ಧಾರವಾಡ:
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಡಾ. ಸಂತೋಷ ಹಾನಗಲ್ ಅವರು ರಚಿಸಿದ ‘ಸಂವಿಧಾನ ನುಡಿ ಸಂಹಿತೆ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಂವಿಧಾನ ಜನರ ಅಶೋತ್ತರಗಳನ್ನು ಪ್ರತಿಬಿಂಬಿಸುವ ಕೃತಿಯಾಗಿದೆ. ಸಂವಿಧಾನ ರಚಿಸುವ ವೇಳೆ ಭಾಷೆ ಕುರಿತಾದ ಹೇಳಿಕೆಗಳು ದೇಶದ ಏಕತೆ ಹಾಗೂ ಸಮಗ್ರತೆಯನ್ನು ಗೌರವಿಸುತ್ತವೆ. ಭಾಷಾ ವಿಷಯದಲ್ಲಿ ಸಂವಿಧಾನ ರಚನಾ ಸಮಿತಿಯು ಬಹಳ ಜಾಗೃತಿಯಿಂದ ಎಲ್ಲಿಯೂ ಸಮಸ್ಯೆ ಸೃಷ್ಟಿಯಾಗದಂತೆ ರಚಿಸಿದ್ದಾರೆ ಎಂದರು.ಕೃತಿ ಪರಿಚಯಿಸಿದ ಡಾ. ಪ್ರಜ್ಞಾ ಮತ್ತಿಹಳ್ಳಿ, ಭಾರತದ ಸಂವಿಧಾನವು ಒಂದು ಸಮಗ್ರ ದಾಖಲೆಯಾಗಿದೆ. ನಮ್ಮ ಸಂವಿಧಾನ ಮುತ್ಸದ್ಧಿಗಳು ಸಂವಿಧಾನ ರಚಿಸುವಾಗ ಎಲ್ಲಿಯೂ ಭಾಷೆಗೆ ಸಂಬಂಧಿಸಿದ ಗೊಂದಲ ಸೃಷ್ಟಿಗೆ ಅವಕಾಶ ನೀಡಿಲ್ಲ. ಈ ಕೃತಿ ಸಮಷ್ಠಿ ಪ್ರಜ್ಞೆಯಿಂದ ರಚಿತವಾಗಿದೆ. ವಿವಿಧತೆಯಲ್ಲಿ ಏಕತೆ ತಂದು ಸೌಹಾರ್ದಯುತವಾದ ಜೀವನ ನಡೆಸುವಂತೆ ಚರ್ಚೆ ಮಾಡಿಯೇ ಸಂವಿಧಾನ ರಚಿಸಿದ್ದಾರೆ. ಡಾ. ಸಂತೋಷ ಹಾನಗಲ್ ಅವರ ಈ ಕೃತಿ ಮುಂದಿನ ತಲೆಮಾರಿನವರಿಗೆ ಅಮೂಲ್ಯವಾದುದಾಗಿದೆ ಎಂದರು.
ಪ್ರಾಧ್ಯಾಪಕರಾದ ಡಾ. ಸಣ್ಣವೀರಣ್ಣ ದೊಡಮನಿ ಅವರು, ಹಾನಗಲ್ ಓರ್ವ ಸೃಜನಶೀಲ ಬರಹಗಾರರು. ಅತ್ಯುತ್ತಮ ಸಂಶೋಧಕರಲ್ಲೊಬ್ಬರು. ಅವರ ಸಂವಿಧಾನ ನುಡಿ ಸಂಹಿತೆ ಮನೋಜ್ಞವಾಗಿ ರಚನೆಯಾಗಿದೆ ಎಂದು ಹೇಳಿ ಕವನ ವಾಚಿಸಿದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ವಿಶ್ವೇಶ್ವರಿ ಹಿರೇಮಠ, ಸಿ.ಕೆ. ನಾವದಗಿ, ಶ್ರೀಕಾಂತ ದಳವಾಯಿ, ಎಸ್.ಜಿ. ಪಾಟೀಲ ಸೇರಿದಂತೆ ಮುಂತಾದವರಿದ್ದರು.