ತುರುವೇಕೆರೆ: ತಾಲೂಕಿನ ಮಾಯಸಂದ್ರದಲ್ಲಿ ನೂತನವಾಗಿ ಬಸ್ ಸ್ಟ್ಯಾಂಡ್ ಮತ್ತು ಪೊಲೀಸ್ ಠಾಣೆಯನ್ನು ನಿರ್ಮಿಸಿಕೊಡುವಂತೆ ತಾಲೂಕು ರೈತಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರನ್ನು ಒತ್ತಾಯಿಸಿದರು.
ತುರುವೇಕೆರೆ: ತಾಲೂಕಿನ ಮಾಯಸಂದ್ರದಲ್ಲಿ ನೂತನವಾಗಿ ಬಸ್ ಸ್ಟ್ಯಾಂಡ್ ಮತ್ತು ಪೊಲೀಸ್ ಠಾಣೆಯನ್ನು ನಿರ್ಮಿಸಿಕೊಡುವಂತೆ ತಾಲೂಕು ರೈತಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರನ್ನು ಒತ್ತಾಯಿಸಿದರು.
ತಾಲೂಕಿನ ಮಾಯಸಂದ್ರಕ್ಕೆ ಬರ ಅಧ್ಯಯನಕ್ಕೆಂದು ಆಗಮಿಸಿದ್ದ ವೇಳೆ ಪರಮೇಶ್ವರ್ ರವರನ್ನು ಭೇಟಿ ಮಾಡಿದ ಸಂಘದ ಅಧ್ಯಕ್ಷ ಕಣಕೂರು ಚಂದ್ರಶೇಖರ್ ರವರ ನೇತೃತ್ವದ ನಿಯೋಗ ಮನವಿ ಪತ್ರವನ್ನು ನೀಡಿತು. ಮಾಯಸಂದ್ರ ಹೋಬಳಿ ಕೇಂದ್ರವಾಗಿದೆ. ಮೈಸೂರು ಸೇರಿದಂತೆ ವಿವಿಧೆಡೆಯಿಂದ ಪ್ರತಿದಿನ ಸಾವಿರಾರು ವಾಹನಗಳು ಬರುತ್ತವೆ. ಇಲ್ಲಿ ಸೂಕ್ತವಾದ ಬಸ್ ನಿಲ್ದಾಣವಿಲ್ಲ. ಇಲ್ಲಿಯ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಸೂಕ್ತ ಜಾಗವಿದೆ. ಆದರೆ ಅದನ್ನು ಕೆ ಎಸ್ ಆರ್ ಟಿ ಸಿ ಯವರಿಗೆ ನೀಡಿದರೆ ಪಂಚಾಯ್ತಿಗೆ ಬರುವ ಆದಾಯ ಇಲ್ಲದಾಗುತ್ತದೆ ಎಂಬ ಕಾರಣಕ್ಕೆ ಜಾಗ ನೀಡಲು ಪಂಚಾಯ್ತಿ ತಯಾರಿಲ್ಲ. ಆದರೆ ಬೇರೆ ಇಲಾಖೆಯ ಜಮೀನಿದೆ. ಅಲ್ಲೇ ಒಂದು ಬಸ್ ನಿಲ್ದಾಣದಂತೆ ವ್ಯವಸ್ಥೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಕಣಕೂರು ಚಂದ್ರಶೇಖರ್ ಉಪ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಪ್ರಮುಖ ಹೋಬಳಿ ಕೇಂದ್ರವಾಗಿರುವ ಮಾಯಸಂದ್ರ ಬೆಳೆಯುತ್ತಲೇ ಇದೆ. ಹಲವಾರು ಅಪರಾಧ ಕೃತ್ಯಗಳು ನಡೆಯುತ್ತಲೇ ಇದೆ. ಹಾಗಾಗಿ ಇಲ್ಲೇ ಸೂಕ್ತ ಪೊಲೀಸ್ ಕಟ್ಟಡ ನಿರ್ಮಾಣ ಮಾಡಿ ಸೂಕ್ತ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಈ ವೇಳೆ ರೈತಸಂಘದ ಹಲವಾರು ಮುಖಂಡರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.