ಸಂವಿಧಾನ ಪ್ರಜಾಪ್ರಭುತ್ವ ರಾಷ್ಟ್ರದ ಆತ್ಮ: ಶಾಂತನಗೌಡ ಅಭಿಮತ ಬಣ್ಣನೆ

KannadaprabhaNewsNetwork | Published : Jan 29, 2025 1:35 AM

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರರು, ನಾಯಕರು, ಸಂವಿಧಾನ ರಚನೆಗೆ ಕೊಡುಗೆ ನೀಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ಸ್ಮರಿಸುವ ಒಂದು ಅವಕಾಶ. ಸಂವಿಧಾನ ಕೇವಲ ದಾಖಲೆಯಾಗಿರದೇ ಪ್ರಜಾಪ್ರಭುತ್ವ ರಾಷ್ಟ್ರದ ಆತ್ಮವಾಗಿದೆ. ಎಲ್ಲರಿಗೂ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯ ಖಾತ್ರಿಪಡಿಸುತ್ತದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದ್ದಾರೆ.

- ನ್ಯಾಮತಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ, ಧ್ವಜವಂದನೆ ಸ್ವೀಕಾರ - - - ಕನ್ನಡಪ್ರಭ ವಾರ್ತೆ ನ್ಯಾಮತಿ

ಸ್ವಾತಂತ್ರ್ಯ ಹೋರಾಟಗಾರರು, ನಾಯಕರು, ಸಂವಿಧಾನ ರಚನೆಗೆ ಕೊಡುಗೆ ನೀಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ಸ್ಮರಿಸುವ ಒಂದು ಅವಕಾಶ. ಸಂವಿಧಾನ ಕೇವಲ ದಾಖಲೆಯಾಗಿರದೇ ಪ್ರಜಾಪ್ರಭುತ್ವ ರಾಷ್ಟ್ರದ ಆತ್ಮವಾಗಿದೆ. ಎಲ್ಲರಿಗೂ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯ ಖಾತ್ರಿಪಡಿಸುತ್ತದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ದಿನ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಭಾರತದ ಮಾನವ ಕುಲದ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನವನ್ನು ಸಮರ್ಪಿಸಿಕೊಳ್ಳುವ ದಿನವನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶದ ಪ್ರಜೆಗಳಾದ ನಾವು ನಮ್ಮ ಸಂವಿಧಾನ ನಮ್ಮ ಹಕ್ಕು ಎಂಬ ಶಿರ್ಷಿಕೆಯಡಿಯಲ್ಲಿ ನಮ್ಮಿಂದ ನಮಗಾಗಿ ದೇಶದ ಸಾರ್ವಭೌಮತ್ವ ಪ್ರತಿಪಾದನೆಗಾಗಿ ಹಾಗೂ ಭರವಸೆ, ಆಶಾವಾದ ನಿರೀಕ್ಷೆಗಳೊಂದಿಗೆ ಬದುಕು ಕಲೆಯನ್ನು ರೂಢಿ ಮಾಡಿಕೊಳ್ಳಬೇಕು. ಭಾರತೀಯರು ವಿವಿಧತೆಯಲ್ಲಿ ಏಕತೆಯನ್ನು ಜಗತ್ತಿಗೆ ಸಾರುತ್ತಿದ್ದೇವೆ. ಸಾಮಾಜಿಕ ನ್ಯಾಯದೊಂದಿಗೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ನೀಡುವ ಧ್ಯೇಯದೊಂದಿಗೆ ಸಾಗುತ್ತಿದ್ದೇವೆ ಎಂದರು.

ರಾಷ್ಟ್ರ ಧ್ವಜಾರೋಹಣವನ್ನು ತಹಸೀಲ್ದಾರ್‌ ಎಚ್‌.ಬಿ. ಗೋವಿಂದಪ್ಪ ನೆರವೇರಿಸಿ ಮಾತನಾಡಿದರು. ಮಾಜಿ ಶಾಸಕ ಡಾ. ಡಿ.ಬಿ.ಗಂಗಪ್ಪ, ಸಾಧು ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಕೋಡಿಕೊಪ್ಪ ಶಿವಪ್ಪ, ಪ.ಪಂ. ಮುಖ್ಯಾಧಿಕಾರಿ ಗಣೇಶ್‌ ರಾವ್‌, ತಾಪಂ ಇಒ ರಾಘವೇಂದ್ರ, ಬೆಸ್ಕಾಂ ಜೆ.ಇ. ಶ್ರೀನಿವಾಸ್‌ ಬಿ.ಕೆ., ನ್ಯಾಮತಿ ಠಾಣೆಯ ಪಿಐ ಎನ್‌.ಎಸ್‌.ರವಿ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕಿಯರು, ಸಿಬ್ಬಂದಿ, ಇಲಾಖಾಧಿಕಾರಿಗಳು, ಸಿಬ್ಬಂದಿ ಇದ್ದರು.

- - - -ಫೋಟೋ:

Share this article