತ ಜಂಗಳೇರ, ಆರೋಗ್ಯ ಇಲಾಖೆಯ ಎನ್. ಚಂದ್ರಶೇಖರ ಹಾಗೂ ಇನ್ನಿತರರಿದ್ದರು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ